Advertisement

ಮಳೆ ಬಂದಾಗ ಅಣಬೆ ಹುಟ್ಟುತ್ತದೆ.. ಶಾಸಕರ ಹೇಳಿಕೆ ವಿರುದ್ಧ ಅರುಣ್ ಪುತ್ತಿಲ ಬೆಂಬಲಿಗರ ಆಕ್ರೋಶ

07:14 PM Feb 09, 2023 | Team Udayavani |

ಪುತ್ತೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಶುಭಕೋರಿ ನಗರದಲ್ಲಿ ಅಳವಡಿಸಿದ ಕಟೌಟ್, ಬ್ಯಾನರ್ ಕುರಿತಂತೆ ಬುಧವಾರ ಶಾಸಕ ಸಂಜೀವ ಮಠಂದೂರು ನೀಡಿದ ಹೇಳಿಕೆಯಿಂದ ಉಂಟಾದ ಆಕ್ರೋಶವು ಗುರುವಾರ ಬಿಜೆಪಿ ವತಿಯಿಂದ ನಗರದಲ್ಲಿ ನಡೆದ ಅಮಿತ್ ಶಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿತರಣೆ ಮತ್ತು ಪ್ರಚಾರ ಜಾಥಾದಲ್ಲಿ ಸ್ಪೋಟಗೊಂಡ ವಿದ್ಯಾಮಾನ ನಡೆದಿದೆ.

Advertisement

ಅಮಿತ್ ಶಾ ಅವರಿಗೆ ಶುಭಕೋರಿ ಅಲ್ಲಲ್ಲಿ ಬ್ಯಾನರ್, ಕಟೌಟ್ ಅಳವಡಿಕೆಯ ವಿಚಾರದ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರು ನೀಡಿದ ಮಳೆ ಬಂದಾಗ ಅಣಬೆ ಹುಟ್ಟುತ್ತದೆ ಎಂಬ ಹೇಳಿಕೆ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರನ್ನು ಉದ್ದೇಶಿಸಿ ಎಂದು ಪುತ್ತಿಲ ಬೆಂಬಲಿಗರು ಕಿಡಿಕಾರಿದ್ದು ಪಕ್ಷದ ಮಂಡಲ ಸಮಿತಿ ಅಧ್ಯಕ್ಷರು ಸೇರಿದಂತೆ ಪ್ರಮುಖರಿಗೆ ದೂರವಾಣಿ ಕರೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಆಡಿಯೋ ತುಣುಕುಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.

ಆಕ್ರೋಶ ಸ್ಪೋಟ..!
ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ನಗರದ ದರ್ಬೆಯಿಂದ ಬೊಳುವಾರು ತನಕ ಬಿಜೆಪಿ ವತಿಯಿಂದ ಗುರುವಾರ ಸಂಜೆ ಪ್ರಚಾರ ಜಾಥಾ ಹಮ್ಮಿಕೊಳ್ಳಲಾಗಿತ್ತು. ಶಾಸಕ ಸಂಜೀವ ಮಠಂದೂರು ಪ್ರಮುಖ ಮುಖಂಡರು, ಅರುಣ್ ಕುಮಾರ್ ಪುತ್ತಿಲ ಭಾಗವಹಿಸಿದ್ದರು. ಪ್ರಚಾರ ಜಾಥಾ ಬೊಳುವಾರು ತಲುಪುತಿದ್ದಂತೆ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಅಣಬೆ ಎಂದು ಹೇಳಿದ್ದು ಯಾರಿಗೆ, 24 ತಾಸು ಕಳೆದರೂ ಯಾಕೆ ಸ್ಪಷ್ಟನೆ ನೀಡಿಲ್ಲ ಎಂದು ಶಾಸಕರನ್ನು ಪ್ರಶ್ನಿಸಿದರು. ಇದಕ್ಕೆ ಶಾಸಕರು ಉತ್ತರಿಸದೆ ಕಾರಿನ ಕಡೆ ತೆರಳಿದರು. ಈ ವೇಳೆ ಅರುಣ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರ ನಡುವೆ ಪರಸ್ಪರ ವಾದ-ಪ್ರತಿವಾದ ನಡೆಯಿತು. ನಾಯಕರು ಇದನ್ನು ನಿಯಂತ್ರಿಸಲು ಮುಂದಾದರೂ ಇದಕ್ಕೆ ಜಗ್ಗದ ಅರುಣ್ ಪುತ್ತಿಲ ಬೆಂಬಲಿಗರು ನಾಯಕರ ವಿರುದ್ಧವೇ ಕಿಡಿಕಾರಿದ ಘಟನೆಯು ನಡೆಯಿತು. ಪುಡಾ ಅಧ್ಯಕ್ಷ ಭಾಮೀ ಅಶೋಕ್ ಶೆಣೈ ಹಾಗೂ ಅರುಣ್ ಬೆಂಬಲಿಗರ ನಡುವೆ ವಾಗ್ವಾದವೇ ನಡೆಯಿತು. ಕೊನೆಗೆ ಅರುಣ್ ಕುಮಾರ್ ಪುತ್ತಿಲ ಅವರು ಬೆಂಬಲಿಗರನ್ನು ಸಮಾಧಾನಿಸಿ ಸ್ಥಳದಿಂದ ಕರೆದೊಯ್ಯುದ್ದರು. ಬಳಿಕ ಎರಡು ತಂಡದವರು ಸ್ಥಳದಿಂದ ಚದುರಿದರು.

ಇದನ್ನೂ ಓದಿ: ಮೊದಲ ರಾತ್ರಿಯ ಫೋಟೋ, ವಿಡಿಯೋ ಅಪ್‌ ಲೋಡ್‌ ಮಾಡಿದ ಜೋಡಿಗೆ ನೆಟ್ಟಿಗರ ಶಾಸ್ತಿ

Advertisement

Udayavani is now on Telegram. Click here to join our channel and stay updated with the latest news.

Next