Advertisement

ಕ್ಷುದ್ರಗ್ರಹವೊಂದರ ಅವಶೇಷವನ್ನು ಹೊತ್ತು ಭೂಮಿಯತ್ತ ಮರಳುತ್ತಿದೆ ಒಸಿರಿಸ್‌-ರೆಕ್ಸ್‌

03:06 AM May 12, 2021 | Team Udayavani |

ಕೇಪ್‌ ಕೆನಾವರೆಲ್‌: ಕ್ಷುದ್ರಗ್ರಹವೊಂದರ ಅವಶೇಷವನ್ನು ಹೊತ್ತುಕೊಂಡು ನಾಸಾದ ಬಾಹ್ಯಾಕಾಶನೌಕೆಯು ಭೂಮಿಯತ್ತ ಪ್ರಯಾಣ ಆರಂಭಿಸಿದೆ.

Advertisement

ಒಸಿರಿಸ್‌-ರೆಕ್ಸ್‌ ಬಾಹ್ಯಾಕಾಶ ನೌಕೆ ಭೂಮಿ ತಲುಪಲು ಇನ್ನು 2 ವರ್ಷಗಳು ಬೇಕು. 2018ರಲ್ಲಿ ಈ ನೌಕೆಯು “ಬೆನ್ನು’ ಎಂಬ ಹೆಸರಿನ ಕ್ಷುದ್ರಗ್ರಹವನ್ನು ತಲುಪಿತ್ತು. ಅನಂತರ ಎರಡು ವರ್ಷಗಳ ಕಾಲ ಆ ಕ್ಷುದ್ರಗ್ರಹದ ಸುತ್ತಲೂ ಹಾರುತ್ತಾ, ಕೊನೆಗೆ ಅದರ ಮೇಲ್ಮೆ„ನಲ್ಲಿನ ಅವಶೇಷವೊಂದನ್ನು ಸಂಗ್ರಹಿಸಿತ್ತು. ಈ ಅವಶೇಷವು ಸುಮಾರು 200 ಗ್ರಾಂ.ನಿಂದ 400 ಗ್ರಾಂ. ತೂಕ ಹೊಂದಿದೆ ಎಂದು ಅಂದಾಜಿಸಲಾಗಿದೆ.

ಈಗ ಅವಶೇಷವನ್ನು ತನ್ನೊಂದಿಗೆ ಹೊತ್ತು ಒಸಿರಿಸ್‌-ರೆಕ್ಸ್‌ ನೌಕೆಯು ಭೂಮಿಯತ್ತ ಪಯಣ ಶುರು ಮಾಡಿದ್ದು, ಈಗಾಗಲೇ ಕ್ಷುದ್ರಗ್ರಹದಿಂದ 300 ಕಿ.ಮೀ. ದೂರ ತಲುಪಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next