Advertisement

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೊಂಡಯ್ಯ: ಸಂತೋಷ ಲಾಡ್

09:22 PM Dec 07, 2021 | Team Udayavani |

ಹರಪನಹಳ್ಳಿ : 1996 ರ ಸಮಯದಲ್ಲಿ ಅಂದಿನ ಪ್ರಧಾನಿ ದೇವೇಗೌಡರ ಮೇಲೆ ಒತ್ತಡ ಹಾಕಿ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೆ.ಸಿ. ಕೊಂಡಯ್ಯನವರು ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

Advertisement

ಪಟ್ಟಣದ ತೆಗಿನ ಮಠ ಸಭಾ ಭವನದಲ್ಲಿ ಮಂಗಳವಾರ ಯೊಜಿಸಿದ್ದ ಬಳ್ಳಾರಿ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಪರ ಮತಯಾಚನೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇಂದು ಗೌರವ ಸಿಗುತ್ತಿದೆ ಎಂದರೆ ಅದು ಕೆ.ಸಿ ಕೊಂಡಯ್ಯನವರಿಂದ ಹಾಗಾಗಿ ಕೊಂಡಯ್ಯನವರಿಗೆ ತಪ್ಪದೆ ಮತ ಚಲಾಯಿಸಿ ಎಂದು ಗ್ರಾಮ ಪಂಚಾಯ್ತಿ ಸದಸ್ಯರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಗ್ರಾಮ ಪಂಚಾಯ್ತಿ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ, ಬಡವರಿಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಿಂದ ಹಿಡಿದು, ಬಡವರಿಗೆ ಮನೆಗಳು, ರೈತರಿಗೆ ಬಡ್ಡಿ ರಹಿತ ಸಾಲ ಸೇರಿದಂತೆ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿದೆ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಅಭಿವೃದ್ಧಿಗಾಗಿ ಬಿಜೆಪಿ ಯಾವುದೇ ಯೋಜನೆ ಜಾರಿಗೆ ತಂದಿಲ್ಲ, ಕಳೆದ ಮೂರು ವರ್ಷದಲ್ಲಿ ಗ್ರಾ.ಪಂ.ಗೆ ಒಂದು ಮನೆಯು ಸಹ ಬಿಡುಗಡೆ ಮಾಡಿಲ್ಲ, ಇತ್ತಿಚೀಗೆ ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿವೆ, ಕೆಲವರು ಮನೆ ಕಳೆದುಕೊಂಡಿದ್ದಾರೆ ಇದುವರೆಗೂ ಯಾವುದೇ ಪರಹಾರ ನೀಡದ ಬಿಜೆಪಿಯವರು ಪ್ರಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯವರು ಏನೇ ಕೊಟ್ಟರೂ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸಂತೋಷ್ ಲಾಡ್ ಹೇಳಿದರು.

Advertisement

ಕೆಪಿಸಿಸಿ ಅಲ್ಪ ಸಂಖ್ಯತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ದಾವಣಗೆರೆ ಜಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಟಿ ಸುಭಾಸ್ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಡೂರು ಶಾಸಕ ಈ.ತುಕರಾಂ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿಸ್ವಾಮಿ, ಮುಖಂಡರಾದ ಮುಂಡರಿಗಿ ನಾಗರಾಜ್, ಸಿದ್ದು ಹಳ್ಳೇಗೌಡ, ನಿಖಿಲ್ ಕೊಂಡಜ್ಜಿ, ವೆಂಕಟೇಶ್, ವಕೀಲರಾದ ಹಲಗೇರಿ ಮಂಜುನಾಥ್, ವಾಗೀಶ್, ಮೂಸಾಸಾಬ್, ಪುಷ್ಪಾ ದಿವಾಕರ್, ಇರ್ಫಾನ್, ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದರು,

Advertisement

Udayavani is now on Telegram. Click here to join our channel and stay updated with the latest news.

Next