Advertisement

ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ಸಪ್ತೋತ್ಸವಕ್ಕೆ ಚಾಲನೆ

02:16 AM Jan 10, 2021 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶನಿವಾರ ವಾರ್ಷಿಕ ಸಪೊ¤àತ್ಸವವು ಪರ್ಯಾಯ ಅದಮಾರು ಮಠದ ಶ್ರೀ  ವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪೀಠಸ್ಥ ಶ್ರೀ ಈಶಪ್ರಿಯ  ತೀರ್ಥರ ನೇತೃತ್ವದಲ್ಲಿ ಆರಂಭಗೊಂಡಿತು.

Advertisement

ಓಲಿ ಕೊಡೆ ಬಳಕೆ :

ಮೊದಲು ತೆಪ್ಪೋತ್ಸವ ನಡೆಯಿತು. ಈ ಬಾರಿ ತೆಪ್ಪವನ್ನು ಬಿದಿರಿನಿಂದ ಅಲಂಕರಿಸ

ಲಾಗಿತ್ತು. ಬಳಿಕ 2 ರಥಗಳ ಉತ್ಸವ ನಡೆಯಿತು. ಒಂದು ರಥದಲ್ಲಿ ಶ್ರೀಕೃಷ್ಣ – ಮುಖ್ಯಪ್ರಾಣ, ಇನ್ನೊಂದರಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಉತ್ಸವ ಮೂರ್ತಿಗಳನ್ನು ಇರಿಸಿ ಪೂಜಿಸಲಾಯಿತು. ಕೃಷ್ಣಾಪುರ, ಪಲಿಮಾರು ಹಿರಿಯ, ಕಿರಿಯ, ಸೋದೆ, ಕಾಣಿಯೂರು ಶ್ರೀಗಳು ಪಾಲ್ಗೊಂಡರು. ಮಳೆ ಬಂದ ಕಾರಣ ಸ್ವಾಮೀಜಿಯವರು ಓಲಿ ಕೊಡೆ ಹಿಡಿಯಬೇಕಾಯಿತು.

ಉದ್ಘಾಟನೆ :

Advertisement

ರಾಜಾಂಗಣದಲ್ಲಿ ಸಪ್ತೋತ್ಸವದ ವಿವಿಧ ಕಾರ್ಯಕ್ರಮಗಳನ್ನು ಪರ್ಯಾಯ ಶ್ರೀ ಈಶಪ್ರಿಯತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್‌, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್‌ ಉಪಸ್ಥಿತರಿದ್ದರು.

ಪಂಚ ಶತಮಾನೋತ್ಸವ :

ಜ. 16ರಿಂದ ದ್ವೆ„ವಾರ್ಷಿಕ ಪರ್ಯಾಯ ಪದ್ಧತಿಯ 500ನೇ ವರ್ಷಾಚರಣೆ ಉದ್ಘಾಟನೆ ಜರಗಲಿದೆ.

 

  • ನೂತನ ಮಾರ್ಗ ಇಂದಿನಿಂದ ಶ್ರೀಕೃಷ್ಣ ಮಠದಲ್ಲಿ ಭಕ್ತರು ದೇವರ ದರ್ಶನ ಮಾಡುವ ಮಾರ್ಗದಲ್ಲಿ ಮಾರ್ಪಾಟು ಮಾಡಿದ್ದು ಜ. 10ರಿಂದ ಆರಂಭವಾಗಲಿದೆ.
  • ಭೋಜನ ಪ್ರಸಾದ ಆರಂಭ ಶನಿವಾರ ಏಕಾದಶಿಯಾದ ಕಾರಣ ರವಿವಾರದಿಂದ (ಜ. 10) ಭೋಜನ ಪ್ರಸಾದ ಪುನಃ ಆರಂಭವಾಗಲಿದೆ.
  • ಜ. 14: ಮಕರಸಂಕ್ರಾಂತಿ ಉತ್ಸವ, ಸ್ವರ್ಣ ಛತ್ರ ಸಮರ್ಪಣೆ
  • ಜ. 14 ಮಕರಸಂಕ್ರಾಂತಿಯಂದು ಮೂರು ರಥಗಳ ಉತ್ಸವ ಜರಗಲಿದೆ. ಈ ಹಿಂದೆ ಶಿಥಿಲಗೊಂಡಿದ್ದ ಸ್ವರ್ಣ ಛತ್ರವನ್ನು ದುರಸ್ತಿಗೊಳಿಸಿ ನವೀಕರಿಸಿದ್ದು ಇದರ ಸಮರ್ಪಣೆ ಮಕರಸಂಕ್ರಾಂತಿಯಂದು ನಡೆಯಲಿದೆ. ಜ. 15ರಂದು ಹಗಲು ಉತ್ಸವ ಚೂರ್ಣೋತ್ಸವ ಜರುಗಲಿದೆ.
Advertisement

Udayavani is now on Telegram. Click here to join our channel and stay updated with the latest news.

Next