Advertisement

ಹೆಂಡತಿ, ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಸಂಜಯ್‌ ದತ್‌ ಜಾಲಿ ರೈಡ್‌

03:54 PM Feb 18, 2017 | Team Udayavani |

ಆಗ್ರಾ: ತನ್ನ ಬಾಲಿವುಡ್‌ ಪುನರಾಗಮನದ “ಭೂಮಿ’ ಚಿತ್ರಕ್ಕೆ ಇಲ್ಲಿಗ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ನಟ ಸಂಜಯ್‌ ದತ್‌ ಅವರಿಂದು ಪತ್ನಿ ಮಾನ್ಯತಾ ಮತ್ತು ತನ್ನಿಬ್ಬರು ಮಕ್ಕಳನ್ನು ಕೂರಿಸಿಕೊಂಡು ಸ್ಕೂಟರ್‌ನಲ್ಲಿ ನಗರದ ಗಲ್ಲಿ ಗಲ್ಲಿಯನ್ನು ಸುತ್ತಾಡಿ ಜಾಲಿ ರೈಡ್‌ ನಡೆಸಿ ಅತ್ಯಪೂರ್ವವಾದ ರಂಜನೆಯನ್ನು ಪಡೆದರು.

Advertisement

57ರ ಹರೆಯದ ಸಂಜಯ್‌ ದತ್‌ ಪತ್ನಿ, ಹಾಗೂ ಇಬ್ಬರು ಮಕ್ಕಳಾದ ಪುತ್ರಿ ಇಕ್‌ರಾ ಮತ್ತು ಪುತ್ರ ಶಹರಾನ್‌ ಅವರನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡ ಚಿತ್ರವನ್ನು ಮಾನ್ಯತಾ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. 

ಪತಿ ಹಾಗೂ ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಕುಳಿತುಕೊಂಡು ಆಗ್ರಾದ ಗಲ್ಲಿ ಗಲ್ಲಿಯನ್ನು ಸುತ್ತಾಡುವಲ್ಲಿನ ಸರಳ, ಸುಂದರ ಹಾಗೂ ಸಂತೋಷಭರಿತ ಬೇರಾವುದೂ ಇಲ್ಲ ಎಂದು ಮಾನ್ಯತಾ, ಫೋಟೋ ಜತೆಗೆ ಹಾಕಿರುವ ಬರಹದಲ್ಲಿ ಹೇಳಿದ್ದಾರೆ. 

ಅಂದ ಹಾಗೆ ಸಂಜಯ್‌ ದತ್‌ ಬಾಲಿವುಡ್‌ ಪುನರಾಗಮನದ “ಭೂಮಿ’ ಚಿತ್ರವನ್ನು ಉಮಂಗ್‌ ಕುಮಾರ್‌ ನಿರ್ದೇಶಿಸುತ್ತಿದ್ದು ಭೂಷಣ್‌ ಕುಮಾರ್‌ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಆದಿತಿ ರಾವ್‌ ಹೈದರಿ ಕೂಡ ನಟಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next