Advertisement

ನಿಷೇಧವಿದ್ದರೂ ಅನುಮಾನಕ್ಕೆ ಎಡೆ ಮಾಡಿದ ಸ್ಯಾಟಲೈಟ್‌ ಫೋನ್‌ ಬಳಕೆ!

09:57 AM Nov 29, 2022 | |

ಉಡುಪಿ : ಉಗ್ರ ಮಹಮ್ಮದ್‌ ಶಾರೀಕ್‌ ಪೊಲೀಸರ ಬಲೆಗೆ ಬೀಳುತ್ತಿದ್ದಂತೆ ಆತನ ಚಲನವಲನಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಮೊಬೈಲ್‌ ಲೊಕೇಷನ್‌ ಆಧಾರದಲ್ಲಿ ಕರಾವಳಿಯಾದ್ಯಂತ ಆತ ಸಂಚರಿಸಿದ್ದ ಸ್ಥಳಗಳಲ್ಲಿ ಹೆಚ್ಚಿನ ತಪಾಸಣೆ ಮುಂದುವರಿದಿದೆ. ದೇಶದಲ್ಲಿ ಸ್ಯಾಟಲೈಟ್‌ ಫೋನ್‌ಗೆ ನಿಷೇಧ ಹೇರಿದ್ದರೂ ಕರಾವಳಿಯಲ್ಲಿ ಸದ್ದು ಕೇಳಿಬರುತ್ತಿರು ವುದು ಹಲವು ಅನುಮಾನ ಗಳಿಗೆ ಎಡೆ ಮಾಡಿದೆ.

Advertisement

ಕರೆ ಹೋಗಿದೆ ಎನ್ನಲಾಗುತ್ತಿರುವ ದ.ಕ. ಜಿಲ್ಲೆಯ ಬಂಟ್ವಾಳ ಬಳಿಯ ಕಕ್ಕಿಂಜೆ ಅರಣ್ಯ ಪ್ರದೇಶ, ಬೆಳ್ತಂಗಡಿ ಬೆಂದ್ರಾಳದ ಬಾರೆ, ಮಂದಾರ್ತಿ ದೇವಸ್ಥಾನದಿಂದ 2 ಕಿ.ಮೀ. ದೂರದಲ್ಲಿ ರುವ ಸದ್ಗುರು ಗೇರುಬೀಜ ಕಾರ್ಖಾನೆಯ ಬಳಿ ಆಂತರಿಕ ಭದ್ರತಾ ವಿಭಾಗ ಪರಿಶೀಲನೆ ನಡೆಸಿದೆ. ಆದರೆ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.

ನೌಕಾಯಾನದಲ್ಲಿ ಬಳಕೆ!
ಇರಿಡಿಯಂ, ಇನ್‌ಮರ್‌ಸ್ಯಾಟ್‌, ತುರಾಯ, ಗ್ಲೋಬರ್‌ ಸ್ಟಾರ್‌ ಹೆಸರಿನ ಸ್ಯಾಟಲೈಟ್‌ ಫೋನ್‌ಗಳು ವಿದೇಶದಲ್ಲಿ ಹೆಚ್ಚಾಗಿ ಬಳಕೆಯಲ್ಲಿವೆ. ಇದರ ಬಳಕೆ ಬಹು ದುಬಾರಿ. ನೌಕಾಯಾನದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಭಾರತದ ಗಡಿಗೆ ಬಂದ ಬಳಿಕ ಬಳಸುವಂತಿಲ್ಲ. ಬಳಸಿದರೆ ಅದರ ಮಾಹಿತಿಗಳು ಆಂತರಿಕ ಭದ್ರತಾ ವಿಭಾಗಕ್ಕೆ ರವಾನೆಯಾಗುತ್ತವೆ.

ಕರಾವಳಿ ಕಾವಲು ಪಡೆಯಲ್ಲಿ ಬಳಕೆ ಇಲ್ಲ
ಕರಾವಳಿ ಕಾವಲು ಪಡೆಯ ಆಂತರಿಕ ಸಂವಹನಕ್ಕೆ ಅವರದ್ದೇ ಆದ ಸಾಫ್ಟ್ ವೇರ್‌ ಇದೆ. ಯಾವುದೇ ಕಾರಣಕ್ಕೂ ಸ್ಯಾಟಲೈಟ್‌ ಫೋನ್‌ಗಳನ್ನು ಬಳಕೆ ಮಾಡುವಂತಿಲ್ಲ. ನೌಕೆಗಳ ಆಗಮನ, ನಿರ್ಗಮನದ ವೇಳೆಯೂ ಈ ಬಗ್ಗೆ ಗಮನ ನೀಡಲಾಗುತ್ತದೆ. ಗಡಿಭಾಗದಲ್ಲಿ ಉಪಯೋಗಿಸಿದರೂ ಕ್ಷಣಾರ್ಧದಲ್ಲಿ ಆಂತರಿಕ ಭದ್ರತಾ ವಿಭಾಗದ ಮೂಲಕ ನಮಗೆ ಮಾಹಿತಿ ಲಭಿಸುತ್ತದೆ ಎನ್ನುತ್ತಾರೆ ಕರಾವಳಿ ಕಾವಲು ಪಡೆಯ ವರಿಷ್ಠಾಧಿಕಾರಿಗಳು.

ಕಾನೂನು ಬಾಹಿರ
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಭಾರತದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಯನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಅದರಲ್ಲಿಯೂ ತುರಾಯ ಹಾಗೂ ಇರಿಡಿಯಂ ಸ್ಯಾಟಲೈಟ್‌ ಫೋನ್‌ಗಳ ಬಳಕೆ ಕಾನೂನು ಬಾಹಿರ ಎಂದು ಘೋಷಿಸಲಾಗಿದೆ. ಭಾರತಕ್ಕೆ ತರುವುದಕ್ಕೂ ನಿಷೇಧವಿದೆ. ತಂದವರನ್ನು ಬಂಧಿಸಲಾಗುತ್ತದೆ. ಇಷ್ಟೆಲ್ಲ ಇದ್ದರೂ ಕರಾವಳಿಯಲ್ಲಿ ಅವುಗಳ ಬಳಕೆ ಚರ್ಚೆಗೆ ಗ್ರಾಸವಾಗಿದೆ.

Advertisement

ಇದನ್ನೂ ಓದಿ: ಅಮೇರಿಕಾದ ಓಝಾರ್ಕ್ಸ್ ಸರೋವರದಲ್ಲಿ ಮುಳುಗಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು

Advertisement

Udayavani is now on Telegram. Click here to join our channel and stay updated with the latest news.

Next