Advertisement

ಶರಣಬಸವ ವಿವಿ: 3 ಹೊಸ ಕೋರ್ಸ್‌ಗೆ ಅನುಮೋದನೆ

12:33 PM Jul 17, 2021 | Team Udayavani |

ಕಲಬುರಗಿ: ಪ್ರಸಕ್ತ ಸಾಲಿನ 2021-22ರ ಶೈಕ್ಷಣಿಕ ವರ್ಷದಿಂದ ಎರಡು ಪದವಿ ಪೂರ್ವ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಮತ್ತು ಒಂದು ಸ್ನಾತಕೋತ್ತರ ಕೋರ್ಸ್‌ ಪ್ರಾರಂಭಿಸಲು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಶರಣಬಸವ ವಿಶ್ವವಿದ್ಯಾಲಯಕ್ಕೆ ಅನುಮೋದನೆ ನೀಡಿದೆ.

Advertisement

ಆರ್ಟಿμಶಿಯಲ್‌ ಇಂಟೆಲಿಜೆನ್ಸ್‌ ಮತ್ತು ಮಷಿನ್‌ ಲರ್ನಿಂಗ್‌ (ಬಿ.ಟೆಕ್‌), ಎನರ್ಜಿ ಇಂಜಿನಿಯರಿಂಗ್‌ (ಬಿ.ಟೆಕ್‌)ನಲ್ಲಿ ಎರಡು ಪದವಿ ಪೂರ್ವ ಕೋರ್ಸ್‌ಗಳನ್ನು ಪ್ರಾರಂಭಿಸಲು ವಿಶ್ವವಿದ್ಯಾಲಯ ಸಲ್ಲಿಸಿದ ಪ್ರಸ್ತಾವನೆಗಳಿಗೆ ಎಐಸಿಟಿಇ (ಂMಅಖೀಇ) ಅನುಮೋದನೆ ನೀಡಿದ್ದು, ಆರ್ಟಿಶಿಯಲ್‌ ಇಂಟೆಲಿಜೆನ್ಸ್‌ ಮತ್ತು ಡಾಟಾ ಸೈನ್ಸ್‌ (ಎಂ. ಟೆಕ್‌)ನಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಅನುಮೋದನೆ ನೀಡಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅನಿಲಕುಮಾರ ಬಿಡವೆ ತಿಳಿಸಿದ್ದಾರೆ.

ಹೊಸ ಬಿ.ಟೆಕ್‌ ಕೋರ್ಸ್‌ಗಳಲ್ಲಿ ತಲಾ 60 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಹೊಂದಲು ಅವಕಾಶವಿದೆ. ಹೊಸ ಎಂ.ಟೆಕ್‌ ಕೋರ್ಸ್‌ ನಲ್ಲಿ 18 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆಯಲು ಅವಕಾಶವಿದೆ ಎಂದು ಡಾ| ಬಿಡವೆ ತಿಳಿಸಿದ್ದಾರೆ. ಈ ಮೂರು ಹೊಸ ಕೋರ್ಸ್‌ಗಳ ಆರಂಭಕ್ಕಾಗಿ ಎಐಸಿಟಿಇ ಅನುಮೋದನೆ ಪಡೆಯಲು ಕಾರಣಿಭೂತರಾದ ಮತ್ತು ಸಹ ಕರಿಸಿದ ವಿಶ್ವವಿದ್ಯಾಲಯದ ಕುಲಾಧಿ ಪತಿ ಹಾಗೂ ಮಹಾದಾಸೋಹ ಪೀಠಾಧಿ ಪತಿಗಳಾದ ವಿದ್ಯಾಭಂಡಾರಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ ಮಾತೋಶ್ರೀ ಡಾ| ದಾûಾಯಿಣಿ ಅವ್ವ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಕುಲಪತಿ ಡಾ| ನಿರಂಜನ ವಿ.ನಿಷ್ಠಿ, ಸಮ ಕುಲಪತಿಗಳಾದ ಪ್ರೊ| ವಿ.ಡಿ. ಮೈತ್ರಿ, ಎನ್‌. ಎಸ್‌. ದೇವರಕಲ್‌, ಡೀನ್‌ ಡಾ| ಲಕ್ಷಿ¾à ಪಾಟೀಲ ಮಾಕಾ, ಡಾ| ಬಸವರಾಜ ಮಠಪತಿ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಬೆಂಬಲ ಮತ್ತು ಸಹಕಾರ ನೀಡಿದಕ್ಕಾಗಿ ಕೃತಜ್ಞತೆ ತಿಳಿಸಿದ್ದಾರೆ. ಅಭಿನಂದನೆ: ಮೂರು ಹೊಸ ಕೋರ್ಸ್‌ಗಳ ಆರಂಭಕ್ಕಾಗಿ ಎಐಸಿಟಿಇಯಿಂದ ಅನು ಮೋದನೆ ಪಡೆದಿದ್ದಕ್ಕಾಗಿ ವಿಶ್ವವಿದ್ಯಾಲಯದ ಕುಲಾಧಿ ಪತಿ ಹಾಗೂ ಮಹಾದಾಸೋಹ ಪೀಠಾ ಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಹಾಗೂ ಮಾತೋಶ್ರಿ ಡಾ| ದಾûಾಯಿಣಿ ಅವ್ವ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಕುಲಸಚಿವ ಡಾ| ಅನಿಲಕುಮಾರ ಬಿಡವೆ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗೆ ಅಭಿನಂದನೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next