Advertisement
ಸಂತೆಕಟ್ಟೆಯ ಗೋಪಾಲಪುರ ವಾರ್ಡ್‌ನ ಮೌಂಟ್ ರೋಸರಿ ಚರ್ಚ್ ಮುಂಭಾಗದಲ್ಲಿ ಹೊಸ ಸಂತೆ ಮಾರುಕಟ್ಟೆ ಇದೀಗ ನಿರ್ಮಿಸಲಾಗಿದೆ. ಸಂತೆ ಮಾರುಕಟ್ಟೆಗೆ ಹೊಸ ಸ್ಪರ್ಶ ನೀಡಿದ್ದು, ಎತ್ತರದ ಕಟ್ಟೆಗಳು ಹಾಗೂ ಕಾಂಕ್ರೀಟ್ ನೆಲಹಾಸಿನಿಂದ ಪೂರ್ಣವಾಗಿ ಆಧುನೀಕರಣಗೊಂಡು 9 ತಿಂಗಳು ಕಳೆದಿದೆ. ಆದರೆ ನಗರಸಭೆ ಇಲ್ಲಿಯ ವರೆಗೂ ಮಾರುಕಟ್ಟೆ ಉದ್ಘಾಟನೆಗೆ ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ.
ಕಾಮಗಾರಿ
17,500 ಚ.ಅಡಿ ಪ್ರದೇಶದಲ್ಲಿ ಸುಮಾರು 99.5 ಲ.ರೂ. ವೆಚ್ಚದ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗಿದೆ. ಇಲ್ಲಿ ಏಕಕಾಲದಲ್ಲಿ 85 ಮಂದಿ ಕುಳಿತು ವ್ಯಾಪಾರ ಮಾಡಬಹುದಾಗಿದೆ. 2018ರಲ್ಲಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಪ್ರಸ್ತುತ ಇಲ್ಲಿ ಮೂಲಭೂತ ಸೌಕರ್ಯ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ, ವಿದ್ಯುತ್ ದೀಪ, ಇಂಟರ್‌ಲಾಕ್, ನೀರು ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
Related Articles
ಕಟ್ಟಡ ಹಲವು ತಿಂಗಳುಗಳಿಂದ ಪಾಳು ಬಿದ್ದಿರುವ ಕಾರಣದಿಂದ ಮಾರುಕಟ್ಟೆ ಕುಡುಕರ ಆಶ್ರಯ ತಾಣವಾಗಿ ಪರಿವರ್ತನೆಯಾಗಿದೆ. ಮದ್ಯಪಾನ ಮಾಡಿ ವ್ಯಕ್ತಿಗಳು ಮಲಗುವುದು ಇಲ್ಲಿ ಮಾಮೂಲಾಗಿದೆ. ಕಲ್ಯಾಣಪುರ ಸಂಪರ್ಕಿಸುವ ರಸ್ತೆಯಲ್ಲಿರುವ ಸಂತೆ ಮಾರುಕಟ್ಟೆಯಲ್ಲಿ ಸಮೀಪ ನಿತ್ಯ ರಾತ್ರಿ ಪೊಲೀಸ್ ವಾಹನ ಸಂಚರಿಸುತ್ತಿದ್ದರೂ ಕುಡುಕರು ಮಾತ್ರ ಯಾವುದೇ ಭಯವಿಲ್ಲದೆ ಮಾರುಕಟ್ಟೆಯ ಕಟ್ಟಡದ ಒಳಗೆ ಕುಳಿತು ಮೋಜು ಮಾಡುತ್ತಿದ್ದಾರೆ.
Advertisement
ಸಂತೆ ಮಾರುಕಟ್ಟೆ ನಿರ್ಮಾಣ ವಾಗಿ ವರ್ಷ ಸಮೀಪಿಸುತ್ತಿದೆ. ಸರ್ವಜನಿಕ ಬಳಕೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ರಾತ್ರಿ ಸಂದರ್ಭ ಕುಡುಕರು ಇಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿ ಮಾರುಕಟ್ಟೆ ಬಳಕೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ವಿಟuಲ್ ನಾಯಕ್, ಸಂತೆಕಟ್ಟೆ. ಹೇಳುತ್ತಾರೆ.
ಭರವಸೆಗೆ ವರ್ಷ ಉಡುಪಿ ನಗರಸಭೆ ಅಧಿಕಾರಿಯೊಬ್ಬರು ಕಾಮಗಾರಿ ಪೂರ್ಣಗೊಮಡಿದ್ದು, ಶೀಘ್ರದಲ್ಲಿ ಸಂತೆ ಮಾರುಕಟ್ಟೆಯನ್ನು ನಗರಸಭೆ ಕಂದಾಯವಿಭಾಗಕ್ಕೆ ಹಸ್ತಾಂತರಿಸುವುದಾಗಿ ಹೇಳಿ ವರ್ಷವಾಗುತ್ತಾ ಬಂದಿದ್ದೆ. ಆದರೂ ಸಂತೆ ಮಾರುಕಟ್ಟೆ ಉದ್ಘಾಟನೆಯಾಗಿಲ್ಲ. ಹೀಗಿದೆ ದುಃಸ್ಥಿತಿ!
ಪ್ರಸ್ತುತ ಸಂತೆಕಟ್ಟೆ ಜಂಕ್ಷನ್‌ನ ಸಮೀಪ ನಡೆಯುತ್ತಿರುವ ಸಂತೆ ರಾಷ್ಟ್ರೀಯ ಹೆ¨ªಾರಿ 66ರ ಉದ್ದಗಲಕ್ಕೆ ವ್ಯಾಪಿಸಿದೆ. ವ್ಯಾಪಾರಿಗಳು ಸರ್ವೀಸ್ ರಸ್ತೆ ಸೇರಿದಂತೆ ಬಸ್ ನಿಲ್ದಾಣದ ಒಳಗೆ, ಹೊರಗೆ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಇದರಿಂದಾಗಿ ಪ್ರತಿ ರವಿವಾರ ಕುಂದಾಪುರ- ಉಡುಪಿಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ “ಉದಯವಾಣಿ’ಯೂ ಬೆಳಕು ಚೆಲ್ಲಿತ್ತು. ಮಾರುಕಟ್ಟೆಯಲ್ಲಿ ಚರಂಡಿ, ನೆಲಹಾಸು ಕಿತ್ತು ಹೋಗಿದ್ದು, ವ್ಯಾಪಾರಿಗಳ ವ್ಯವಹಾರಕ್ಕೆ ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವ್ಯಾಪಾರಿಗಳು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಮಾರುಕಟ್ಟೆ ಟೆಂಡರ್ ಕರೆಯಲಾಗಿದೆ
ಸಂತೆಕಟ್ಟೆ ಮಾರುಕಟ್ಟೆಗೆ ಸಂಬಂಧಿಸಿ ರಸ್ತೆ ಹಾಗೂ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಬಾಕಿ ಇದೆ. ಈ ಬಗ್ಗೆ ಟೆಂಡರ್ ಕರೆಯಲಾಗಿದೆ. ಕಾಮಗಾರಿ ಮುಗಿದ 15 ದಿನಗಳೊಳಗೆ ಸಾರ್ವಜನಿಕರ ಬಳಕೆಗೆ ನೀಡಲಾಗುತ್ತದೆ.
-ಆನಂದ ಕಲ್ಲೋಳಿಕರ್ ,
ನಗರಸಭೆ, ಪೌರಾಯುಕ್ತ ವರದಿ ಪಡೆದಿದ್ದೇನೆ
ಕೆಲ ತಾಂತ್ರಿಕ ಕಾರಣಗಳಿಂದ ನೂತನ ಸಂತೆಕಟ್ಟೆ ಮಾರುಕಟ್ಟೆ ಉದ್ಘಾಟನೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದುಕೊಂಡಿದ್ದೇನೆ.
-ಮಂಜುಳಾ ವಿ.ನಾಯಕ್,
ಗೋಪಾಲಪುರ ವಾರ್ಡ್ ಉಡುಪಿ ನಗರಸಭೆ. -ತೃಪ್ತಿ ಕುಮ್ರಗೋಡು