Advertisement

ಆರ್‌ ಸಿಬಿ ಮಹಿಳಾ ತಂಡಕ್ಕೆ ಮೆಂಟರ್‌ ಆದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ

12:38 PM Feb 15, 2023 | Team Udayavani |

ಬೆಂಗಳೂರು: ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಚೂಚ್ಚಲ ಆವೃತ್ತಿಯ  ಮಹಿಳಾ ಪ್ರಿಮಿಯರ್‌ ಲೀಗ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಂಟರ್‌ ಆಗಿ ನೇಮಿಸಿದೆ.

Advertisement

ಇದುವರೆಗೆ ಸಾನಿಯಾ ಮಿರ್ಜಾ 6 ಗ್ರ್ಯಾಡ್ ಸ್ಲ್ಯಾಮ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯನ್‌ ಓಪನ್‌ ನ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ರೋಹನ್‌ ಬೋಪಣ್ಣ ಅವರೊಂದಿಗೆ ರನ್ನರ್ಸ್‌ ಅಪ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಟೆನ್ನಿಸ್‌ ಲೋಕಕ್ಕೆ ವಿದಾಯ ಹೇಳಿರುವ ಸಾನಿಯಾ ಮಿರ್ಜಾ ಮೆಂಟರ್‌ ಆಗುವ ಮೂಲಕ ಹೊಸ ಯಾನವನ್ನು ಆರಂಭಿಸಿದ್ದಾರೆ.

ಈ ಬಗ್ಗೆ ಆರ್‌ ಸಿಬಿ ಫ್ರಾಂಚೈಸಿ ಅಧಿಕೃತ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಕೊಟ್ಟಿದ್ದು, ವಿಡಿಯೋವೊಂದನ್ನು ಹಂಚಿಕೊಂಡು ತನ್ನ ತಂಡದ ಮೆಂಟರ್‌ ನ್ನು ಪರಿಚಯಿಸಿದೆ.

ಫೆ.13 ರಂದು ಮಹಿಳಾ ಪ್ರಿಮಿಯರ್‌ ಲೀಗ್‌ ನ ಮೊದಲ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆದಿದೆ. ಈ ವೇಳೆ ಆರ್‌ ಸಿಬಿ ಸೇರಿದಂತೆ ಇತರ ತಂಡಗಳು ದೇಶಿಯ ಹಾಗೂ ವಿದೇಶಿ ಆಟಗಾರ್ತಿಯರನ್ನು ಖರೀದಿಸಿದೆ.

ಮಾರ್ಚ್‌ 4 ರಿಂದ ಮಹಿಳಾ ಪ್ರಿಮಿಯರ್‌ ಲೀಗ್‌ ಆರಂಭವಾಗಲಿದೆ. ಮಾರ್ಚ್‌ 5 ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬಯಿನಲ್ಲಿ ಆರ್‌ ಸಿಬಿ ತನ್ನ ಮೊದಲ ಪಂದ್ಯವನ್ನು ಆಡಲಿದೆ.

Advertisement

ಆರ್‌ ಸಿಬಿ ಮಹಿಳಾ ತಂಡ:

ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀದರ್ ನೈಟ್, ಡೇನ್ ವ್ಯಾನ್ ನೀಕೆರ್ಕ್, ಪ್ರೀತಿ ಬೋಸ್, ಕೋಮಲ್ ಖೇಮ್‌ನಾರ್, ಮೆಗನ್ ಶುಟ್, ಸಹನಾ ಪವಾರ್.

 

Advertisement

Udayavani is now on Telegram. Click here to join our channel and stay updated with the latest news.

Next