Advertisement

ವಿಚ್ಛೇದನದ ವದಂತಿಗಳ ನಡುವೆ ಸಾನಿಯಾ-ಶೋಯೆಬ್ ಟಾಕ್ ಶೋ

06:45 PM Nov 13, 2022 | Team Udayavani |

ದುಬೈ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ಥಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವೆ ಎಲ್ಲವೂ ಸರಿಯಾಗಿದೆಯಂತೆ. ದಂಪತಿಗಳ ಆಪಾದಿತ ವಿಚ್ಛೇದನದ ಊಹಾಪೋಹಗಳ ಮಧ್ಯೆ, ಓಟಿಟಿ ಪ್ಲಾಟ್‌ಫಾರ್ಮ್ ಉರ್ದುಫ್ಲಿಕ್ಸ್, ಶನಿವಾರ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಸಾನಿಯಾ ಮತ್ತು ಶೋಯೆಬ್ ತಮ್ಮ ಕಾರ್ಯಕ್ರಮದ ಶೀರ್ಷಿಕೆ `ದಿ ಮಿರ್ಜಾ ಮಲಿಕ್ ಶೋ’ನೊಂದಿಗೆ ಬರುತ್ತಿದ್ದಾರೆ ಎಂದು ಘೋಷಿಸಿದೆ.

Advertisement

ಸ್ಟಾರ್ ದಂಪತಿಗಳನ್ನೊಳಗೊಂಡ ಕಾರ್ಯಕ್ರಮದ ಪೋಸ್ಟರ್ ಅನ್ನು ಹಂಚಿಕೊಂಡ ಪೋಸ್ಟ್, “ಮಿರ್ಜಾ ಮಲಿಕ್ ಶೋ” ಅತಿ ಶೀಘ್ರದಲ್ಲಿ ಉರ್ದುಫ್ಲಿಕ್ಸ್‌ನಲ್ಲಿ ಮಾತ್ರ” ಎಂದು ಬರೆಯಲಾಗಿದೆ.

ಪೋಸ್ಟರ್‌ನಲ್ಲಿ ಸಾನಿಯಾ ಮತ್ತು ಶೋಯೆಬ್ ತನ್ನ ಭುಜದ ಮೇಲೆ ಕೈಯಿಟ್ಟು ಹಸಿರು ಗೋಡೆಯ ಮುಂದೆ ನಿಂತಿದ್ದಾರೆ. ನಿರ್ದಿಷ್ಟ ಪ್ರಕಟಣೆಯು ನೆಟಿಜನ್‌ಗಳನ್ನು ಗೊಂದಲಕ್ಕೀಡು ಮಾಡಿದೆ. “ಇದು ಪ್ರಚಾರದ ಸಾಹಸವಾ?” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ಆದ್ದರಿಂದ ವಿಚ್ಛೇದನವು ಪ್ರಚಾರದ ಉದ್ದೇಶಕ್ಕಾಗಿ. ನಾಚಿಕೆಗೇಡು,” ಎಂದು ಹಲವರು ಬರೆದಿದ್ದಾರೆ.

ದಂಪತಿಗಳ ಕಾರ್ಯಕ್ರಮದ ಬಗ್ಗೆ ತಿಳಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅವರ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next