ಚಿಕ್ಕಮಗಳೂರು: ಸಂವಿಧಾನಿಕ ಹುದ್ದೆಯಾದ ವಿಧಾನಸಭಾಧ್ಯಕ್ಷರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿ ಚಿಕ್ಕಮಗಳೂರಿನ ಶ್ರೀರಾಮಸೇನೆ ಮುಖಂಡನ ವಿರುದ್ದ ದೂರು ನೀಡಲಾಗಿದೆ.
Advertisement
ಪ್ರೀತೇಶ್ ಎಂಬ ಯುವಕ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಹೀಗಾಗಿ ಕಾಂಗ್ರೆಸ್ ಐಟಿ ಸೆಲ್ ನಿಂದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ.
ಕೋಮುದ್ವೇಷ ಹಾಗೂ ಜನಾಂಗದ ನೋವಿಗೆ ಕಾರಣ ಎಂದು ದೂರು ನೀಡಲಾಗಿದ್ದು, ಕಾಂಗ್ರೆಸ್ ಐಟಿ ಸೆಲ್ ಜಿಲ್ಲಾ ಕಾರ್ಯದರ್ಶಿ ಎಂ.ಎಲ್.ಎ. ಮಂಜು ದೂರು ನೀಡಿದ್ದಾರೆ.