Advertisement

ಮತ್ತೆ ಶಂಕರಮೂರ್ತಿಗೆ ಕೈತಪ್ಪಿದ ರಾಜ್ಯಪಾಲ ಹುದ್ದೆ

06:00 AM Aug 22, 2018 | Team Udayavani |

ಬೆಂಗಳೂರು: ರಾಜ್ಯಪಾಲರ ಹುದ್ದೆಯ ನಿರೀಕ್ಷೆಯಲ್ಲಿದ್ದ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರಿಗೆ ಮತ್ತೆ ಅವಕಾಶ ತಪ್ಪಿದೆ. ಮಂಗಳವಾರ ಏಳು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಲಾಗಿದೆಯಾದರೂ ಶಂಕರಮೂರ್ತಿ ಹೆಸರು ಈ ಪಟ್ಟಿಯಲ್ಲಿ ಇಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಪಾಲರ ಹುದ್ದೆಗೆ ಶಂಕರಮೂರ್ತಿ ಅವರ ಹೆಸರು ಪದೇ ಪದೆ ಕೇಳಿಬಂದಿತ್ತು. ರಾಜ್ಯಪಾಲರಾಗಿ ನೇಮಿಸುವ ಬಗ್ಗೆ ತಮ್ಮನ್ನು ರಾಷ್ಟ್ರೀಯ ನಾಯಕರು ಸಂಪರ್ಕಿಸಿದ್ದರು ಎಂದು ಶಂಕರಮೂರ್ತಿ ಅವರೇ ಹೇಳಿದ್ದರು.

Advertisement

ಕಳೆದ ವರ್ಷ ದಕ್ಷಿಣ ಭಾರತದ ಕೆಲ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸುವ ಸಂದರ್ಭದಲ್ಲಂತೂ ಶಂಕರಮೂರ್ತಿ ನೇಮಕವಾಗಿಯೇ ಬಿಟ್ಟರು ಎನ್ನುವಷ್ಟರ ಮಟ್ಟಿಗೆ ಸುದ್ದಿ ಹಬ್ಬಿತ್ತು. ಆದರೆ, ಅವಕಾಶ ಕೈತಪ್ಪಿತ್ತು. ಇದೀಗ ಅವರ ವಿಧಾನ ಪರಿಷತ್‌ ಅವಧಿಯೂ ಮುಗಿದಿದೆ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಶಂಕರಮೂರ್ತಿ ಘೋಷಿಸಿದ್ದರಿಂದ ಮತ್ತೆ ರಾಜ್ಯಪಾಲರ ನೇಮಕ ಸಂದರ್ಭದಲ್ಲಿ ಅವರ ಹೆಸರು ಬರಬಹುದು ಎಂಬ ನಿರೀಕ್ಷೆ ಇತ್ತು. ಇದೀಗ ಆ ನಿರೀಕ್ಷೆ ಹುಸಿಯಾಗಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next