Advertisement

ಉದ್ದಿಮೆ ಅವಶ್ಯಕ ಕೌಶಲ್ಯ ಅಳವಡಿಸಿಕೊಳ್ಳಿ : ವಿದ್ಯಾರ್ಥಿಗಳನ್ನು ಕಾರ್ಯಕ್ಕೆ ನಿಯೋಜಿಸಿ

09:32 PM Oct 06, 2020 | sudhir |

ಬೆಳಗಾವಿ: ವಾಣಿಜ್ಯಶಾಸ್ತ್ರ ಪದವೀಧರರು ಉದ್ದಿಮೆಯ ಅವಶ್ಯಕತೆಗೆ ತಕ್ಕಂತೆ ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಮುಂಬರುವ ದಿನಗಳಲ್ಲಿ ವಾಣಿಜ್ಯ ಶಾಸ್ತ್ರಕ್ಕೆ ಹೆಚ್ಚಿನ ಮಹತ್ವ ಲಭಿಸಲಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಂ. ರಾಮಚಂದ್ರಗೌಡ ಅಭಿಪ್ರಾಯಪಟ್ಟರು.

Advertisement

ಇಲ್ಲಿಯ ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಘಟಕ ಮಹಾವಿದ್ಯಾಲಯ ಮತ್ತು ರಾಚವಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ರವಿವಾರ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ಪದವಿ ಮಟ್ಟದಲ್ಲಿ ಸಿ.ಬಿ.ಸಿ.ಎಸ್‌. ಪಠ್ಯಕ್ರಮ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮದ ಅವಶ್ಯಕತೆ ಮತ್ತು ವಾಣಿಜ್ಯ ಪದವಿ ವಿದ್ಯಾರ್ಥಿಗಳ ಕೌಶಲ್ಯದಲ್ಲಿ ಹೊಂದಾಣಿಕೆ ಇಲ್ಲದ್ದರಿಂದ ಕೇವಲ ಶೇ. 10 ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗ ಪಡೆಯುತ್ತಿದ್ದರು. ಈಗ ಸಿ.ಬಿ.ಸಿ.ಎಸ್‌. ಮಾದರಿಯ ಪಠ್ಯಕ್ರಮದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದ್ದು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಾಣಿಜ್ಯಶಾಸ್ತ್ರ ಪದವಿಗೆ ಶೇ. 65 ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ ಎಂದರು.

ಇದನ್ನೂ ಓದಿ :ಬಿಜೆಪಿ ಸರ್ಕಾರದ ಬೆದರಿಕೆಗೆ ಕಾಂಗ್ರೆಸ್ ಹೆದರಲ್ಲ: ಸಿಪಿಐ ದಾಳಿಗೆ ಈಶ್ವರ ಖಂಡ್ರೆ ಕಿಡಿ

ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿಯೂ ಸಹ ಇದೇ ರೀತಿ ವಾಣಿಜ್ಯ ಶಿಕ್ಷಣ ಮಹತ್ವ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ಈ ದಿಶೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಅವಶ್ಯಕ ಕೌಶಲ್ಯ ಅಳವಡಿಸಿಕೊಳ್ಳುವಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅವರು ಹೇಳಿದರು.

Advertisement

ರಾ.ಚ.ವಿ.ಯ ವಾಣಿಜ್ಯಶಾಸ್ತ್ರ ವಿಭಾಗದ ಕಾರ್ಯಾಧ್ಯಕ್ಷ ಪ್ರೋ | ಬಿ.ಎಸ್‌.ನಾವಿ ಅವರು ಕೌಶಲ್ಯ ವರ್ಧನೆಯ ವಿವಿಧ ಆಯಾಮಗಳ ಬಗ್ಗೆ ಮಾತನಾಡಿ ಕೌಶಲ್ಯವರ್ಧನೆಗಾಗಿ ವಿದ್ಯಾರ್ಥಿಗಳನ್ನು ಕ್ಷೇತ್ರ ಕಾರ್ಯಗಳಿಗೆ ನಿಯೋಜಿಸಿ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಅವರ ಸಂವಹನ ಕಲೆಯನ್ನು ಅಭಿವೃದ್ಧಿಗೊಳಿಸಬಹುದು ಎಂದರು.

ಇದನ್ನೂ ಓದಿ :ಸಿಬಿಐ ದಾಳಿಗೆ ಆಕ್ರೋಶ: ಸಿಎಂ ಯಡಿಯೂರಪ್ಪ ಮನೆಗೆ ಮುತ್ತಿಗೆ ಯತ್ನ

ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಚಿಕ್ಕೋಡಿಯ ಪ್ರೋ . ಬಿ.ಎಸ್‌.ಮಾಳಿ, ಜಮಖಂಡಿಯ ಪ್ರೋ . ಕೆ.ಎಸ್‌.ಪಾಟೀಲ, ಸಿಂದಗಿಯ ಡಾ. ಆರ್‌.ಎಂ.ಪಾಟೀಲ, ಖಾನಾಪೂರದ ಪ್ರೋ.ಎಸ್‌ .ಜಿ.ಸೊನ್ನದ ಅವರನ್ನು ಸನ್ಮಾನಿಸಲಾಯಿತು. ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಜಯಪ್ಪ, ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಶಿಕ್ಷಕರ ಮಹಾಮಂಡಳದ ಅಧ್ಯಕ್ಷ ಡಾ. ಚಂದ್ರಶೇಖರ ಗುಡಸಿ, ರಾ.ಚ.ವಿ. ಸ್ಕೂಲ್‌ಆಫ್‌ ಬಿಸಿನೆಸ್‌ ಆ್ಯಂಡ್‌ ಎಕನಾಮಿಕ್ಸ್‌ ನ ಡೀನ್‌ ಡಾ. ಎಸ್‌ .ಬಿ.ಆಕಾಶ ಉಪಸ್ಥಿತರಿದ್ದರು. ಪ್ರೋ. ಸಂಗೀತಾ ತೊಲಗಿ ಪ್ರಾರ್ಥಿಸಿದರು.

ಪ್ರೋ. ಗುರುಪಾದ ಜುನಾಯಕರ್‌ ಸ್ವಾಗತಿಸಿದರು. ಡಾ. ವಿದ್ಯಾ ಜಿರಗೆ ನಿರೂಪಿಸಿದರು. ಪ್ರೋ.ಅನಿಲ ರಾಮದುರ್ಗ ವಂದಿಸಿದರು.
ಕಾರ್ಯಾಗಾರದಲ್ಲಿ ವಿಜಯಪೂರ, ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಯ ನೂರಕ್ಕೂ ಅಧಿಕ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next