Advertisement

ರಾವತ್‌ ಪತ್ನಿಗೂ ಸಮನ್ಸ್‌

10:54 PM Aug 04, 2022 | Team Udayavani |

ಮುಂಬಯಿ: ಹಣಕಾಸು ಅವ್ಯವಹಾರ ಪ್ರಕರಣ ಸಂಬಂಧ ಬಂಧಿತರಾಗಿರುವ ಶಿವಸೇನೆ ಸಂಸದ ಸಂಜಯ್‌ ರಾವತ್‌ ಅವರ ಇ.ಡಿ. ಕಸ್ಟಡಿ ಅವಧಿಯನ್ನು ವಿಶೇಷ ಕೋರ್ಟ್‌ ಗುರುವಾರ ಆ.8ರವರೆಗೂ ವಿಸ್ತರಿಸಿ ಆದೇಶ ನೀಡಿದೆ.

Advertisement

ಇನ್ನೊಂದೆಡೆ, ರಾವತ್‌ ಪತ್ನಿ ವರ್ಷಾ ರಾವತ್‌ ಅವರಿಗೂ ಇ.ಡಿ. ಸಮನ್ಸ್‌ ಜಾರಿ ಮಾಡಿದೆ. ಸದ್ಯದಲ್ಲೇ ಅವರೂ ವಿಚಾರಣೆಗೆ ಹಾಜರಾಗಲಿದ್ದು, ಪತಿ ರಾವತ್‌ ಹಾಗೂ ಇತರೆ ಆರೋಪಿಗಳ ಮುಖಾಮುಖೀ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಗುರುವಾರ ಕೋರ್ಟ್‌ಗೆ ಹಾಜರಾದ ಸಂಜಯ್‌ ರಾವತ್‌ ಅವರು, “ನನ್ನನ್ನು ಕೇಂದ್ರ ತನಿಖಾ ಸಂಸ್ಥೆಯು ಒಂದೇ ಒಂದು ಕಿಟಕಿಯೂ ಇಲ್ಲದ, ಗಾಳಿ-ಬೆಳಕು ಆಡದ ಕೊಠಡಿಯಲ್ಲಿಟ್ಟಿದೆ’ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ತನಿಖಾ ಸಂಸ್ಥೆಯಿಂದ ವಿವರಣೆ ಕೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next