ವೆಲ್ಲಿಂಗ್ಟನ್: ಭಾರತ ವಿರುದ್ಧದ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮಿಚೆಲ್ ಸ್ಯಾಂಟ್ನರ್ ಅವರು ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
15 ಸದಸ್ಯರ ತಂಡದಲ್ಲಿ ಅನ್ ಕ್ಯಾಪ್ಡ್ ಎಡಗೈ ಸ್ವಿಂಗ್ ಬೌಲರ್ ಬೆನ್ ಲಿಸ್ಟರ್ ಅವರನ್ನು ಸೇರಿಸಲಾಗಿದೆ. ಜೊತೆಗೆ ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ಏಕದಿನ ಪದಾರ್ಪಣೆ ಮಾಡಿದ ಆಲ್ ರೌಂಡರ್ ಹೆನ್ರಿ ಶಿಪ್ಲಿ ಅವರೂ ಮೊದಲ ಬಾರಿಗೆ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಆಡಮ್ ಮಿಲ್ನೆ ಮತ್ತು ಬೆನ್ ಸಿಯರ್ಸ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಆಯ್ಕೆಗೆ ಅಲಭ್ಯರಾಗಿದ್ದಾರೆ. ಕೇನ್ ವಿಲಿಯಮ್ಸನ್ ಮತ್ತು ಟಿಮ್ ಸೌಥಿ ಭಾರತಕ್ಕೆ ಪ್ರಯಾಣಿಸುವ ನ್ಯೂಜಿಲೆಂಡ್ ತಂಡದ ಭಾಗವಾಗಿರುವುದಿಲ್ಲ. ಇಬ್ಬರೂ ಪಾಕಿಸ್ತಾನ ಸರಣಿಯ ನಂತರ ಮುಖ್ಯ ತರಬೇತುದಾರ ಗ್ಯಾರಿ ಸ್ಟೆಡ್ ಮತ್ತು ಬೌಲಿಂಗ್ ಕೋಚ್ ಶೇನ್ ಜುರ್ಗೆನ್ಸನ್ ಅವರೊಂದಿಗೆ ನ್ಯೂಜಿಲೆಂಡ್‌ಗೆ ಹಿಂತಿರುಗುತ್ತಾರೆ.
ಇದನ್ನೂ ಓದಿ:ಮೋದಿ ದೇವರು, ನನಗೆ ಅವರ ಕೈ ಸ್ಪರ್ಶವಾಯಿತು: ಹಾರ ಹಾಕಲು ಯತ್ನಿಸಿದ್ದ ಬಾಲಕನ ಹೇಳಿಕೆ
Related Articles
ಭಾರತದ ಸೀಮಿತ ಓವರ್‌ಗಳ ಪ್ರವಾಸದ ಸಮಯದಲ್ಲಿ ಲ್ಯೂಕ್ ರೊಂಚಿ ಪ್ರಮುಖ ಕೋಚ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ.
ಮೂರು ಟಿ20 ಪಂದ್ಯಗಳು ಕ್ರಮವಾಗಿ ಜನವರಿ 27, ಜನವರಿ 29 ಮತ್ತು ಫೆಬ್ರವರಿ 1 ರಂದು ರಾಂಚಿ, ಲಕ್ನೋ ಮತ್ತು ಅಹಮದಾಬಾದ್ ನಲ್ಲಿ ನಡೆಯಲಿವೆ.
ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾ), ಫಿನ್ ಅಲೆನ್, ಮೆಚೆಲ್ ಬ್ರೇಸ್ ವೆಲ್, ಮಾರ್ಕ್ ಚಾಪ್ಮನ್, ಡೇನ್ ಕ್ಲೀವರ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕಲ್ ರಿಪ್ಪೋನ್, ಹೆನ್ರಿ ಶಿಪ್ಲೆ, ಇಶ್ ಸೋಧಿ, ಬ್ಲೇರ್ ಟಿಕ್ನರ್.