Advertisement

ಕೆಜಿಎಫ್ ಚಾಪ್ಟರ್‌-2ನಲ್ಲಿ ಸಂಜಯ್‌ ದತ್‌?

11:47 AM Nov 10, 2018 | |

ಯಶ್‌ ಅಭಿನಯದ “ಕೆಜಿಎಫ್’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಟ್ರೇಲರ್‌ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನ ಸಿನಿ ಪ್ರೇಮಿಗಳು ಖುಷಿಯಾಗಿದ್ದಾರೆ. ಚಿತ್ರ ಡಿಸೆಂಬರ್‌ 21 ಕ್ಕೆ ತೆರೆಕಾಣುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ “ಕೆಜಿಎಫ್’ ಎರಡು ಭಾಗಗಳಲ್ಲಿ ಬರುತ್ತಿದ್ದು, ಮೊದಲಿಗೆ ಚಾಪ್ಟರ್‌ 1 ಬಿಡುಗಡೆಯಾಗುತ್ತಿದೆ.

Advertisement

ಆ ನಂತರ ಚಾಪ್ಟರ್‌ 2. “ಕೆಜಿಎಫ್ -ಚಾಪ್ಟರ್‌-2’ನಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ಕಾಣಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಈ ಮೂಲಕ “ಕೆಜಿಎಫ್’ ತಾರಾಗಣ ಹಾಗೂ ನಿರೀಕ್ಷೆ ಮತ್ತಷ್ಟು ಹೆಚ್ಚಲಿದೆ. ಹೌದು, ಈಗಾಗಲೇ ನಿರ್ಮಾಪಕ ವಿಜಯ್‌ ಕಿರಗಂದೂರು ಹಾಗೂ ಚಿತ್ರತಂಡ ಸಂಜಯ್‌ ದತ್‌ ಅವರನ್ನು ಭೇಟಿಯಾಗಿ ಚಿತ್ರದ ಬಗ್ಗೆ ಹೇಳುವ ಜೊತೆಗೆ ಕೆಲವು ದೃಶ್ಯಗಳನ್ನು ಕೂಡಾ ತೋರಿಸಿದೆ.

ಜೊತೆಗೆ ಚಾಪ್ಟರ್‌ 2 ನಲ್ಲಿ ಬರುವ ಪ್ರಮುಖ ಪಾತ್ರವೊಂದನ್ನು ಮಾಡುವಂತೆ ಕೇಳಿಕೊಂಡಿದೆ. ಕೆಜಿಎಫ್ನ ತುಣುಕುಗಳನ್ನು ನೋಡಿ ಸಂಜಯ್‌ ದತ್‌ ಕೂಡಾ ಖುಷಿಯಾಗಿದ್ದಾರೆ. ಒಂದು ವೇಳೆ ಸಂಜಯ್‌ ದತ್‌ ನಟಿಸಲು ಒಪ್ಪಿದರೆ “ಕೆಜಿಎಫ್ ಚಾಪ್ಟರ್‌-1’ನ ಕೊನೆಯಲ್ಲಿ ಅವರ ಮುಖ ತೋರಿಸಿ, ಮುಂದಿನ ಭಾಗದಲ್ಲಿ ಅವರಿರುವ ಸುಳಿವು ನೀಡುವ ಯೋಚನೆ ಕೂಡಾ ಚಿತ್ರತಂಡದ ತಲೆಯಲ್ಲಿದೆ.

ಚಾಪ್ಟರ್‌ 2ನಲ್ಲಿ ಪ್ರಮುಖ ಪಾತ್ರವೊಂದಿದ್ದು, ಆ ಪಾತ್ರವನ್ನು ಸಂಜಯ್‌ ದತ್‌ ಮಾಡಿದರೆ ಚೆಂದ ಎಂಬ ಕಾರಣಕ್ಕೆ ಚಿತ್ರತಂಡ ಅವರನ್ನು ಕೇಳಿಕೊಂಡಿದೆ. ಜೊತೆಗೆ ಈಗಾಗಲೇ “ಕೆಜಿಎಫ್’ಗೆ ಹಿಂದಿಯಲ್ಲೂ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಯಾಗಿದ್ದು, ಸಂಜಯ್‌ ದತ್‌ ಕೂಡಾ ಚಿತ್ರದ ಬಗ್ಗೆ ಆಸಕ್ತಿ ತೋರಿದ್ದಾರೆನ್ನಲಾಗಿದೆ. 

Advertisement

Advertisement

Udayavani is now on Telegram. Click here to join our channel and stay updated with the latest news.

Next