Advertisement

“ಸಂಕಲ್ಪ್’ನಲ್ಲಿ ಮಿಂದ ತಾರೆಯರು

12:45 PM Mar 13, 2017 | Team Udayavani |

ಯಲಹಂಕ: “ವಿದ್ಯಾರ್ಥಿಗಳು ಓದುವುದರ ಜೊತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಗಳು ದೈಹಿಕವಾಗಿ ಮಾನಸಿಕವಾಗಿ ನಮ್ಮನ್ನು ಸಡೃಢಗೊಳಿಸುತ್ತವೆ. ಎಂದು ಸ್ಯಾಂಡಲ್‌ ವುಡ್‌ ನಟಿ ಅದಿತಿ ಪ್ರಭುದೇವ,”ಹೇಳಿದರು.

Advertisement

ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ “ಸಂಕಲ್ಪ್-2017′ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, “”ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬದುಕು ಕಟ್ಟಿಕೊಂಡ ಸಾವಿರಾರು ಕ್ರೀಡಾಪಟುಗಳು ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು,”ಎಂದರು.

ಚಿತ್ರನಟಿ ನಟಿ ಕಾರುಣ್ಯ ರಾಮ್‌ ಮಾತನಾಡಿ “ಕ್ರೀಡೆಯಿಂದ ಅತ್ಯುತ್ತಮ ಆರೋಗ್ಯದ ಜೊತೆಗೆ ಉತ್ತಮ ಬದುಕು ಕಟ್ಟಿಕೊಳ್ಳುವ ಅವಕಾಶವಿದೆ. ಈ ಅಂಶವನ್ನು ಪರಿಗಣಿಸಿ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಫೂರ್ತಿ ತುಂಬುತ್ತಿರುವುದು ಸ್ವಾಗತಾರ್ಹ,” ಎಂದರು.

ಕಾಲೇಜಿನಲ್ಲಿ ನಡೆದ ಕ್ರೀಡಾಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್‌, ವಾಲಿಬಾಲ್‌, ಖೋಖೋ, ಕಬಡ್ಡಿಯಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಖುಷಿಪಟ್ಟರು. ವಿಜೇತರಾದ ತಂಡಗಳಿಗೆ ಸ್ಯಾಂಡಲ್‌ವುಡ್‌ನ‌ ನಟ ನಟಿಯರು ಬಹುಮಾನ ವಿತರಣೆ ಮಾಡಿದರು. ಸಪ್ತಗಿರಿ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯಸ್ಥರಾದ ಜಿ.ದಯಾನಂದ, ಕಾರ್ಯಕಾರಿ ನಿರ್ದೇಶಕರಾದ ಜಿ.ಡಿ.ಮನೋಜ್‌, ನಿರ್ದೇಶಕರಾದ ಡಾ.ಶ್ರೀನಿವಾಸನ್‌ ಹಾಗೂ ಪ್ರಾಂಶುಪಾಲ ಡಾ. ಅಶ್ವತ್ಥ್ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next