Advertisement
ಫೈನಲ್‌ನಲ್ಲಿ ಸಂಜೀವ್ ರಜಪೂತ್ ಅವರ ಆರಂಭ ತೀರಾ ಆಶಾದಾಯಕವಾಗೇನೂ ಇರಲಿಲ್ಲ. ಕ್ನೀಲಿಂಗ್ ಸ್ಟೇಜ್‌ನಲ್ಲಿ 150.5 ಅಂಕಗಳನ್ನಷ್ಟೇ ಗಳಿಸಿದರು. ಪ್ರೋನ್‌ನಲ್ಲಿ 156.3 ಅಂಕ ಸಂಪಾದಿಸಿ ದ್ವಿತೀಯ ಸ್ಥಾನಕ್ಕೆ ನೆಗೆದರು. ಒಮ್ಮೆ ಅಗ್ರಸ್ಥಾನ ಅಲಂಕರಿಸಿದ ಬಳಿಕ ರಜಪೂತ್ ತಿರುಗಿ ನೋಡಲಿಲ್ಲ. ಕೆನಡಾದ ಗ್ರೆಗರ್ ಸಿಶ್ ಬೆಳ್ಳಿ (448.4) ಮತ್ತು ಇಂಗ್ಲೆಂಡಿನ ಡೀನ್ ಬೇಲ್ ಕಂಚಿನ ಪದಕ (441.2) ಜಯಿಸಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಚೈನ್ ಸಿಂಗ್ 5ನೇ ಸ್ಥಾನಿಯಾದರು (419.1).
37ರ ಹರೆಯದ, ನೇವಿ ಆಫೀಸರ್ ಆಗಿರುವ ಸಂಜೀವ್ ರಜಪೂತ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಗೆದ್ದ ಮೊದಲ ಚಿನ್ನದ ಪದಕ ಇದಾಗಿದೆ. 2014ರಲ್ಲಿ ರಜತ ಪದಕ ಹಾಗೂ 2006ರ ಮೆಲ್ಬರ್ನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.”ಅರ್ಹತಾ ಸುತ್ತಿನ ಪ್ರದರ್ಶನ ನನಗೆ ತೃಪ್ತಿ ನೀಡಿದೆ. ಆದರೆ ಫೈನಲ್ ಕುರಿತು ಇದೇ ಮಾತನ್ನು ಹೇಳಲಾಗದು. ಎಲ್ಲ ಸಲವೂ ನಾನಯ 458 ಪ್ಲಸ್ ಅಂಕ ಸಂಪಾದಿಸಿದ್ದೆ. ಇಲ್ಲಿ ಕ್ನೀಲಿಂಗ್ ಪೊಸಿಶನ್‌ನಲ್ಲಿ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಪ್ರೋನ್‌ನಲ್ಲಿ ಇದನ್ನು ಸರಿದೂಗಿಸಿದರೂ ಒಟ್ಟಾರೆಯಾಗಿ ಇದನ್ನು ಸಾಮಾನ್ಯ ಮಟ್ಟದ ಪ್ರದರ್ಶನವೆಂದೇ ಪರಿಗಣಿಸಬೇಕಾಗುತ್ತದೆ’ ಎಂದು ರಜಪೂತ್ ಹೇಳಿದರು. ಪುರುಷರ ಟ್ರ್ಯಾಪ್ ಸ್ಪರ್ಧೆಯಲ್ಲಿ ಕಿನಾನ್ ಚೆನಾಯ್ ಮತ್ತು ಮಾನವ್‌ಜೀತ್ ಸಂಧು ಫೈನಲ್ ಪ್ರವೇಶಿಸಲು ವಿಫಲರಾದರು.
ಚಿನ್ನದ ಸಾಧನೆಯೊಂದಿಗೆ ಅರ್ಜುನ ಪ್ರಶಸ್ತಿ ವಿಜೇತ ಸಂಜೀವ್ ರಜಪೂತ್ ಭಾರತದ ಗೇಮ್ಸ್ ಶೂಟಿಂಗ್ ಸ್ಪರ್ಧೆಗೆ ಪರಿಪೂರ್ಣ ಅಂತ್ಯವನ್ನೊದಗಿಸಿದರು. 2022ರ ಬರ್ಮಿಂಗಂ ಗೇಮ್ಸ್‌ನಲ್ಲಿ ಶೂಟಿಂಗ್ ಸ್ಪರ್ಧೆ ಇರುವುದಿಲ್ಲ!