Advertisement

ಸಂಕೇಶ್ವರ: ನಡುರಸ್ತೆಯಲ್ಲಿ ಹೊತ್ತಿ ಉರಿದ ಓಮಿನಿ

01:51 PM Aug 05, 2022 | Team Udayavani |

ಸಂಕೇಶ್ವರ: ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಮಾರುತಿ ಓಮಿನಿ ವ್ಯಾನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಸುಟ್ಟು ಭಸ್ಮವಾದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

Advertisement

ನಗರದ ಬಸ್ ನಿಲ್ದಾಣ ಹತ್ತಿರ ಸಂಚರಿಸುತ್ತಿದ್ದ ಮಾರುತಿ ಓಮಿನಿಯಲ್ಲಿ ಆಕಸ್ಮಿಕ ವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಚಾಲಕ ವಾಹನವನ್ನು ಬಿಟ್ಟು ಹೊರಗೆ ಓಡಿ ಹೋಗಿ, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಾಹನದಲ್ಲಿ ಚಾಲಕ ಹೊರತುಪಡಿಸಿ ಬೇರೆ ಯಾರು ಇರಲಿಲ್ಲ. ಆದ್ದರಿಂದ ಭಾರಿ ಅವಘಡ ತಪ್ಪಿದಂತಾಗಿದೆ.

ಇದನ್ನೂ ಓದಿ: ಬಿಜೆಪಿ ಚಿಂತೆಗೆ ಕಾರಣವಾದ ಸಿದ್ದರಾಮೋತ್ಸವ: ಇದೇ ತಿಂಗಳಲ್ಲಿ ಕಮಲ ಪಕ್ಷದಿಂದ ಬೃಹತ್ ಸಮಾವೇಶ?

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next