Advertisement

ತಿಂಗಳಿಗೆ 2 ಬಾರಿ ಸಪ್ತಪದಿ: ಸಚಿವ ಕೋಟ

02:19 AM Jan 23, 2021 | Team Udayavani |

ಸುಬ್ರಹ್ಮಣ್ಯ, ಜ. 22: ಸಪ್ತಪದಿ ಕಾರ್ಯಕ್ರಮವನ್ನು ಪ್ರತಿ ತಿಂಗಳಿಗೆ ಎರಡು ದಿವಸ ನಡೆಸಲು ನಿರ್ಧರಿ ಸ‌ಲಾಗಿದೆ. ಫೆಬ್ರವರಿ 17 ಮತ್ತು 25ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹ ಆಯೋಜಿಸಲಾಗು ವುದು.  ಮುಂದಿನ ತಿಂಗಳುಗಳಲ್ಲಿ ಮುಹೂರ್ತ ನೋಡಿಕೊಂಡು ಆಯೋಜಿಸಲಾಗುವುದು ನಡೆಸಲಾಗು ವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಶೀಘ್ರ ಸಮಿತಿ ನೇಮಕ :

ರಾಜ್ಯದಲ್ಲಿ ಸುಮಾರು 206 ಎ ದರ್ಜೆ ದೇವಾಲಯಗಳು ಮತ್ತು ಸುಮಾರು 310 ಬಿ ದರ್ಜೆ ದೇವಾಲಯಗಳಿವೆ. ಧಾರ್ಮಿಕ ಪರಿಷತ್‌ನ ಮೂಲಕ ಈಗಾಗಲೇ 80 ದೇಗುಲಗಳ ವ್ಯವಸ್ಥಾಪನ ಸಮಿತಿಯ ರಚನೆ ಮಾಡಲು ಅರ್ಜಿ ಕರೆಯಲಾಗಿತ್ತು. ಅದರಲ್ಲಿ ಸುಮಾರು 11 ದೇಗುಲಗಳ ವ್ಯವಸ್ಥಾಪನ ಸಮಿತಿ ರಚನೆಯಾಗಿದೆ. ಪೊಲೀಸ್‌ ವರದಿ ಬಾಕಿ ಇರುವ ದೇವಾಲಯಗಳ ವ್ಯವಸ್ಥಾಪನ ಸಮಿತಿ ರಚನೆಗೆ ಬಾಕಿ ಇದೆ. ಇಂದಿನ ರಾಜ್ಯ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಈಗಾಗಲೇ ಅವಧಿ ಮುಗಿದಿರುವ ದೇವಾಲಯಗಳಿಗೆ ಶೀಘ್ರ ಸಮಿತಿಗೆ ಅರ್ಜಿ ಕರೆಯಲು ನಿರ್ಧಾರ ತಳೆಯಲಾಗಿದೆ ಎಂದು ಸಚಿವರು ತಿಳಿಸಿದರು.

ಶೀಘ್ರ 6ನೇ ವೇತನ ಶ್ರೇಣಿ : 

ದೇವಸ್ಥಾನಗಳಲ್ಲಿ ನೌಕರರ ಖಾಯಮಾತಿ ಪ್ರಕ್ರಿಯೆಬಾಕಿಯಾಗಿದೆ. ಅದನ್ನು ಶೀಘ್ರವೇ ಮಾಡಲಾಗು ವುದು. ನೌಕರರಿಗೆ ಆರನೇ ವೇತನ ಜಾರಿಗೆ ಎಲ್ಲ ದೇಗುಲಗಳಿಗೆ ಅನುಮತಿ ನೀಡಿದ್ದೇವೆ. ದೇಗುಲದ ಆದಾಯದ ಶೇ. 35 ಮೀರದಂತೆ ನೌಕರರಿಗೆ 6ನೇ

Advertisement

ವೇತನ ನೀಡಲು ಯೋಜನೆ ಸಿದ್ಧವಾಗಿದೆ. ಕುಕ್ಕೆ ದೇಗುಲದ ನೌಕರರಿಗೆ 6ನೇ ವೇತನ ನೀಡಲು ಆದಾಯ ಮಿತಿಯ ಯಾವುದೇ ಸಮಸ್ಯೆ ಇಲ್ಲದಿರುವು ದರಿಂದ ಶೀಘ್ರವೇ ದೊರಕಲಿದೆ ಎಂದು ಹೇಳಿದರು.

ಕುಕ್ಕೆಯಲ್ಲಿ  ಧಾರ್ಮಿಕ ಪರಿಷತ್‌ ವಿಶೇಷ ಸಭೆ :

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮದಾಯ ದ‌ತ್ತಿ ಇಲಾಖೆ ರಾಜ್ಯ ಧಾರ್ಮಿಕ ಪರಿಷತ್ತಿನ 11ನೇ ವಿಶೇಷ ಸಭೆ ಶುಕ್ರವಾರ ನಡೆಯಿತು.

ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮೀನುಗಾರಿಕೆ ಮತ್ತು ಒಳನಾಡು ಬಂದರು ಸಚಿವ ಎಸ್‌. ಅಂಗಾರ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಪ್ರತಿಬಾರಿ ಬೆಂಗಳೂರು ವಿಧಾನ ಸೌಧದಲ್ಲಿ ನಡೆಯುತ್ತಿದ್ದ ಧಾರ್ಮಿಕ ಪರಿಷತ್‌ ಸಭೆಯನ್ನು ಈ ಬಾರಿ ದ.ಕ. ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ನಡೆಸಿ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು ಎಂದು ಸಚಿವ ಕೋಟ ಹೇಳಿದರು.

ಕುಕ್ಕೆ ರಥಬೀದಿಯ ಇಕ್ಕೆಲಗಳಲ್ಲಿ ಪಾರಂಪರಿಕ ಶೈಲಿಯ ಕಟ್ಟಡ, ಪ್ರಾಂಗಣ ನಿರ್ಮಿಸುವಂತೆ, ವಿಶಾಲ ಭೋಜನ ಶಾಲೆ, ಪವರ್‌ ಹೌಸ್‌ ನಿರ್ಮಿಸಿ ವಿದ್ಯುತ್‌ ಸಮಸ್ಯೆ ನಿವಾರಿಸುವಂತೆ, ಚಂಪಾಷಷ್ಠಿಂದು ನಡೆಯುವ ಉರುಳು ಸೇವೆಗೆ ಪ್ರತ್ಯೇಕ ಪಥ ನಿರ್ಮಿಸುವಂತೆ, ಪ್ರಾಥಮಿಕ ಶಾಲೆಯನ್ನು ಸ್ಥಳಾಂತರ ಮಾಡುವಂತೆ, ಉತ್ತಮ ಆಡಿಟೋರಿಯಂ ನಿರ್ಮಿಸುವಂತೆ, ಹರಿಯುವ ಜರಿ, ಮಾಸ್ಟರ್‌ ಪ್ಲಾನ್‌ ಕಾಮಗಾರಿಯನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸುವಂತೆ, ದೇಗುಲದ ಸಿಬಂದಿಗೆ ವಸತಿಗೃಹಗಳನ್ನು ನಿರ್ಮಿಸುವಂತೆ, ದೇವಸ್ಥಾನದ ಮೇಲಿರುವ ಕೋರ್ಟ್‌ ಕೇಸನ್ನು ಸೌಹಾರ್ದವಾಗಿ ಮುಗಿಸುವಂತೆ ಅಭಿವೃದ್ಧಿ ಸಮಿತಿ ಸದಸ್ಯರು ಪ್ರಸ್ತಾವಿಸಿದರು.

ಮೀನುಗಾರಿಕೆ ಮತ್ತು ಬಂದರು ಸಚಿವ ಹಾಗೂ  ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್‌. ಅಂಗಾರ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಹಿಂದೂ ಧಾರ್ಮಿದತ್ತಿ ಧಾರ್ಮಿಕ ಪರಿಷತ್‌ ಕಮಿಷನರ್‌ ದಯಾನಂದ, ಆಗಮ ಪಂಡಿತರಾದ ಸೂರ್ಯ ನಾರಾಯಣ ಭಟ್‌ ಕಶೆಕೋಡಿ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರಾದ ಸಿದ್ಧಲಿಂಗ ಪ್ರಭು, ಗೋವಿಂಧ ಭಟ್‌ ಮೈಸೂರು, ವಿಜಯಲಕ್ಷ್ಮೀ, ಸುಭಾಷ್‌ ಕಾಂಬ್ಳೆ, ಧಾರ್ಮಿಕ ಸಹಾಯಕ ಆಯುಕ್ತ ವೆಂಕಟೇಶ್‌, ಕುಕ್ಕೆ ದೇವಳದ ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್‌ರಾಮ್‌ ಸುಳ್ಳಿ, ಪ್ರಸನ್ನ, ಎ.ಬಿ. ಮನೋಹರ ರೈ, ವನಜಾ ವಿ. ಭಟ್‌, ಪಿ.ಜಿ.ಎಸ್‌. ಪ್ರಸಾದ್‌ ಸಭೆಯಲ್ಲಿದ್ದರು. ಇಒ ಡಾ| ನಿಂಗಯ್ಯ ಸ್ವಾಗತಿಸಿ, ಆಡಳಿತಾಧಿಕಾರಿ ಡಾ| ಯತೀಶ್‌ ಉಳ್ಳಾಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next