Advertisement

Kannada Cinema: ‘ಕ್ಲಾಂತ’ ಮೇಲೆ ಸಂಗೀತಾ ಭಟ್‌ ನಿರೀಕ್ಷೆ

04:06 PM Oct 11, 2023 | Team Udayavani |

ಕ್ಲಾಂತ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಸಂಗೀತ ಭಟ್‌ ಕಂಬ್ಯಾಕ್‌ ಚಿತ್ರ ಇದಾಗಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಶೈಲಿಯಲ್ಲಿ ಕ್ಲಾಂತ ಟೀಸರ್‌ ಮೂಡಿಬಂದಿದೆ.

Advertisement

ರಂಗನ್‌ ಸ್ಟೈಲ್‌, ದಗಲು ಬಾಜಿಲು ಸೇರಿದಂತೆ ಬೇರೆ ಬಗೆಯ ಜಾನರ್‌ ಚಿತ್ರ ನಿರ್ದೇಶಿರುವ ವೈಭವ್‌ ಪ್ರಶಾಂತ್‌ ಕ್ಲಾಂತ ಎಂಬ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ.

ದಟ್ಟ ಅರಣ್ಯಕ್ಕೆ ತೆರಳುವ ಇಬ್ಬರು ಪ್ರೇಮಪಕ್ಷಿಗಳನ್ನು ಗ್ಯಾಂಗ್‌ ಒಂದು ಅಟ್ಯಾಕ್‌ ಮಾಡುತ್ತದೆ. ಆ ಗ್ಯಾಂಗ್‌ನಿಂದ ಆ ಜೋಡಿ ಹೇಗೆ ತಪ್ಪಿಕೊಂಡು ಬರುತ್ತಾರೆ, ಅವರ ವಿರುದ್ಧ ಹೇಗೆ ಹೋರಾಡುತ್ತಾರೆ ಅನ್ನೋದನ್ನು ಟೀಸರ್‌ ನಲ್ಲಿ ಕೊಡಲಾಗಿದೆ.

ಎಂ ವಿಘ್ನೇಶ್‌ ನಾಯಕನಾಗಿ, ಸಂಗೀತ ಭಟ್‌ ನಾಯಕಿಯಾಗಿ ನಟಿಸುತ್ತಿದ್ದು, ಉಳಿದಂತೆ ಶೋಭರಾಜ್‌, ವೀಣಾ ಸುಂದರ್‌, ಕಾಮಿಡಿ ಕಿಲಾಡಿ ದೀಪಿಕಾ , ಪ್ರವೀಣ್‌ ಜೈನ್‌, ಯುವ , ತಿಮ್ಮಪ್ಪ ಕುಲಾಲ್‌, ಸ್ವಪ್ನ , ರಾಘವೇಂದ್ರ ಕಾರಂತ್‌ , ಪಂಚಮಿ ವಾಮಂಜೂರ್‌, ವಾಮದೇವ ಪುಣಿಂಚತ್ತಾಯ ಮುಂತಾದ ತಾರಾಬಳಗದಲ್ಲಿದ್ದಾರೆ.

ಕ್ಲಾಂತ ಸಿನಿಮಾದ ಚಿತ್ರೀಕರಣ ಕುಕ್ಕೆ ಸುಬ್ರಹ್ಮಣ್ಯ, ಗುಂಡ್ಯ , ಕಳಸ ಸುತ್ತ ಮುತ್ತ ಕಾಡಿನಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗಿದೆ. ಎರಡು ಹಾಡುಗಳಿಗೆ ರಘು ಅವರ ನೃತ್ಯ ಸಂಯೋಜನೆ ಇದೆ. ಅನುಗ್ರಹ ಪವರ್‌ ಮೀಡಿಯಾ ಬ್ಯಾನರ್‌ನಡಿ ಉದಯ್‌ ಅಮ್ಮಣ್ಣಾಯ ಬಂಡವಾಳ ಹೂಡಿದ್ದು, ಅರುಣ್‌ ಗೌಡ, ಪ್ರದೀಪ್‌ ಗೌಡ ಹೇಮಂತ್‌ ರೈ ಸಹ ನಿರ್ಮಾಪಕರಾಗಿ ಆಗಿ ಸಾಥ್‌ ಕೊಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next