Advertisement

ಇರಾನಿ ಕಪ್‌ ಕ್ರಿಕೆಟ್‌; ಮೊದಲ ದಿನವೇ ಸೌರಾಷ್ಟ್ರ ಸುಸ್ತು

10:44 PM Oct 01, 2022 | Team Udayavani |

ರಾಜ್‌ಕೋಟ್‌: “ಇರಾನಿ ಕಪ್‌’ ಕ್ರಿಕೆಟ್‌ ಪಂದ್ಯದ ಮೊದಲ ದಿನವೇ ಸೌರಾಷ್ಟ್ರ ಸುಸ್ತು ಹೊಡೆದಿದೆ. ಶೇಷ ಭಾರತ (ರೆಸ್ಟ್‌ ಆಫ್ ಇಂಡಿಯಾ) ಅಮೋಘ ಹಿಡಿತ ಸಾಧಿಸಿದೆ.

Advertisement

ತವರಿನಂಗಳದಲ್ಲಿ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ಜೈದೇವ್‌ ಉನಾದ್ಕತ್‌ ಸಾರಥ್ಯದ ಸೌರಾಷ್ಟ್ರ ಜುಜುಬಿ 98 ರನ್ನಿಗೆ ಕುಸಿಯಿತು. ಶೇಷ ಭಾರತ ಆರಂಭಿಕ ಕುಸಿತದಿಂದ ಅಮೋಘ ರೀತಿಯಲ್ಲಿ ಚೇತರಿಸಿ ಕೊಂಡು 3 ವಿಕೆಟಿಗೆ 205 ರನ್‌ ಪೇರಿಸಿ ಬೃಹತ್‌ ಮುನ್ನಡೆಯ ಸೂಚನೆ ನೀಡಿದೆ.

ಸಫ‌ìರಾಜ್‌ ಖಾನ್‌ 125 ರನ್‌ ಹಾಗೂ ನಾಯಕ ಹನುಮ ವಿಹಾರಿ 62 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 18 ರನ್ನಿಗೆ 3 ವಿಕೆಟ್‌ ಬಿದ್ದಾಗ ಇವರಿಬ್ಬರು ಜತೆಯಾಗಿದ್ದರು. ಮುರಿಯದ 4ನೇ ವಿಕೆಟಿಗೆ 187 ರನ್‌ ಪೇರಿಸಿ ಮುನ್ನುಗ್ಗಿದ್ದಾರೆ.

ತ್ರಿವಳಿ ವೇಗಿಗಳಾದ ಮುಕೇಶ್‌ ಕುಮಾರ್‌ (23ಕ್ಕೆ 4), ಉಮ್ರಾನ್‌ ಮಲಿಕ್‌ (25ಕ್ಕೆ 3) ಮತ್ತು ಕುಲದೀಪ್‌ ಸೇನ್‌ (41ಕ್ಕೆ 3) ಸೌರಾಷ್ಟ್ರದ ಮೇಲೆ ಘಾತಕವಾಗಿ ಎರಗಿದರು. ಮೊದಲ ಐವರಿಂದ ಒಟ್ಟುಗೂಡಿದ್ದು ಕೇವಲ 7 ರನ್‌. ಇದರಲ್ಲಿ ಇಬ್ಬರದ್ದು ಶೂನ್ಯ ಸಂಪಾದನೆ. ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಒಂದೇ ರನ್ನಿಗೆ ಔಟ್‌. ಧರ್ಮೇಂದ್ರ ಜಡೇಜ ಸರ್ವಾಧಿಕ 28, ಅರ್ಪಿತ್‌ ವಸವಾಡ 22 ರನ್‌ ಮಾಡಿದರು.

ಸಿಡಿದು ನಿಂತ ಸರ್ಫರಾಜ್
ಶೇಷ ಭಾರತ ಅಭಿಮನ್ಯು ಈಶ್ವರನ್‌ (0), ಮಾಯಾಂಕ್‌ ಅಗರ್ವಾಲ್‌ (11) ಮತ್ತು ಯಶ್‌ ಧುಲ್‌ (5) ಅವರನ್ನು ಅಗ್ಗಕ್ಕೆ ಕಳೆದುಕೊಂಡಿತು. ಬಳಿಕ ವಿಹಾರಿ ಕಪ್ತಾನನ ಆಟವಾಡಿದರು.

Advertisement

ಸರ್ಫರಾಜ್ ಮುನ್ನುಗ್ಗಿ ಹೋದರು. ಅವರ 125 ರನ್‌ ಕೇವಲ 126 ಎಸೆತಗಳಲ್ಲಿ ಬಂದಿದೆ. ಸಿಡಿಸಿದ್ದು 19 ಬೌಂಡರಿ ಹಾಗೂ 2 ಸಿಕ್ಸರ್‌. ವಿಹಾರಿ 145 ಎಸೆತ ನಿಭಾಯಿಸಿ ನಿಂತಿದ್ದಾರೆ. 63 ರನ್ನಿನಲ್ಲಿ 9 ಫೋರ್‌, ಒಂದು ಸಿಕ್ಸರ್‌ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next