Advertisement

ಚಾರ್ಲಿ ಚಾನ್ಸ್‌ ಸಿಕ್ಕಿದ್ದು ಮಿಸ್‌ ಇಂಡಿಯಾ ಗೆದ್ದಂಗಿತ್ತು!: ಸಂಗೀತಾ ಶೃಂಗೇರಿ

02:13 PM May 24, 2022 | Team Udayavani |

“777 ಚಾರ್ಲಿ’ ಸಿನಿಮಾದಲ್ಲಿ ನಟಿ ಸಂಗೀತಾ ಶೃಂಗೇರಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಐದು ವರ್ಷದ ಹಿಂದೆ ಆಡಿಷನ್‌ ಮೂಲಕ “777 ಚಾರ್ಲಿ’ಗೆ ನಾಯಕಿಯಾಗಿ ಆಯ್ಕೆಯಾದ ಸಂಗೀತಾ, ಸಿನಿಮಾದಲ್ಲಿ ದೇವಿಕಾ ಎಂಬ ಹೆಸರಿನ ಆ್ಯನಿಮಲ್‌ ವೆಲ್‌ಫೇರ್‌ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “777 ಚಾರ್ಲಿ’ ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಸಂಗೀತಾ ಶೃಂಗೇರಿ ಸದ್ಯ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

Advertisement

“777 ಚಾರ್ಲಿ’ ಸಿನಿಮಾದ ಬಗ್ಗೆ ಮಾತನಾಡುವ ಸಂಗೀತಾ, “”ಸುಮಾರು ಐದು ವರ್ಷಗಳ ಹಿಂದೆ ಹೈದರಾಬಾದ್‌ ನಲ್ಲಿ “ಚಾರ್ಲಿ’ ಸಿನಿಮಾದ ಆಡಿಷನ್‌ ಪೋಸ್ಟರ್‌ ನೋಡಿದ್ದೆ. ಅಲ್ಲಿಂದ ನೇರವಾಗಿ “ಪರಂವಾ ಸ್ಟುಡಿಯೋ’ಗೆ ಆಡಿಷನ್‌ಗೆ ಹೋಗಿದ್ದೆ. ಅಲ್ಲಿ ಸುಮಾರು 2 ಸಾವಿರ ಜನ ಆಡಿಷನ್‌ಗೆ ಬಂದಿದ್ದರು. ಇಷ್ಟೊಂದು ಜನರಲ್ಲಿ ನಾನು ಸಿನಿಮಾಕ್ಕೆ ಸೆಲೆಕ್ಟ್ ಆಗ್ತಿನಾ ಅಂಥ ಸಣ್ಣ ಭಯ ಮನಸ್ಸಿನಲ್ಲಿತ್ತು. ಅದರ ನಡುವೆಯೇ ಸಿನಿಮಾದಲ್ಲಿ ಬರುವ ಸೀನ್‌ ಒಂದನ್ನು ಪರ್ಫಾರ್ಮ್ ಮಾಡಿ ಬಂದಿದ್ದೆ. ಆನಂತರ ಹಲವು ದಿನಗಳಾದ್ರೂ ಆ ಕಡೆಯಿಂದ ಯಾವುದೇ ರಿಪ್ಲೇ ಬಂದಿರಲಿಲ್ಲ. ನಾನು ಕೂಡ ಕಾದು ಕೊನೆಗೆ ಸುಮ್ಮನಾಗಿದ್ದೆ. ಅದಾದ ಸುಮಾರು ಐದಾರು ತಿಂಗಳ ನಂತರ ನೀವು ಸಿನಿಮಾಕ್ಕೆ ಸೆಲೆಕ್ಟ್ ಆಗಿದ್ದೀರಿ ಎಂಬ ರಿಪ್ಲೇ ಬಂತು. ನಿಜಕ್ಕೂ 777 ಚಾರ್ಲಿ’ ಸಿನಿಮಾದಲ್ಲಿ ನನಗೆ ಚಾನ್ಸ್‌ ಸಿಕ್ಕಿದ್ದು “ಮಿಸ್‌ ಇಂಡಿಯಾ’ ಗೆದ್ದ ತರ ಅನಿಸ್ತು’ ಎನ್ನುತ್ತಾರೆ.

ಐದು ವರ್ಷಗಳ ಚಾರ್ಲಿ ಜರ್ನಿ ಮರೆಯಲಾಗದು:  “ಸಿನಿಮಾದಲ್ಲಿ ನನ್ನದು ದೇವಿಕಾ ಎಂಬ ಆ್ಯನಿಮಲ್‌ ವೆಲ್‌ಫೇರ್‌ ಆಫೀಸರ್‌ ಪಾತ್ರ. ನಾಯಕ ಧರ್ಮ (ರಕ್ಷಿತ್‌ ಶೆಟ್ಟಿ) ಮತ್ತು “ಚಾರ್ಲಿ’ (ನಾಯಿ)ಯ ಜೊತೆಗೆ ನನ್ನ ಪಾತ್ರ ಕೂಡ ಸಾಗುತ್ತದೆ. ಮೈಸೂರಿನಿಂದ ಶುರುವಾಗಿ ಗುಜರಾತ್‌, ರಾಜಸ್ಥಾನದವರೆಗೂ ನನ್ನ ಕ್ಯಾರೆಕ್ಟರ್‌ ಟ್ರಾವೆಲ್‌ ಆಗುತ್ತದೆ. ಇಡೀ ಸಿನಿಮಾದ ಜರ್ನಿಯೇ ತುಂಬ ವಂಡರ್‌ಫುಲ್‌ ಆಗಿತ್ತು. ಸಾಮಾನ್ಯವಾಗಿ ಸಿನಿಮಾ ಒಪ್ಪಿಕೊಂಡು ಆರು ತಿಂಗಳು ಅಥವಾ ವರ್ಷದೊಳಗೆ ಆ ಸಿನಿಮಾದ ಕಮಿಟ್‌ಮೆಂಟ್‌ನಿಂದ ಎಲ್ಲರೂ ಹೊರಗೆ ಬರುತ್ತಾರೆ. ಆದರೆ ನನ್ನದು “ಚಾರ್ಲಿ’ ಸಿನಿಮಾದ ಜೊತೆ ನಾಲ್ಕೈದು ವರ್ಷದ ಜರ್ನಿ. ಒಂದೇ ಸಿನಿಮಾದಲ್ಲಿ ಇಷ್ಟು ವರ್ಷ ಇರಬೇಕಂದ್ರೆ, ಆ ಸಿನಿಮಾದಲ್ಲಿ ಪ್ರತಿಯೊಬ್ಬರೂ ಫ್ಯಾಮಿಲಿ ಮೆಂಬರ್ ಥರ ಆಗಿರುತ್ತಾರೆ. ಐದು ವರ್ಷವಾದ್ರೂ, ಯಾವತ್ತಿಗೂ ಇಷ್ಟು ಸಮಯವಾಯ್ತು ಅಂಥ ಅನಿಸಲೇ ಇಲ್ಲ. ಅಷ್ಟೊಂದು ಕಂಫ‌ರ್ಟೆಬಲ್‌ ಆಗಿ ಇಡೀ ಟೀಮ್‌ ಇತ್ತು’ ಎಂದು ಚಿತ್ರತಂಡದ ಜೊತೆಗೆ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಸಂಗೀತಾ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next