ಮೈಸೂರು: ಕೆಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿತ್ತು. ಈಗ ಕೇಂದ್ರ ಸಚಿವ ಜೇಟ್ಲಿ ಕೈಯಲ್ಲಿ ಹಣಕಾಸು ಇಲಾಖೆಯಿದೆ. ಈಗಲೇ ಏಕೆ ರೈತರ ಸಾಲ ಮನ್ನಾ ಮಾಡಿಸಬಾರದು ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ನಂಜನಗೂಡು ಉಪ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನಿ ಮೋದಿ ಯಾವಾಗಲೂ ಸೊಕ್ಕಿನ, ಸಮಾಜ ಒಡೆಯುವ ಮಾತುಗಳನ್ನಾಡುತ್ತಾರೆ. ಮೋದಿ ಬರೀ ಭಾಷಣ ಮಾಡ್ತಾರೆ. ಅವರಿಂದ ಸಂವಿಧಾನ
ರಕ್ಷಣೆ ಮಾತು ಬಿಡಿ, ಸಂವಿಧಾನವನ್ನೇ ಕೇಂದ್ರ ಸರ್ಕಾರ ಧಿಕ್ಕರಿಸುತ್ತಿದೆ ಎಂದು ಹೇಳಿದರು.
60 ವರ್ಷಗಳಿಂದ ಕಾಂಗ್ರೆಸ್ ಏನೂ ಮಾಡಿಲ್ಲ ಅಂತಾರೆ. ಹಾಗಾದರೆ, ವರುಣಾ ನಾಲೆ, ಹೇಮಾವತಿ, ಕಬಿನಿ ಜಲಾಶಯ ಎಲ್ಲವೂ ಮೋದಿ, ಯಡಿಯೂರಪ್ಪ ಕಾಲದಲ್ಲೇ ಆಯ್ಕೆ ಎಂದು ತಿರುಗೇಟು ನೀಡಿದರು