Advertisement

ಚಿತ್ರೀಕರಣ ಮುಗಿಸಿದ ‘ಸಪ್ತಸಾಗರದಾಚೆ ಎಲ್ಲೋ’

03:16 PM Mar 23, 2023 | Team Udayavani |

ರಕ್ಷಿತ್‌ ಶೆಟ್ಟಿ ನಟನೆ, ನಿರ್ಮಾಣದ “ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ತೊಡಗಿದೆ. ಬರೋಬ್ಬರಿ 137 ದಿನಗಳ ಚಿತ್ರೀಕರಣ ಮುಗಿಸಿದ್ದು, ಚಿತ್ರತಂಡ ಇತ್ತೀಚೆಗೆ ಕುಂಬಳಕಾಯಿ ಒಡೆದಿದೆ.

Advertisement

“ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಔಟ್‌ ಆ್ಯಂಡ್‌ ಔಟ್‌ ಲವ್‌ಸ್ಟೋರಿಯಾಗಿದ್ದು, ಈ ಚಿತ್ರದಲ್ಲಿ ರಕ್ಷಿತ್‌ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರಕ್ಷಿತ್‌ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದು, ಹೇಮಂತ್‌ ಕುಮಾರ್‌ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್‌ ನಾಯಕಿ.

ಆ ಚಿತ್ರದ ನಂತರ ರಕ್ಷಿತ್‌ “ರಿಚರ್ಡ್‌ ಆ್ಯಂಟನಿ’ ಕೈಗೆತ್ತಿಕೊಳ್ಳಲಿದ್ದಾರೆ. ಇದು ಇವರ ಡ್ರೀಮ್‌ ಪ್ರಾಜೆಕ್ಟ್. ಈ ಚಿತ್ರದ ನಟನೆ, ನಿರ್ದೇಶನ ಎರಡೂ ಜವಾಬ್ದಾರಿ ರಕ್ಷಿತ್‌ ಅವರದ್ದೇ. ಈಗಾಗಲೇ ಫ‌ಸ್ಟ್‌ಲುಕ್‌ ಟೀಸರ್‌ ಹಿಟ್‌ಲಿಸ್ಟ್‌ ಸೇರಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸುತ್ತಿದೆ.

ಈ ಚಿತ್ರದ ಬಳಿಕ ರಕ್ಷಿತ್‌ “ಪುಣ್ಯಕೋಟಿ’ ಚಿತ್ರದ ಕಡೆಗೆ ಗಮನಹರಿಸಲಿದ್ದಾರೆ. ಇದು ರಕ್ಷಿತ್‌ ಮಹತ್ವಕಾಂಕ್ಷೆಯ ಸಿನಿಮಾ. ಈ ಚಿತ್ರ ಎರಡು ಭಾಗಗಳಲ್ಲಿ ಬರಲಿದೆ. ಇದನ್ನು ಮುಗಿಸಿಕೊಂಡು ರಕ್ಷಿತ್‌ ಶೆಟ್ಟಿ “ಎಂ2ಎಂ’ (ಮಾರ್ನಿಂಗ್‌ ಟು ಮೋಕ್ಷ’) ಚಿತ್ರ ಮಾಡಲಿದ್ದಾರೆ. ಈ ಎಲ್ಲಾ ಕಮಿಟ್‌ಮೆಂಟ್‌ಗಳು ಮುಗಿದ “ಕಿರಿಕ್‌ ಪಾರ್ಟಿ-2′ ಮಾಡಲಿದ್ದಾರೆ. ಈ ಚಿತ್ರ ಮಾಡುವ ಕುರಿತು ರಕ್ಷಿತ್‌ ಅವರ ಹೊಸ ಪ್ಲ್ರಾನ್‌ ಕೂಡಾ ಹೊಂದಿದ್ದಾರಂತೆ. ಅದೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next