ಕೋವಿಡ್ ಕಾಲಿಡುವ ತನಕ ಸ್ಯಾನಿಟೈಸರ್ ಇಷ್ಟೊಂದು ಚಿರಪರಿ ಚಿತ ಆಗಿರಲಿಲ್ಲ. ಆದರೆ, ಈಗ ಸ್ಯಾನಿಟೈಸರ್ ಇಲ್ಲದ ಮನೆಯಿಂದ, ಕಿಸಾಗೋತಮಿಗೆ ಸಾಸಿವೆ ಕಾಳೂ ಸಿಗುವುದಿಲ್ಲ. ಈ ಸೋಂಕು ನಿವಾರಕ ಅಷ್ಟು ಪರಿಚಿತ.
ಈಗ ಸ್ಯಾನಿಟೈಸರ್ ಕೂಡ ಆತ್ಮನಿರ್ಭರ ಕೂಸು. ಬಾಗಲಕೋಟೆ ಜಿಲ್ಲೆಯ ನಿರಾಣಿ ಉದ್ಯಮ ಸಮೂಹದ ನಿರಾಣಿ ಶುಗರ್ಸ್ ಮತ್ತು ಸಾಯಿಪ್ರಿಯಾ ಶುಗರ್‌ನ ಎಂಥಿನಾಲ್ ಘಟಕದಲ್ಲಿ, ನಿತ್ಯ 50 ಸಾವಿರ ಲೀಟರ್ ಗೂ ಹೆಚ್ಚು ಸ್ಯಾನಿಟೈಸರ್ ಉತ್ಪಾದನೆ ಯಾಗುತ್ತಿದೆ. ಮುಧೋಳದ ನಿರಾಣಿ ಶುಗರ್ಸ್‌ನಿಂದ ಬಿ-ಸೇಫ್ ಮತ್ತು ಇವೋ ಲೈಫ್ ಹೆಸರಿನಡಿ ಹಾಗೂ ಸಾಯಿ ಪ್ರಿಯಾ ಶುಗರ್ಸ್ ಎಂಥಿನಾಲ್ ಘಟಕದಿಂದ ಲೈಫ್ ಕೇರ್ ಹೆಸರಿನ ಸ್ಯಾನಿಟೈಸರ್‌ಗೆ ಈಗ ದೇಶದ ಹಲವು ರಾಜ್ಯಗಳಲ್ಲಿ ಬಹು ಬೇಡಿಕೆ ಇದೆ. ಕರ್ನಾಟಕದ ಎಲ್ಲ ಜಿಲ್ಲೆಗಳು, ಗುಜರಾತ್, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರ, ತಮಿಳುನಾಡು ಹಾಗೂ ಕೇರಳಕ್ಕೆ ಬಾಗಲಕೋಟೆಯ ಈ ಸ್ಯಾನಿ ಟೈಸರ್ ಪೂರೈಕೆ ಯಾಗುತ್ತಿದೆ.
ಕೇಂದ್ರದ ಕೃಪೆ… : ಲಾಕ್‌ಡೌನ್ ಆರಂಭದಲ್ಲಿ ಪ್ರತಿಷ್ಠಿತ ಕಂಪನಿಗಳ ಸ್ಯಾನಿಟೈಸರ್ ಮಾರುಕಟ್ಟೆಗೆ ಬರುವ ಮುನ್ನವೇ ಖಾಲಿ ಆಗಿರುತ್ತಿದ್ದವು. ಸಾಮಾನ್ಯ ಜನ ಸ್ಯಾನಿಟೈಸರ್ ಸಿಗದೆ ಪರದಾಡಿದ್ದರು. ಇದನ್ನು ಮನಗಂಡ ಕೇಂದ್ರ ಸರ್ಕಾರ, ದೇಶದ ಸಕ್ಕರೆ ಕಾರ್ಖಾನೆಗಳಲ್ಲಿ ಯಾವ ಕಾರ್ಖಾನೆ ಎಂಥಿನಾಲ್ ಉತ್ಪಾದನೆ ಮಾಡುತ್ತದೆಯೋ ಆ ಘಟಕಕ್ಕೆ, ಸ್ಯಾನಿಟೈಸರ್ ಉತ್ಪಾದನೆಗೂ ಅನುಮತಿ ಕೊಟ್ಟಿತ್ತು. ಹೀಗೆ ಅನುಮತಿ ಪಡೆದವರಲ್ಲಿ ಮುಧೋಳದ ನಿರಾಣಿ ಶುಗರ್ಸ್ (ಎರಡು ಘಟಕ), ಜಮಖಂಡಿ ತಾಲೂಕಿನ ಹಿಪ್ಪರಗಿಯ ಸಾಯಿಪ್ರಿಯಾ ಶುಗರ್ಸ್ ಮುಖ್ಯವಾದವು. ಆರಂಭ ದಲ್ಲಿ ಜನರಿಗೆ ಸುಮಾರು 1.50 ಕೋಟಿ ಮೊತ್ತದ ಸ್ಯಾನಿಟೈಸರ್ ಉಚಿತವಾಗಿ ನೀಡಿದ್ದೇ ಕಂಪನಿಗೆ ಪ್ಲಸ್ ಪಾಯಿಂಟ್ ಆಯಿತು. ಕೊರೊನಾ ಭೀತಿಯಲ್ಲಿದ್ದ ಜನರಿಗೆ, ಇದು ಸಹಕಾರಿಯೂ ಆಯಿತು. ಇತ್ತ ಇವೋ ಲೈಫ್, ಬಿ-ಸೇಫ್ ಹಾಗೂ ಲೈಫ್ ಕೇರ್ ಸ್ಯಾನಿಟೈಸರ್ ಬೇಗನೆ ಜನರ ಗಮನ ಸೆಳೆಯಿತು.
ಈ ಸ್ಯಾನಿಟೈಸರ್ ಉದ್ಯಮದ ಹಿಂದೆ ದೊಡ್ಡ ತಂಡವೇ ಇದೆ. ಆರಂಭದಲ್ಲಿ ಸ್ಯಾನಿಟೈಸರನ್ನು ಮುರುಗೇಶ ನಿರಾಣಿ ಅವರು ಉಚಿತವಾಗಿ ಜನರಿಗೆ ವಿತರಿಸಲು ಸಲಹೆ ನೀಡಿದರೆ, ಅದಕ್ಕೆ ಉತ್ತಮ ಮಾರ್ಕೆಟ್ ತಂದುಕೊಡಲು ಸಮೂಹದ ಸಿಎಂಡಿ ಸಂಗಮೇಶ ನಿರಾಣಿ, ವಿಜಯನಿರಾಣಿ,ವಿಶಾಲ್ ನಿರಾಣಿ ಹಾಗೂ ಪ್ರಜ್ವಲ್ ನಿರಾಣಿ ಒಟ್ಟಾಗಿ ಶ್ರಮಿಸಿದರು. ಪ್ರಸ್ತುತ, ಸ್ಯಾನಿಟೈಸರ್ ಮಾರಾಟದ ಮಾರುಕಟ್ಟೆ ವ್ಯವಸ್ಥೆ ಹೊಣೆ ಹೊತ್ತಿರುವವರು, ಅಭಿಷೇಕ ಜನವಾದ.
ತಯಾರಿ ಹೇಗೆ?: ಶೇ.80ರಷ್ಟು ಅಲ್ಕೋಹಾಲ್ ಆಧಾರಿತ ಈ ಸ್ಯಾನಿಟೈಸರ್ ಉತ್ಪಾದನೆಗೆ ಎಂಥಿನಾಲ್, ಹೈಡ್ರೋಜನ್ ಪೆರಾಕ್ಸೆ„ಡ್, ಗ್ಲಿಸರಿನ್, ಪರ್ಫ್ಯೂಮ್ ಹಾಗೂ ಡಿಸ್ಟಲರಿ ವಾಟರ್ ಬಳಸಲಾ ಗುತ್ತಿದೆ. 100 ಎಂ.ಎಲ್.ನಿಂದ ಹಿಡಿದು 500 ಎಂ.ಎಲ್., 5 ಲೀಟರ್, 10 ಲೀಟರ್ ಹಾಗೂ 20 ಲೀಟರ್ ಕ್ಯಾನ್‌ಗಳೂ ಲಭ್ಯ ಇವೆ. 100 ಎಂ.ಎಲ್. ಸ್ಯಾನಿಟೈಸರ್‌ಗೆ 28 ರೂ. ದರವಿದೆ. ನಿರಾಣಿ ಉದ್ಯಮ ಸಮೂಹದ ವಿಜಯ ಸೌಹಾರ್ದ ಸಹಕಾರಿ ಸಂಘದ 50 ಶಾಖೆಗಳಲ್ಲೂ ಮುಖ್ಯ ಬೆಲೆಯಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗಿದೆ.
ಎಲ್ಲೆಲ್ಲಿಗೆ ಮಾರಾಟ? : ಗುಜರಾತ್, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮುಖ್ಯ ಡೀಲರ್‌ಗಳು ಈ ಸ್ಯಾನಿಟೈಸರ್‌ಗೆ ಮಾರುಕಟ್ಟೆ ಕಲ್ಪಿಸಿದ್ದಾರೆ.