Advertisement

ನಗರಸಭೆಯಿಂದ ಸ್ಯಾನಿಟೈಸ್‌ ವ್ಯವಸ್ಥೆ

06:55 PM Apr 28, 2021 | Team Udayavani |

ಕನಕಪುರ: ನಗರದಲ್ಲಿ ಕೊರೊನಾಹರಡುವಿಕೆಯನ್ನು ತಡೆಗಟ್ಟಲು ನಗರಸಭೆ ಸಂಪೂರ್ಣ ನಗರವನ್ನು ಸ್ಯಾನಿಟೈಸ್‌ಮಾಡಲು ಮುಂದಾಗಿದೆ.ತಾಲೂಕಿನಲ್ಲಿ ಕೊರೊನಾವೇಗವಾಗಿಯೇ ಹರಡುತ್ತಿದೆ ಕಳೆದಮೂರು ದಿನಗಳ ಹಿಂದೆ ಒಂದೇ ದಿನ100 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

Advertisement

ರಾಜ್ಯ ಸರ್ಕಾರ ವಾರತ್ಯಂದಶನಿವಾರ ಮತ್ತು ಭಾನುವಾರ ಕರ್ಫ್ಯೂ ಘೋಷಿಸಿದ್ದರಿಂದ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಡಿವಾಣ ಬಿದ್ದಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸೋಮವಾರ ಕೊರೊನಾ ಸೋಂಕಿನ ಪ್ರಕರಣಗಳುಅರ್ಧಕ್ಕೆ ಇಳಿದಿತ್ತು ಕರ್ಫ್ಯೂ ತೆರವಾದ ಬಳಿಕ ಮಂಗಳವಾರ ಸೋಂಕಿತರಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿದೆ.

ವ್ಯಾಪಕವಾಗಿ ಹರಡುತ್ತಿರುವಕೊರೊನಾ ಸೋಂಕನ್ನು ನಿಯಂತ್ರಣಕ್ಕೆತರಲು ನಗರ ಸಭೆ ಸಜ್ಜಾಗಿದೆ ನಗರದ31 ವಾರ್ಡ್‌ಗಳಲ್ಲೂ ಸ್ಯಾನಿಟೈಜ್‌ಮಾಡಲು ನಗರ ಸಭೆ ಅಧ್ಯಕ್ಷ ಮಕೂºಲ್‌ಪಾಷ ನೇತ್ರತ್ವದಲ್ಲಿ ಅಧಿಕಾರಿಗಳುಮುಂದಾಗಿದ್ದಾರೆ.ಈ ಗಾಗಲೇ ನಗರದ ಮಳಗಾಳು,ಕೋಟೆ, ಮೇಗಳ ಬೀದಿ, ಪೊಲೀಸ್‌ಕ್ವಾಟ್ರಸ್‌, ಹೌಸಿಂಗ್‌ಬೋರ್ಡ್‌,ಬಾಣಂತಮಾರಮ್ಮ ಬಡಾವಣೆಗಳಲ್ಲಿ ಸ್ಯಾನಿಟೈಜ್‌ ಮಾಡಲಾಗಿದೆ. ಉಳಿದಂತೆಮೇಳೆಕೊಟೆ, ನಿರ್ವಾಣೇಶ್ವರ ನಗರನೀಲಕಂಠೆಶ್ವರ ಬಡಾವಣೆ,ಬಸವೇಶ್ವರನಗರ, ಚಾಮುಂಡೇಶ್ವರಿ ಕಲ್ಯಾಣಮಂಟಪದ ಬೀದಿ, ಕುರಿಪೇಟೆ,ಅಂಬೇಡ್ಕರ್‌ ನಗರ ವಾರ್ಡ್‌ಗಳಲ್ಲಿಸ್ಯಾನಿಟೈಜ್‌ ಮಾಡಲು ಸಿದ್ಧತೆನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next