Advertisement

ಸರ್ಕಾರಿ ಶಾಲೆ ಸುತ್ತ ಮತ್ತೊಂದು ಚಿತ್ರ !

02:42 PM Mar 09, 2023 | Team Udayavani |

ಸರ್ಕಾರಿ ಶಾಲೆಯ ಸುತ್ತ ನಡೆಯುವ ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾಹಂದರ ಇಟ್ಟುಕೊಂಡು ನಿರ್ಮಾಣವಾಗುತ್ತಿರುವ “ಸರ್ಕಾರಿ ಶಾಲೆ ಹೆಚ್‌ 8′ ಚಿತ್ರದ ಟೈಟಲ್‌ ಲಾಂಚ್‌ ಇತ್ತೀಚೆಗೆ ನಡೆಯಿತು.

Advertisement

ರಾಘವೇಂದ್ರ ರಾಜ್‌ಕುಮಾರ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗುಣ ಎನ್ನುವವರು ಈ ಸಿನಿಮಾದ ನಿರ್ದೇಶನದ ಜೊತೆಗೆ ನಾಯಕರಾಗಿ ನಟಿಸುತ್ತಿದ್ದಾರೆ.

“ನಮ್ಮ ಚಿತ್ರದ ಒಂದು ಲೈನ್‌ ಕಥೆಯನ್ನು ರಾಘಣ್ಣ ಅವರಿಗೆ ಹೇಳಿದಾಗ ತುಂಬಾ ಚೆನ್ನಾಗಿದೆ ಎಂದು ಇಷ್ಟಪಟ್ಟರು. ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಅವರು ನಿರ್ವಹಿಸುತ್ತಿದ್ದು, ಅವರೇ ಟೈಟಲ್‌ ಲಾಂಚ್‌ ಮಾಡಿಕೊಟ್ಟರು’ ಎಂದು ಚಿತ್ರದ ಬಗ್ಗೆ ಹೇಳಿದರು ಗುಣ. ಚಿತ್ರೀಕರಣ ಮೇನಿಂದ ಆರಂಭವಾಗಲಿದ್ದು, ಶಿವಮೊಗ್ಗ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಸುತ್ತ 60 ದಿನಗಳ ಕಾಲ ಚಿತ್ರೀಕರಣ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ. ಚಿತ್ರವನ್ನು ಶ್ರೀನಾಥ್‌ ಮತ್ತು ಇಂದುಧರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣ್‌ ಕುಮಾರ್‌ ಬಿ. ಮತ್ತು ಹೇಮಂತ್‌ ಬಿ.ವಿ ಸಂಭಾಷಣೆ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next