Advertisement
ಈ ಬಗ್ಗೆ ಸೋಮವಾರ ಸಂಗಮ್ ಜಂಕ್ಷನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಜತೆಗೂ ಚರ್ಚಿಸಿದ ಅವರು, ಇಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರೆ ವಾಹನ ದಟ್ಟಣೆ ಹೆಚ್ಚಿರುವುದರಿಂದ ನಿರಂತರ ಟ್ರಾಫಿಕ್ ಜಾಂ ಉಂಟಾಗುತ್ತದೆ. ಅದಕ್ಕಾಗಿ ಸದ್ಯದ ಮಟ್ಟಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪೊಲೀಸ್ ಸಿಬಂದಿಯನ್ನು ಹಾಕಲಾಗಿದೆ. ಶೀಘ್ರ ಈ ಕಡೆಯ ಸೇತುವೆ ದುರಸ್ತಿ ಕಾರ್ಯವೂ ಮುಗಿಯಲಿದ್ದು, ಆ ಬಳಿಕ ಎರಡೂ ಬದಿಯೂ ಸಂಚಾರಕ್ಕೆ ಮುಕ್ತವಾಗಲಿದ್ದು, ಆಗ ಸ್ವಲ್ಪ ಮಟ್ಟಿಗಿನ ಗೊಂದಲ ನಿವಾರಣೆಯಾಗಲಿದೆ ಎಂದರು.
ಸಂಗಮ್ ಜಂಕ್ಷನ್‌ನಲ್ಲಿನ ಸಂಚಾರಿ ಗೊಂದಲಗಳ ಕುರಿತಂತೆ “ಉದಯ ವಾಣಿ’ಯು ಮೇ 20 ರಂದು “ಸಂಗಮ್ ಜಂಕ್ಷನ್: ವಾಹನಗಳದ್ದೇ ಟೆನ್ಶನ್’ ಎನ್ನುವ ತಲೆಬರಹದಡಿ ವಿಸ್ತೃತವಾದ ವರದಿಯನ್ನು ಪ್ರಕಟಿಸಿ, ಗಮನಸೆಳೆದಿತ್ತು. ಈ ಸಂದರ್ಭದಲ್ಲಿ ಕುಂದಾಪುರ ಸಂಚಾರಿ ಠಾಣೆಯ ಪೊಲೀಸರು ಉಪಸ್ಥಿತರಿದ್ದರು.
Related Articles
ಸಂಗಮ್ ಜಂಕ್ಷನ್, ತಲ್ಲೂರು ಪೇಟೆ, ಹೆಮ್ಮಾಡಿ ಜಂಕ್ಷನ್‌ಗಳಲ್ಲಿ ಅವೈಜ್ಞಾನಿಕ ರೀತಿಯ ಕಾಮಗಾರಿಯಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಈ ಬಗ್ಗೆ ಗುತ್ತಿಗೆ ವಹಿಸಿಕೊಂಡಿ ರುವ ಕಂಪೆನಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಸಂಗಮ್ ಜಂಕ್ಷನ್ ಪರಿಸರದಲ್ಲಿ ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿದ್ದು, ಇಲ್ಲಿ ಅಂಡರ್‌ಪಾಸ್ ಮಾಡಿದರೆ ಸಾಕಷ್ಟು ಪ್ರಯೋಜನವಾಗಲಿದೆ. ಇಲಾಖೆಯಿಂದ ತಲ್ಲೂರು, ಸಂಗಮ್, ಹೆಮ್ಮಾಡಿಯಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಕುರಿತು ಚಿಂತಿಸಲಾಗುವುದು ಎಂದು ಡಿವೈಎಸ್‌ಪಿಯವರು ಭರವಸೆ ನೀಡಿದರು.
Advertisement