Advertisement
ಫಿಟ್‌ನೆಸ್ ಅರಿವು ಮೂಡಲಿಈ ಸಂದರ್ಭ ಮಾತನಾಡಿದ ಸಂಯೋಜಕ ರಾಜೇಶ್, ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳುವ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವ್ಯಾಯಾಮ ಮಾಡುವ ಸಂದರ್ಭ ಅದಕ್ಕೆ ತಕ್ಕುದಾದ ಬಟ್ಟೆಗಳನ್ನು ಮಾತ್ರವೇ ಧರಿಸಬೇಕು ಎನ್ನುವ ಭಾವನೆ ಕೆಲವು ಮಹಿಳೆಯರಲ್ಲಿರುತ್ತದೆ. ಈ ಡ್ರೆಸ್ ಗಳನ್ನು ತೊಡಬೇಕಲ್ಲ ಎಂಬ ಕಾರಣಕ್ಕೆ ಮಹಿಳೆಯರು ನಡೆ ಮತ್ತು ಓಟದತ್ತ ಮುಖ ಮಾಡುತ್ತಿಲ್ಲ. ಇನ್ನೂ ಕೆಲವರಿಗೆ ಆಸಕ್ತಿ ಇದೆಯಾದರೂ ಸಾಂಪ್ರದಾಯಿಕ ಭಾವನೆಗಳು ಅವರನ್ನು ತಡೆಯುತ್ತಿವೆ. ಆದರೆ ಇವು ಅವರನ್ನು ಫಿಟ್‌ನೆಸ್‌ನಿಂದಲೇ ದೂರವಿಡುತ್ತವೆ. ಅವರಲ್ಲಿ ಫಿಟ್‌ನೆಸ್ ಕುರಿತು ಅರಿವು ಮೂಡಿಸಲು ಸೀರೆ ನಡೆ, ಓಟ ಆಯೋಜಿಸಿದ್ದೇವೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 650 ಮಂದಿ ನೋಂದಣಿ ಮಾಡಿಕೊಂಡಿದ್ದರು. ಇವತ್ತು 500 ಮಂದಿ ಭಾಗವಹಿಸಿದ್ದಾರೆ ಎಂದು ಹೇಳಿದರು.