Advertisement

ಸ್ಯಾಟಲೈಟ್‌ ಸಂಪರ್ಕ ಫೋನ್‌? ಗೂಗಲ್‌, ಕ್ವಾಲ್ಕಾಂ ಕಂಪೆನಿ ಫೋನ್‌ಗಳಲ್ಲಿ ವ್ಯವಸ್ಥೆ ಸಾಧ್ಯತೆ

11:44 PM Sep 05, 2022 | Team Udayavani |

ಹೊಸದಿಲ್ಲಿ: ಸದ್ಯದಲ್ಲೇ ಸ್ಯಾಟಲೈಟ್‌ ಸಂಪರ್ಕ ವಿರುವ ಫೋನ್‌ಗಳನ್ನು ಹೊಂದುವ ಅವಕಾಶ ಒದಗಿಬರಲಿದೆಯೇ?

Advertisement

ಹೌದು ಎನ್ನುತ್ತಿವೆ ಮೂಲಗಳು. ಇದೇ ತಿಂಗಳು ಬಿಡುಗಡೆಯಾಗಲಿರುವ ಆ್ಯಪಲ್‌ ಕಂಪನಿಯ ಐಫೋನ್‌ 14 ಪ್ರೋ ಸ್ಯಾಟಲೈಟ್‌ ಕನೆಕ್ಟಿವಿಟಿ ಹೊಂದಿರುತ್ತದೆ ಎಂದು ಹೇಳಲಾಗಿದೆ.

ಆ್ಯಪಲ್‌ನಂತಹ ಕಂಪೆನಿಗಳು ತಮ್ಮ ಫೋನ್‌ಗಳಲ್ಲಿ ಸ್ಯಾಟಲೈಟ್‌ ಕನೆಕ್ಟಿವಿಟಿ ಫೀಚರ್‌ಗಳನ್ನು ಪರಿಚಯಿಸಲಿದೆ ಎಂಬ ಸುದ್ದಿಗಳು ಕಳೆದ ಕೆಲವು ವರ್ಷಗಳಿಂದಲೂ ಹರಿದಾಡುತ್ತಲೇ ಇತ್ತು. 2021ರ ಸರಣಿಯ ಐಫೋನ್‌ 13 ಬಂದಾಗಲೂ ಇಂಥದ್ದೇ ಗಾಳಿ ಸುದ್ದಿ ಹರಡಿತ್ತು. ಆದರೆ, ಅದಕ್ಕಾಗಿ ಕಾದವರಿಗೆ ನಿರಾಸೆ ಉಂಟಾಗಿತ್ತು. ಆದರೆ, ಈಗ ಐಫೋನ್‌ 14 ಪ್ರೊನಲ್ಲಿ ಈ ಫೀಚರ್‌ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ಗೂಗಲ್‌ನ ಆ್ಯಂಡ್ರಾಯ್ಡ ಮುಖ್ಯಸ್ಥರು ಕೂಡ 2023ರಲ್ಲಿ ಬಿಡು ಗಡೆಯಾಗುವ ಆ್ಯಂಡ್ರಾಯ್ಡ 14ನಲ್ಲಿ ಸ್ಯಾಟಲೈಟ್‌ ಕನೆಕ್ಟಿವಿಟಿ ಕೊಡುವುದಾಗಿ ಹೇಳಿದ್ದಾರೆ. ಸದ್ಯ ಬರ್ಲಿನ್‌ ನಲ್ಲಿ ನಡೆಯುತ್ತಿರುವ ಇಂಟರ್‌ನ್ಯಾಶನಲ್‌ ಫ‌ುಂಕಾಸ್ಟೆಲಂಗ್‌ ಬರ್ಲಿನ್‌ ಸಮ್ಮೇಳನದಲ್ಲಿ ಕ್ವಾಲ್ಕಾಂ ಕೂಡ ಸ್ನ್ಯಾಪ್‌ಡ್ರ್ಯಾಗನ್‌ ಮೋಡೆಮ್‌ ಸೀರಿಸ್‌ನ ಫೋನ್‌ಗಳಲ್ಲಿ ಇಂಥ ವ್ಯವಸ್ಥೆ ಇರಲಿರುವುದನ್ನು ಖಚಿತಪಡಿಸಿದೆ.

ಒಟ್ಟಿನಲ್ಲಿ ಮುಂಬರುವ ಪ್ರೀಮಿಯಂ ಫೋನ್‌ಗಳು ಎಲ್‌ಇಒ(ಭೂಮಿಯ ಕೆಳ ಕಕ್ಷೆಯಲ್ಲಿರುವ) ಉಪಗ್ರಹಗಳೊಂದಿಗೆ ಸಂವಹನ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಇದರಿಂದಾಗಿ, ತುರ್ತು ಪರಿಸ್ಥಿತಿಗಳಲ್ಲಿ ಉದಾಹರಣೆಗೆ, ಯಾವುದಾದರೂ ನೆಟ್‌ವರ್ಕ್‌ ಇಲ್ಲದ ಪರ್ವತ ಪ್ರದೇಶ, ಕಣಿವೆ ಅಥವಾ ಕುಗ್ರಾಮಗಳಲ್ಲಿ ಸಿಲುಕಿಕೊಂಡಾಗ ಅದು ನಿಮ್ಮ ಸಹಾಯಕ್ಕೆ ಬರುತ್ತದೆ. ಸೆ.7ರಂದು ಐಫೋನ್‌ 14 ಪ್ರೋ ಬಿಡುಗಡೆ ಯಾಗಲಿದ್ದು, ಕಂಪನಿಯು ಗ್ರಾಹಕರಿಗೆ ಯಾವ ರೀತಿಯ ಸರ್‌ಪ್ರೈಸ್‌ ನೀಡಲಿದೆ ಎಂದು ಕಾದು ನೋಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next