ಸಿನಿಮಾ ನಟ, ನಟಿಯರ ಅಭಿಮಾನಿಗಳು ಹುಟ್ಟುಹಬ್ಬಕ್ಕೆ, ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ವಿಶಿಷ್ಟವಾದ ಮಾರ್ಗಗಗಳನ್ನು ಅನುಸರಿಸುವ ಮೂಲಕ ಪ್ರಚಾರಗಿಟ್ಟಿಸಿಕೊಳ್ಳುವುದನ್ನು ಕಂಡಿದ್ದೇವೆ. ಅದೇ ರೀತಿ ಕೆಲವು ವರ್ಷಗಳ ಹಿಂದೆ ಬಾಲಿವುಡ್ ನಟ ಸಂಜಯ್ ದತ್ ಹೆಸರಿಗೆ ಮಹಿಳಾ ಅಭಿಮಾನಿಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ಬರೆದಿಟ್ಟಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ:
2018ರಲ್ಲಿ ಸಂಜಯ್ ದತ್ ಗೆ ಪೊಲೀಸ್ ಠಾಣೆಯಿಂದ ಕರೆಯೊಂದು ಬಂದಿದ್ದು, ನಿಶಾ ಪಾಟೀಲ್ (65ವರ್ಷ0 ಎಂಬಾಕೆ ಸುಮಾರು 15 ದಿನಗಳ ಹಿಂದೆ ನಿಧನರಾಗಿದ್ದು, ಅವರು ತಮ್ಮೆಲ್ಲಾ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆದಿಟ್ಟಿರುವುದಾಗಿ ಮಾಹಿತಿ ನೀಡಿದ್ದರು!
ತನ್ನ ನೆಚ್ಚಿನ ನಟನಿಗೆ ತನ್ನೆಲ್ಲಾ ಆಸ್ತಿಯ ವಿಲ್ ಬರೆದಿಟ್ಟಿದ್ದು, ಅವೆಲ್ಲವೂ ಸಂಜಯ್ ದತ್ ಗೆ ಸೇರಬೇಕು ಎಂದು ನಿಶಾ ಪಾಟೀಲ್ ಬ್ಯಾಂಕ್ ಗೆ ಹಲವಾರು ಪತ್ರಗಳನ್ನೂ ಬರೆದಿದ್ದರಂತೆ. ನಿಶಾ ಪಾಟೀಲ್ ಚಿನ್ನಾಭರಣ, ಫ್ಲ್ಯಾಟ್ ಸೇರಿದಂತೆ ಬರೋಬ್ಬರಿ ಸಂಜಯ್ ದತ್ ಹೆಸರಿಗೆ 72 ಕೋಟಿ ರೂಪಾಯಿ ಆಸ್ತಿ ಬರೆದಿಟ್ಟಿದ್ದರು.
Related Articles
ಅಭಿಮಾನಿಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆದಿಟ್ಟಿರುವ ವಿಚಾರ ಕೇಳಿ ಶಾಕ್ ಆಗಿತ್ತು ಎಂದು ಸಂಜಯ್ ದತ್ ಹೇಳಿದ್ದು, ನನಗೆ ನಿಶಾ ಪಾಟೀಲ್ ಯಾರೆಂಬುದೇ ಗೊತ್ತಿಲ್ಲ. ಆದರೆ ಅವರ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ನನಗೆ ಅವರ ಚಿನ್ನಾಭರಣ, ಆಸ್ತಿ ಯಾವುದು ಬೇಡ ಅವೆಲ್ಲವನ್ನೂ ಅವರ ಮಕ್ಕಳಿಗೆ ವರ್ಗಾಯಿಸಲು ಸಂಜಯ್ ದತ್ ತಿಳಿಸಿದ್ದರು.
ಈ ವಿಚಾರವನ್ನು ಸಂಜಯ್ ದತ್ ಮುಜುಗರದಿಂದಲೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಬಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ದತ್ ಕನ್ನಡದ ಕೆಜಿಎಫ್ 2 ಭಾಗದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲೂ ಕಮಾಲ್ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.