Advertisement

Santhebennur: 2 ಸಾವಿರ ರೂ ಲಂಚಕ್ಕೆ ಬೇಡಿಕೆ; ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

06:52 PM Oct 15, 2024 | Team Udayavani |

ದಾವಣಗೆರೆ: ಬೋನಾಪೈಡ್ ಪ್ರಮಾಣಪತ್ರಕ್ಕಾಗಿ 2 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಉಪ ತಹಶೀಲ್ದಾರ್ ಮಂಗಳವಾರ (ಅ.15) ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

Advertisement

ಸಂತೇಬೆನೂರು ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು.

ಚನ್ನಗಿರಿ ತಾಲೂಕಿನ ಹಿರೇಗಂಗೂರು ಗ್ರಾಮದ ಎಸ್.ಆರ್. ಕುಮಾರ್ ಎಂಬುವರು ಸಹೋದರ ಗಿರೀಶ್ ಅವರೊಂದಿಗೆ ಸೆ.26 ರಂದು ಬೋನಾಪೈಡ್ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಲ್ಲ ದಾಖಲೆಗಳು ಸರಿಯಾಗಿದ್ದರೂ ಗುರುತಿನ ಚೀಟಿ ಒದಗಿಸಲಾಗಿಲ್ಲ ಎಂಬ ಹಿಂಬರಹದೊಂದಿಗೆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.

ಅ.10 ರಂದು ಮತ್ತೊಮ್ಮೆ ಬೋನಾಪೈಡ್ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿದ್ದ ಕುಮಾರ್ ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಅವರನ್ನು ಯಾವ ಕಾರಣಕ್ಕಾಗಿ ಬೋನಾಪೈಡ್ ಪ್ರಮಾಣಪತ್ರದ ಕೆಲಸ ಆಗುತ್ತಿಲ್ಲ ಎಂಬುದಾಗಿ ಕೇಳಿದಾಗ ಎರಡು ಸಾವಿರ ರೂಪಾಯಿ ನೀಡಿದರೆ ಪ್ರಮಾಣಪತ್ರ ಮಾಡಿಕೊಡುವುದಾಗಿ ತಿಳಿಸಿದ್ದರು. ಅದರಂತೆ ಕುಮಾರ್ ಮುಂಗಡವಾಗಿ 500 ರೂಪಾಯಿ ನೀಡಿದ್ದರು.

ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಬೋನಾಪೈಡ್ ಪ್ರಮಾಣಪತ್ರಕ್ಕೆ 2 ಸಾವಿರ ರೂಪಾಯಿ ಕೇಳಿರುವ ಬಗ್ಗೆ ಲೋಕಾಯುಕ್ತರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಂಗಳವಾರ ಇನ್ನುಳಿದ ಹಣವನ್ನು ಪಡೆಯುತ್ತಿರುವಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಅವರನ್ನು ಬಂಽಸಿದರು.

Advertisement

ಲೋಕಾಯುಕ್ತ ಅಧಿಕ್ಷಕ ಎಂ.ಎಲ್. ಕೌಲಾಪುರೆ, ಉಪಾಧ್ಯಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ನಿರೀಕ್ಷಕ ಸಿ. ಮಧುಸೂಧನ್, ಪ್ರಭು ಬಿ. ಸೂರಿನ, ಪಿ. ಸರಳ ಹಾಗೂ ಸಿಬ್ಬಂದಿಗಳಾದ ಆಂಜನೇಯ, ವೀರೇಶಯ್ಯ, ಸುಂ ದರೇಶ್, ಆಶಾ, ಎನ್.ಬಿ. ಮಲ್ಲಿಕಾರ್ಜುನ್, ಎಸ್.ಎನ್. ಲಿಂಗೇಶ್, ಎನ್. ಧನರಾಜ್, ಎಸ್.ಎಚ್. ಗಿರೀಶ್, ಕೃಷ್ಣ, ವಿನಾಯಕ, ಬಸವರಾಜ್ ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next