Advertisement

ರಾವುತ್ ಗೆ ಇಡಿ ಸಮನ್ಸ್; ತಲೆ ಕಡಿದರೂ ಗುವಾಹಟಿಯತ್ತ ಬರುವುದಿಲ್ಲ !

01:44 PM Jun 27, 2022 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರವಾಗಿರುವ ವೇಳೆ ಶಿವಸೇನಾ ವಕ್ತಾರ ಸಂಜಯ್ ರಾವುತ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

Advertisement

ಈ ಬಗ್ಗೆ ಕಿಡಿ ಕಾರಿ ಟ್ವೀಟ್ ಮಾಡಿರುವ ರಾವುತ್, ಇಡಿ ನನ್ನನ್ನು ಕರೆದಿದೆ ಎಂದು ನನಗೆ ತಿಳಿಯಿತು. ಒಳ್ಳೆಯದು! ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆಗಳಾಗುತ್ತಿ ವೆ. ನಾವು, ಬಾಳಾಸಾಹೇಬರ ಶಿವಸೈನಿಕರು ದೊಡ್ಡ ಯುದ್ಧವನ್ನು ಮಾಡುತ್ತಿದ್ದೇವೆ. ಇದು ನನ್ನನ್ನು ತಡೆಯುವ ಪಿತೂರಿ. ನೀವು ನನ್ನ ತಲೆ ಕಡಿದರೂ ನಾನು ಗುವಾಹಟಿ ಮಾರ್ಗದಲ್ಲಿ ಬರುವುದಿಲ್ಲ, ನನ್ನನ್ನು ಬಂಧಿಸಿ!” ಎಂದು ಸವಾಲು ಹಾಕಿದ್ದಾರೆ.

ಮುಂಬೈ ಚಾಲ್‌ನ ಮರು ಅಭಿವೃದ್ಧಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರಿಗೆ ಇಡಿ ಸಮನ್ಸ್ ನೀಡಿದೆ.

ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಅವರು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 55 ಶಿವಸೇನೆಯ ಶಾಸಕರ ಪೈಕಿ 38 ಶಾಸಕರ ಬೆಂಬಲವಿದೆ ಎಂದು ಏಕನಾಥ್ ಶಿಂಧೆ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಬಂಡಾಯ ಶಾಸಕರು ರಾಜ್ಯ ವಿಧಾನಸಭೆಯಿಂದ ಅನರ್ಹಗೊಳ್ಳದೆ, ಶಿವಸೇನೆಯನ್ನು ತೊರೆದು ಮತ್ತೊಂದು ರಾಜಕೀಯ ಪಕ್ಷವನ್ನು ರಚಿಸಲು ಶಿಂಧೆ ಬಳಗಕ್ಕೆ ಅವಕಾಶ ನೀಡಲು ಸಾಧ್ಯವಾಗುತ್ತದೆ ಎಂಬ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: ಅವರ ದೇಹ ಮಾತ್ರ ವಾಪಸ್ ಬರಲಿದೆ…: ಸೇನಾ ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಎಚ್ಚರಿಕೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next