Advertisement

Shivaji surathkal 2: ಸಂಗೀತಾ ಈಗ ಸಿಲ್ಕಿ ಶರ್ಮಿಳಾ

06:57 PM Apr 13, 2023 | Team Udayavani |

ರಮೇಶ್‌ ಅರವಿಂದ್‌ ನಟನೆಯ “ಶಿವಾಜಿ ಸುರತ್ಕಲ್‌-2′ ಸಿನಿಮಾದ ಹಾಡಿನಲ್ಲಿ ಸಖತ್‌ಕಲರ್‌ಫ‌ುಲ್‌ ಆಗಿ ಕಾಣಿಸಿಕೊಂಡಿರುವ ನಟ ಸಂಗೀತಾ ಶೃಂಗೇರಿ ಈಗ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಬಿಡುಗಡೆಯ ಹಾದಿಯಲ್ಲಿರುವ ಚಿತ್ರದ ಬಗ್ಗೆ ಸಂಗೀತಾ ಮಾತನಾಡಿದ್ದಾರೆ…

Advertisement

“ಶಿವಾಜಿ ಸುರತ್ಕಲ್‌-2′ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?

ಈ ಸಿನಿಮಾದಲ್ಲಿ ನಾನು ಸಿಲ್ಕಿ ಶರ್ಮಿಳಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. “ಟ್ವಿಂಕಲ್‌ ಟ್ವಿಂಕಲ್‌…’ ಎಂಬ ಹಾಡಿನ ಮೂಲಕ ನನ್ನ ಪಾತ್ರದ ಪರಿಚಯವಾಗುತ್ತದೆ. ತುಂಬ ಬೋಲ್ಡ್‌ ಆಗಿರುವಂತ, ಗ್ಲಾಮರಸ್‌ ಟಚ್‌ ಇರುವಂಥ ಪಾತ್ರ ಇದಾಗಿದೆ. ಸಿನಿಮಾದ ಕಥೆಯಲ್ಲಿ ಈ ಹಾಡು ಮತ್ತು ನನ್ನ ಪಾತ್ರಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಮೊದಲ ಬಾರಿಗೆ ಈ ಸಿನಿಮಾದ ಫ್ರೀ ಸ್ಟೈಲ್‌ ಡ್ಯಾನ್ಸ್‌ ಮಾಡಿದ್ದೇನೆ.

ನಿಮ್ಮ ಹಾಡಿಗೆ ಸಿಗುತ್ತಿರುವ ರೆಸ್ಪಾನ್ಸ್‌ ಬಗ್ಗೆ ಹೇಳಿ…

ಇತ್ತೀಚೆಗಷ್ಟೇ ಈ ಹಾಡು ಬಿಡುಗಡೆಯಾಗಿದೆ. ಹಾಡನ್ನು ನೋಡಿದವರು ತುಂಬ ಖುಷಿ ಪಡುತ್ತಿದ್ದಾರೆ. ಇಂದಿನ ಜನರೇಶನ್‌ಗೆ ಕನೆಕ್ಟ್ ಆಗುವಂಥ ಪಾತ್ರ ಇದಾಗಿರುವುದರಿಂದ, ಎಲ್ಲರಿಗೂ ಇಷ್ಟವಾಗುತ್ತದೆ. ಸೋಶಿಯಲ್‌ ಮೀಡಿಯಾದಲ್ಲೂ ಹಾಡಿಗೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಹಾಡು ಮತ್ತು ನನ್ನ ಗೆಟಪ್‌ ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಒಂದೇ ದಿನದಲ್ಲಿ ಹಾಡು ಒಂದು ಮಿಲಿಯನ್‌ ವೀವ್ಸ್‌ ಆಗಿದೆ.

Advertisement

ಸಿನಿಮಾದ ಶೂಟಿಂಗ್‌ ಅನುಭವದ ಬಗ್ಗೆ ಏನು ಹೇಳುವಿರಿ?

ಈ ಹಾಡಿಗಾಗಿ ಎರಡು ದಿನ ನೈಟ್‌ ಶೂಟಿಂಗ್‌ ಮಾಡಲಾಗಿದೆ. ನಿರ್ದೇಶಕ ಆಕಾಶ್‌ ಶ್ರೀವತ್ಸ ನನಗೆ ತುಂಬ ಕಂಫ‌ರ್ಟ್‌ ಜೋನ್‌ ಕ್ರಿಯೇಟ್‌ ಮಾಡಿ, ಈ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ತುಂಬ ವೃತ್ತಿಪರ ತಂಡದ ಜೊತೆಗೆ ಕೆಲಸ ಮಾಡಿದ ಅನುಭವ ಈ ಸಿನಿಮಾದಲ್ಲಿ ಸಿಕ್ಕಿದೆ. ಸಿನಿಮಾದ ಶೂಟಿಂಗ್‌ ಮುಗಿದಿದ್ದೇ ಗೊತ್ತಾಗಲಿಲ್ಲ. ಅಷ್ಟು ವೇಗವಾಗಿ ಮತ್ತು ಪಕ್ಕಾ ಪ್ಲಾನಿಂಗ್‌ ಆಗಿ ಶೂಟಿಂಗ್‌ ಮಾಡಲಾಗಿದೆ.

ರಮೇಶ್‌ ಅರವಿಂದ್‌ ಅವರ ಜೊತೆಗೆ ಕೆಲಸ ಹೇಗಿತ್ತು…?

ನಾನು ತುಂಬ ಚಿಕ್ಕವಯಸ್ಸಿನಿಂದಲೂ ರಮೇಶ್‌ ಅರವಿಂದ್‌ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೆನೆ. ಆದರೆ ಅವರೊಂದಿಗೆ ಸಿನಿಮಾದಲ್ಲಿ ಅಭಿನಯಿಸುವ ಛಾನ್ಸ್‌ ಸಿಗುತ್ತೇ ಅಂಥ ಯಾವತ್ತೂ ನಿರೀಕ್ಷೆ ಮಾಡಿರಲಿಲ್ಲ. ನಿರೀಕ್ಷೆ ಮಾಡದೆ ಇಂಥದ್ದೊಂದು ಅವಕಾಶ ಸಿಕ್ಕಿದ್ದು ತುಂಬ ಖುಷಿ ಕೊಟ್ಟಿದೆ. ರಮೇಶ್‌ ಅರವಿಂದ್‌ ಅವರೊಂದಿಗೆ ಕೆಲಸ ಮಾಡಿದ್ದು, ತುಂಬ ಕಂಫ‌ರ್ಟ್‌ ಆಗಿತ್ತು. ಅವರು ಇರುವ ಕಡೆ ಪಾಸಿಟಿವ್‌ ವೈಬ್ಸ್ ಇರುತ್ತದೆ. ಎಷ್ಟೇ ದೊಡ್ಡ ಸ್ಟಾರ್‌ ಆದರೂ, ಅದ್ಯಾವುದನ್ನೂ ತೋರಿಸಿಕೊಳ್ಳದೆ ಎಲ್ಲರೊಂದಿಗೆ ಬೆರೆತು ಕೆಲಸ ಮಾಡುತ್ತಾರೆ. ಅವರಿಂದ ಕಲಿತುಕೊಂಡಿರುವುದು ಸಾಕಷ್ಟಿದೆ.

ಸಿನಿಮಾದ ಮೇಲೆ ನಿಮ್ಮ ನಿರೀಕ್ಷೆ ಹೇಗಿದೆ?

ಇಲ್ಲಿಯವರೆಗೆ ನಾನು ಹೋಮ್ಲಿ ಲುಕ್‌ ಇರುವಂಥ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ ಇದೇ ಮೊದಲ ಬಾರಿಗೆ “ಶಿವಾಜಿ ಸುರತ್ಕಲ್‌-2′ ಸಿನಿಮಾದಲ್ಲಿ ಇಷ್ಟೊಂದು ಗ್ಲಾಮರಸ್‌ ಆಗಿರುವಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ವೈಯಕ್ತಿಕವಾಗಿ ನನಗೆ ಕೂಡ ಈ ಪಾತ್ರ ಮತ್ತು ಹಾಡು ತುಂಬ ಇಷ್ಟವಾಗಿದೆ. ಜೊತೆಗೆ ಆಡಿಯನ್ಸ್‌ ಕೂಡ ಸಿನಿಮಾವನ್ನು ಮತ್ತು ನನ್ನ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next