Advertisement

ಹೋಬರ್ಟ್‌: ಸಾನಿಯಾ ಪುನರಾಗಮನ

09:44 AM Nov 29, 2019 | Team Udayavani |

ಮುಂಬಯಿ: ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮುಂದಿನ ಜನವರಿಯಲ್ಲಿ ನಡೆಯಲಿರುವ ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೂರ್ನಿಯಲ್ಲಿ ವೃತ್ತಿಪರ ಟೆನಿಸ್‌ಗೆ ಮರಳುವುದನ್ನು ಖಚಿತಪಡಿಸಿದ್ದಾರೆ.

Advertisement

2017ರ ಚೀನ ಓಪನ್‌ ಬಳಿಕ ಸಾನಿಯಾ ಮಿರ್ಜಾ ಯಾವುದೇ ಟೆನಿಸ್‌ ಕೂಟಗಳಲ್ಲಿ ಭಾಗವಹಿಸಿಲ್ಲ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅವರು ಗಂಡು ಮಗುವಿನ ತಾಯಿಯಾಗಿದ್ದರು.

“ನಾನು ಹೋಬರ್ಟ್‌ ಪಂದ್ಯಾವಳಿಯಲ್ಲಿ ಆಡಲಿದ್ದೇನೆ. ಬಳಿಕ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲೂ ಆಡುವ ಯೋಜನೆಯಲ್ಲಿದ್ದೇನೆ. ಇದಕ್ಕಾಗಿ ಮುಂಬಯಿಯಲ್ಲಿ ನಡೆಯುವ ಐಟಿಎಫ್ ವನಿತಾ ಕೂಟವೊಂದರಲ್ಲಿ ಪಾಲ್ಗೊ ಳ್ಳಬೇಕೆಂದಿರುವೆ’ ಎಂದು ಸಾನಿಯಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next