Advertisement
ಮಂಗಳವಾರ ಕೆ.ಆರ್.ರಸ್ತೆಯ ಕುವೆಂಪು ಸಭಾಂಗಣದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 6ನೇ ದೀಕ್ಷಾಂತ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕರ್ನಾಟಕವು ಅನೇಕ ಆಚಾರ್ಯರ ಕರ್ಮಭೂಮಿ ಮತ್ತು ಜನ್ಮಭೂಮಿಯಾಗಿದೆ. ಇಲ್ಲಿ ಅನೇಕ ಮತಗಳು ಆರಂಭಗೊಂಡಿದೆ ಎಂದರು.
Related Articles
Advertisement
ಒಡಂಬಡಿಕೆ: ಮಣಿಪಾಲ್ ವಿಶ್ವವಿದ್ಯಾಲಯ, ಫ್ರೆಂಚ್ ಇನ್‌ಸ್ಟಿಟ್ಯೂಟ್ ಆಫ್ ಪಾಂಡಿಚೇರಿ, ಬೆಲ್ಜಿಯಂ ಘೆಂಟ್ ವಿವಿ, ಗುಜರಾತ್‌ನ ಸೋಮನಾಥ ಸಂಸ್ಕೃತ ವಿವಿ ಮತ್ತು ಪಶ್ಚಿಮ ಬಂಗಾಲದ ಗೌರ್‌ಬಂಗ್ ವಿವಿ ಜತೆ ಬೋಧನೆ ಮತ್ತು ವಿದ್ಯಾರ್ಥಿ ವಿನಿಯಮ ಕುರಿತಂತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಮುಂದಿನ ವರ್ಷದಿಂದ ಈ ಕಾರ್ಯ ಆರಂಭವಾಗಲಿದೆ ಎಂದರು.
ಪದವಿ ಪ್ರದಾನ: 607 ಸಂಸ್ಕೃತ ಸ್ನಾತಕೋತ್ತರ ಪದವೀಧರರಿಗೆ, 310 ಸಂಸ್ಕೃತ ಪದವೀಧರರಿಗೆ ರಾಜ್ಯಪಾಲ ವಿ.ಆರ್.ವಾಲಾ ಪದವಿ ಪ್ರದಾನ ಮಾಡಿದರು. ಹಾಗೆಯೇ ವಿದ್ವಾನ್ ಬಿ.ರಾಜಶೇಖರಯ್ಯ ಅವರಿಗೆ ಗೌರವ ಡಿ.ಲಿಟ್ ಹಾಗೂ ಅಭಿಜಿತ್ ಜೋಶಿಯವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು.
ನಮ್ಮದು ಮೂಲ ಊರು ಶಿರಸಿ, ಪೋಷಕರು ಊರಲ್ಲಿ ಕೃಷಿ ಮಾಡುತ್ತಿದ್ದಾರೆ. ಪ್ರಾಚೀನ ಗಣಿತ, ವಿಜ್ಞಾನವನ್ನು ಸಂಸ್ಕೃತದಿಂದ ಅಧ್ಯಯನ ಮಾಡಲು ಸಾಧ್ಯ ಎಂಬ ಉದ್ದೇಶದಿಂದ ಸಂಸ್ಕೃತ ಸ್ನಾತಕೋತ್ತರದ ಅಧ್ಯಯನ ಮಾಡಿದೆ. ಚಿನ್ನದ ಪದಕದ ನಿರೀಕ್ಷೆಯೂ ಮಾಡಿರಲಿಲ್ಲ.-ಬಾಲಚಂದ್ರ ಕೃಷ್ಣ ಭಟ್, ಅಲಂಕಾರ ಶಾಸ್ತ್ರದಲ್ಲಿ ಗರಿಷ್ಠ ಅಂಕ ನಮ್ಮೂರು ಎಚ್.ಡಿ.ಕೋಟೆ. ಸದ್ಯ ಮೈತ್ರೇಯ ಗುರುಕುಲದಲ್ಲಿ ವೇದ, ದರ್ಶನ ಶಾಸ್ತ್ರದ ಶಿಕ್ಷಕಿಯಾಗಿ ವಿದ್ಯಾರ್ಥಿನಿಯರಿಗೆ ಬೋಧನೆ ಮಾಡುತ್ತಿದ್ದೇನೆ. ಸಂಸ್ಕೃತ ಭಾಷಾಸ್ವಾಧವನ್ನು ಎಲ್ಲರೂ ಸವಿಯುವಂತಾಗಬೇಕು.
-ಕೆ.ಎಸ್.ಶೃತಿ, ವ್ಯಾಕರಣ ಶಾಸ್ತ್ರದಲ್ಲಿ ಗರಿಷ್ಠ ಅಂಕ ಸಂಸ್ಕೃತದ ಮೇಲಿನ ಅಭಿಮಾನದಿಂದಾಗಿ ಸಂಸ್ಕೃತದಲ್ಲಿ ಪದವಿ ಪಡೆಯಲು ಸಾಧ್ಯವಾಗಿದೆ. ನಮ್ಮೂರು ಶಿರಸಿ, ಸದಸ್ಯ ಮೈಸೂರಿನಲ್ಲಿ ಶಾಲೆಯೊಂದರಲ್ಲಿ ಸಂಸ್ಕೃತ ಬೋಧಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಎಲ್ಲರೂ ಸಂಸ್ಕೃತ ಅಭ್ಯಸಿಸಬೇಕು.
-ಕೆ.ಎಸ್.ಕೃಷ್ಣ, ಪೂರ್ವ ಮೀಮಾಂಸಯಲ್ಲಿ ಗರಿಷ್ಠ ಅಂಕ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಓದಬೇಕೆಂಬ ಉದ್ದೇಶದಿಂದ ಸಂಸ್ಕೃತ ಅಧ್ಯಯನ ಮಾಡಿದೆ. ಈಗ ಎಂ.ಫಿಲ್ ಮಾಡುತ್ತಿದ್ದೇನೆ. ಪೂರ್ಣ ಪ್ರಜ್ಞಾ ವಿದ್ಯಾಪೀಠದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಚಿನ್ನದ ಪದಕ ಬಂದಿರುವುದು ಖುಷಿ ತಂದಿದೆ.
-ಬಿ.ರಾಧಾಕೃಷ್ಣ, ಜೋತಿಷ್ಯ ಶಾಸ್ತ್ರದಲ್ಲಿ ಗರಿಷ್ಠ ಅಂಕ