Advertisement

ವೀರಮ್ಮ ಸಂಗಸಿರಿ ಮಹಿಳಾ ವಿದ್ಯಾಲಯಕ್ಕೆ ಸುವರ್ಣ ಸಂಭ್ರಮ

02:56 PM Feb 15, 2017 | Team Udayavani |

ಕಲಬುರಗಿ: ಪ್ರತಿಷ್ಠಿತ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯಕ್ಕೆ ಈಗ 50 ವರುಷದ ಸುವರ್ಣ ಸಂಭ್ರಮ ಸಿರಿ. ಅದರಂಗವಾಗಿ ಮಂಗಳವಾರ ಬೆಳಗ್ಗೆ ನಗರದ ಮಹಾವಿದ್ಯಾಲಯದಿಂದ ನೆಹರೂ ಗಂಜ್‌ ವರೆಗೆ ಸಾವಿರಾರು ವಿದ್ಯಾರ್ಥಿನಿಯರಿಂದ ಬೃಹತ್‌ ಶೋಭಾಯಾತ್ರೆ ನಡೆಯಿತು. 

Advertisement

ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರು ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಆಡಳಿತ ಮಂಡಳಿ ಸದಸ್ಯ ಅರುಣಕುಮಾರ ಎಂ. ಪಾಟೀಲ, ಎ.ಬಿ. ದೇಶಮುಖ, ಪ್ರಾಚಾರ್ಯರಾದ ಡಾ| ಅಶೋಕ ಜೀವಣಗಿ, ಶೋಭಯಾತ್ರೆ ಸಂಚಾಲಕಿ ಮೀನಾಕ್ಷಿ ಬಾಳಿ, ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ| ವೀಣಾ ಹೊನಗುಂಟಿಕರ್‌, ಪಿಯುಸಿ ವಿಭಾಗದ ಪ್ರಾಚಾರ್ಯರಾದ ಬಿ.ಎಸ್‌. ಮಿಟೇಕಾರ, ಡಾ| ಶಾಂತಾ ಮಠ, ಬೋಧಕ, ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಮುಂತಾದವರಿದ್ದರು. 

ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ ಲೋಕ ಅನಾವರಣಗೊಂಡಿದಂತೆ ಕಂಡು ಬಂದಿತ್ತು. ಡೊಳ್ಳು ಕುಣಿತ, ಲೇಜಿಮ್‌ ಸಂಗೀತ ನೃತ್ಯಗಳು ಗಮನ ಸೆಳೆದವು. ವಿದ್ಯಾರ್ಥಿನಿಯರು ರಂಗು, ರಂಗಿನ ವೇಷ, ಭೂಷಣಗಳೊಂದಿಗೆ ಸಂಭ್ರಮಿಸಿದರು. ಪಂಜಾಬಿ, ರಾಜಸ್ಥಾನಿ ಕುಣಿತಗಳು ಮೆರವಣಿಗೆಗೆ ಮತ್ತಷ್ಟು ರಂಗು ತಂದಿತು. ಬೇಟಿ ಬಚಾವ್‌, ಬೇಟಿ ಪಡಾವ್‌ ಎನ್ನುವ ಸಂದೇಶ ಸಾರುವ ಫಲಕಗಳನ್ನು ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಪ್ರದರ್ಶಿಸಿದರು. 

ವಿದ್ಯಾರ್ಥಿನಿಯರು ವಿವಿಧ ವೇಷ, ಭೂಷಣ ಧರಿಸುವ ಮೂಲಕ ಶೋಭಾ ಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಶೋಭಾ ಯಾತ್ರೆ ಮುಂಚೂಣಿಯಲ್ಲಿ ಸಂಸ್ಥೆ ಸಂಸ್ಥಾಪಕ ಮಹಾದೇವಪ್ಪ ರಾಂಪುರೆ ಹಾಗೂ ದಾನಿಗಳಾದ ವೀರಮ್ಮ ಗಂಗಸಿರಿ ಅವರ ವೇಷಧಾರಿಗಳು ಸಹ ವಿಶೇಷ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next