Advertisement

ಅವರ ದೇಹ ಮಾತ್ರ ವಾಪಸ್ ಬರಲಿದೆ…: ಸೇನಾ ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಎಚ್ಚರಿಕೆ

10:28 AM Jun 27, 2022 | Team Udayavani |

ಮುಂಬೈ: ಶಿವಸೇನೆಯ ಸಂಸದ ಸಂಜಯ್ ರಾವುತ್ ಅವರು ಭಾನುವಾರ ಶಿವಸೇನೆಯ ಬಂಡಾಯ ಶಾಸಕರಿಗೆ ಎಚ್ಚರಿಕೆ ನೀಡಿದ್ದು, “ಅವರ ಆತ್ಮಗಳು ಸತ್ತಿವೆ ಮತ್ತು ಅವರ ದೇಹಗಳು ಮಾತ್ರ ಮುಂಬೈಗೆ ಮರಳುತ್ತವೆ” ಎಂದು ಹೇಳಿದ್ದಾರೆ.

Advertisement

“ಅಲ್ಲಿ ಇರುವ 40 ಜನರು ಜೀವಂತವಾಗಿಲ್ಲ, ಅವರ ದೇಹಗಳು ಮಾತ್ರ ಇಲ್ಲಿಗೆ ಬರುತ್ತವೆ, ಅವರ ಆತ್ಮಗಳು ಸತ್ತಿರುತ್ತವೆ, ಅವರು ಗುವಾಹಟಿಯಿಂದ ಹೊರಬಂದಾಗ, ಅವರು ಹೃದಯದಲ್ಲಿ ಜೀವಂತವಾಗಿರುವುದಿಲ್ಲ. ಈಗ ಹೊತ್ತಿಕೊಂಡಿರುವ ಕಿಡಿ ಹೇಗೆ ವ್ಯಾಪಿಸಲಿದೆ ಎಂದು ಅವರಿಗೆ ಗೊತ್ತಾಗಲಿದೆ” ಎಂದು ಗುಡುಗಿದ್ದಾರೆ.

“ಬಂಡಾಯ ಶಾಸಕರ ಆತ್ಮರಹಿತ ದೇಹಗಳು ಅಸ್ಸಾಂನಿಂದ ಬರುತ್ತವೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ನೇರವಾಗಿ ಮಹಾರಾಷ್ಟ್ರ ಅಸೆಂಬ್ಲಿಗೆ ಕಳುಹಿಸಲಾಗುವುದು” ಎಂದು ಅವರು ಕಟು ಶಬ್ಧಗಳಲ್ಲಿ ಹೇಳಿದ್ದಾರೆ.

ಕಳೆದೊಂದು ವಾರದಿಂದ ನಡೆಯುತ್ತಿರುವ ಮಹಾರಾಷ್ಟ್ರದ ರಾಜಕೀಯ ಹೈಡ್ರಾಮಾ ಈಗ ಸುಪ್ರೀಂ ಕೋರ್ಟ್‌ ಅಂಗಳವನ್ನು ತಲುಪಿದೆ. ವಿಧಾನಸಭೆಯ ಉಪಸ್ಪೀಕರ್‌ ರವಾನಿಸಿರುವ 16 ಮಂದಿ ಬಂಡಾಯ ಶಾಸಕರ ಅನರ್ಹತೆ ನೋಟಿಸ್‌ ಅನ್ನು ಪ್ರಶ್ನಿಸಿ ಸಚಿವ ಏಕನಾಥ್‌ ಶಿಂಧೆ ಭಾನುವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:ದೇಶಕ್ಕೆ ಕಪ್ಪು ಚುಕ್ಕಿ ತಂದಿಟ್ಟ ಎಮರ್ಜೆನ್ಸಿ: ಜರ್ಮನಿಯ ಮ್ಯೂನಿಚ್‌ನಲ್ಲಿ ಪ್ರಧಾನಿ ಅಭಿಮತ

Advertisement

ಮಹಾ ವಿಕಾಸ ಅಘಾಡಿ ಮೈತ್ರಿಯಿಂದ ಶಿವಸೇನೆ ಹೊರಬರಬೇಕು ಎನ್ನುವುದು ಬಂಡಾಯ ಶಾಸಕರ ಆಗ್ರಹವಾಗಿದ್ದು, ಇದಕ್ಕೆ ಒಪ್ಪದ ಸಿಎಂ ಉದ್ಧವ್‌ ಠಾಕ್ರೆ, “ರಾಜೀನಾಮೆ ನೀಡಿ, ಮತ್ತೂಮ್ಮೆ ಚುನಾವಣೆ ಎದುರಿಸಿ’ ಎಂದು ಸವಾಲು ಹಾಕಿದ್ದಾರೆ. ಅಲ್ಲದೇ, ಶಿಂಧೆ ಸೇರಿದಂತೆ 16 ಮಂದಿ ಬಂಡಾಯ ಶಾಸಕರಿಗೆ ಸಮನ್ಸ್‌ ಜಾರಿ ಮಾಡಿರುವ ಮಹಾರಾಷ್ಟ್ರ ವಿಧಾನಸಭೆ ಕಾರ್ಯಾಲಯವು, ಅನರ್ಹತೆ ದೂರಿಗೆ ಸಂಬಂಧಿಸಿ ಸೋಮವಾರ ಸಂಜೆ 5.30ರೊಳಗಾಗಿ ಲಿಖೀತ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಈ ಎಲ್ಲ ಬೆಳವಣಿಗೆಗಳು ಈಗ “ಮಹಾ’ ಡ್ರಾಮಾವನ್ನು ಸುಪ್ರೀಂ ಅಂಗಣಕ್ಕೆ ತಂದು ನಿಲ್ಲಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next