Advertisement
ಯಾವುದೇ ಶ್ರೇಯಾಂಕ ಹೊಂದಿಲ್ಲದ ಸಾನಿಯಾ ಮಿರ್ಜಾ- ನಾದಿಯಾ ಕಿಚೆನಾಕ್ ಮೊದಲ ಸುತ್ತಿನಲ್ಲಿ ಜಾರ್ಜಿಯಾದ ಓಕ್ಸಾನಾ ಕಲಾಶಿಂಕೋವಾ-ಜಪಾನಿನ ಮಿಯು ಕಾಟೊ ಅವರನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದರೆ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನಿನ 4ನೇ ಶ್ರೇಯಾಂಕದ ಜಾರ್ಜಿಯಾ ಗಾರ್ಸಿಯಾ ಪೆರೆಜ್-ಸಾರಾ ಸೊರಿಬೆಸ್ ಟೋರ್ಮೊ ಅವರನ್ನು ಎದುರಿಸುವ ಸಾಧ್ಯತೆ ಇದೆ.
ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲೂ ಸಾನಿಯಾ ಮಿರ್ಜಾ ಸ್ಪರ್ಧೆಗಿಳಿಯಲಿ ದ್ದಾರೆ. ಮಿಕ್ಸೆಡ್ ಡಬಲ್ಸ್‌ನಲ್ಲಿ ಅವರು ಭಾರತದವರೇ ಆದ ರೋಹನ್ ಬೋಪಣ್ಣ ಜತೆಗೂಡಿ ಆಡುವರು. ಸಾನಿಯಾ-ಬೋಪಣ್ಣ 2016ರ ರಿಯೋ ಒಲಿಂಪಿಕ್ಸ್ ಬಳಿಕ ಮಿಶ್ರ ಡಬಲ್ಸ್‌ನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು ಸಾನಿಯಾ ಮಿರ್ಜಾ ಆಸ್ಟ್ರೇಲಿ ಯನ್ ಓಪನ್‌ನಲ್ಲಿ ಅಮೆರಿಕದ ರಾಜೀವ್ ರಾಮ್ ಜತೆಗೂಡಿ ಆಡಬೇಕಿತ್ತು. ಆದರೆ ರಾಮ್ ಈ ಕೂಟದಿಂದ ಹಿಂದೆ ಸರಿದ ಕಾರಣ ಬೋಪಣ್ಣ ಜತೆಯಾದರು. ಬೋಪಣ್ಣ ಮೊನ್ನೆಯಷ್ಟೇ ವೆಸ್ಲಿ ಕೂಲೋಫ್ ಜತೆಗೂಡಿ ಕತಾರ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದಾರೆ.