Advertisement

ಒಂದು ಎಕರೆಯಲ್ಲಿ 150 ಟನ್ ಕಬ್ಬು ಬೆಳೆಯಲು ಸಾಧ್ಯ : ಡಾ.ಸಂಜೀವ ಮಾನೆ 

06:37 PM May 14, 2022 | Team Udayavani |

ರಬಕವಿ-ಬನಹಟ್ಟಿ: ರೈತರು ಕಬ್ಬು ಬೆಳೆಯವ ವ್ಯವಸ್ಥಾಪನೆಯನ್ನು ವ್ಯವಸ್ಥಿತವಾಗಿ ಅಳವಡಿಸಿಕೊಂಡರೆ ಒಂದು ಎಕರೆ ಪ್ರದೇಶದಲ್ಲಿ 150 ಟನ್ ಕಬ್ಬು ಬೆಳೆಯಲು ಸಾಧ್ಯ. ಅದಕ್ಕಾಗಿ ರೈತರ ಪ್ರಯತ್ನ ಮುಖ್ಯವಾಗಿದೆ ಎಂದು ಮಹಾರಾಷ್ಟ್ರದ ಅಸ್ಟಾದ ಕೃಷಿ ರತ್ನ ಪ್ರಶಸ್ತಿ ವಿಜೇತ ಡಾ.ಸಂಜೀವ ಮಾನೆ ತಿಳಿಸಿದರು.

Advertisement

ಶನಿವಾರ ಅವರು ಸಮೀಪದ ದಾನಿಗೊಂಡ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಪ್ರತಿ ಎಕರೆಗೆ 150 ಟನ್ ಕಬ್ಬು ಬೆಳೆಯುವ ಕುರಿತು ಹಮ್ಮಿಕೊಂಡ ವಿಚಾರ ಸಂಕಿರ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಬ್ಬು ನಾಟಿ ಪೂರ್ವದಲ್ಲಿ ಮಣ್ಣಿನ ಪರೀಕ್ಷೆ, ನಂತರ ನಾಟಿ ಮಾಡುವ ಪದ್ಧತಿ ಕೂಡಾ ಮುಖ್ಯವಾಗಿದೆ. ಕಬ್ಬು ಬೆಳೆಯಲ್ಲಿ ನೀರು ವ್ಯವಸ್ಥಾಪನೆ ಮುಖ್ಯವಾಗಿದೆ. ಕಬ್ಬಿಗೆ ಸ್ವಲ್ಪ ಸ್ವಲ್ಪವಾಗಿ ಮತ್ತು ನಿರಂತರವಾಗಿ ನೀರನ್ನು ನೀಡಬೇಕು. ನಂತರ ಪ್ರಮಾಣ ಬದ್ಧವಾಗಿ ಗೊಬ್ಬರ ನಿರ್ವಹಣೆ ಕೂಡಾ ಮಹತ್ವದ್ದಾಗಿದೆ. ಕೊಟ್ಟಗೆಯ ಗೊಬ್ಬರದ ಪಾತ್ರ ಬಹಷ್ಟಿದೆ. ನಂತರ ಬೆಳೆಯನ್ನು ಕ್ರಿಮಿ, ಕೀಟಗಳಿಂದ ಸಂರಕ್ಷಣೆ ಮಾಡುವುದು ಕೂಡಾ ಅಷ್ಟೆ ಪ್ರಮುಖವಾಗಿದೆ. ಇನ್ನೂ ಕಬ್ಬಿನ ಬೆಳೆಯ ಮೇಲೆ ವಾತಾವರಣದ ಪ್ರಭಾವವೂ ಕೂಡಾ ಮುಖ್ಯವಾಗಿದೆ. ಯಾವುದೆ ರೈತ ಈ ಕುರಿತು ಮಾಹಿತಿಯನ್ನು ಪಡೆಯಬೇಕಾದರೆ 94043 67518 ವಾಟ್ಸಪ್ ಮೂಲಕ ಕನ್ನಡದಲ್ಲಿ ಹೆಸರು ಮತ್ತು ವಿಳಾಸ ಬರೆದು ಕಳಿಸಿದರೆ ಅವರಿಗೆ ಎಲ್ಲ ರೀತಿಯ ಮಾಹಿತಿಯನ್ನು ನೀಡಲಾಗುವುದು ಎಂದು ಡಾ. ಸಂಜೀವ ಮಾನೆ ತಿಳಿಸಿದರು.

ಇದೇ ಸಂದರ್ಭದಲ್ಲಿ ದಾನಿಗೊಂಡ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಡಾ.ಮಹಾವೀರ ದಾನಿಗೊಂಡ ಮಾತನಾಡಿ, ಇಂದಿನ ದಿನಗಳಲ್ಲಿ ಯುವಕರು ಕೃಷಿಯತ್ತ ಒಲವು ತೋರಬೇಕಾಗಿದೆ. ಕೃಷಿ ವಸ್ತುಗಳನ್ನು ಬಳಸಿಕೊಂಡು ಉದ್ಯೋಗಪತಿಗಳು ಶ್ರೀಮಂತರಾಗುತ್ತಿದ್ದಾರೆ. ಅದೇ ರೀತಿಯಾಗಿ ಯವಕರು ಕೂಡಾ ಕೃಷಿಯನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಉತ್ತಮ ಲಾಭವನ್ನು ಪಡೆದುಕೊಳ್ಳಬೇಕು ಎಂದರು.

ಇದನ್ನೂ ಓದಿ :ರೈತರು ತಮ್ಮ ಆದಾಯ ದ್ವಿಗುಣದತ್ತ ಆಲೋಚನೆ ಮಾಡಬೇಕು: ಕೃಷಿ ಸಚಿವ ಬಿ.ಸಿ.ಪಾಟೀಲ್‌

Advertisement

ಈ ಸಂದರ್ಭದಲ್ಲಿ ಕೃಷಿ ಸಾಧಕರಾದ ಅಮರ ದುರ್ಗನ್ನವರ, ಸಂಜೀವ ನಾಡಗೌಡ ಮತ್ತು ಬಾಳಾಸೊ ಗುರುವ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಪುಷ್ಪದಂತ ದಾನಿಗೊಂಡ, ಸಾಗರ ಚವಾಜ, ಡಾ.ಶೀತಲ ಕಾಗಿ, ನಿಂಗಪ್ಪ ಮಾಲಗಾವಿ, ಧರೆಪ್ಪ ಕಿತ್ತೂರ, ಬಸವರಾಜ ಕುಂಬಾರ, ಅಶೋಕ ಆಳಗೊಂಡ, ಸುರೇಶ ಅಕ್ಕಿವಾಟ, ವರ್ಧಮಾನ ಕೋರಿ, ಅಜಿತ ಮಗದುಮ್, ಸಾಗರ ಬಣಜವಾಡ, ರಾಜು ಕುಲಕರ್ಣಿ, ಶಶಿಧರ ಕೋಲಾರ, ಸಂಜೀವ ಘಟ್ಟೆನ್ನವರ ಸೇರಿದಂತೆ ರಬಕವಿ ಬನಹಟ್ಟಿ ತಾಲ್ಲೂಕಿನ ಸುತ್ತ ಮುತ್ತಲಿನ ನಗರ ಮತ್ತು ಗ್ರಾಮೀಣ ಪ್ರದೇಶದ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next