Advertisement

ಮೀರಾರೋಡ್‌  ಶ್ರೀ  ಶನೀಶ್ವರ ಮಂದಿರ:  ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಸಮ್ಮಾನ

07:37 PM May 25, 2021 | Team Udayavani |

ಮುಂಬಯಿ: ಮೀರಾರೋಡ್‌ ಶ್ರೀ ಶನೀಶ್ವರ ಮಂದಿರದಲ್ಲಿ ಶನಿವಾರ ತಿಂಗಳ ಮಂಗಳಾದ್ಯಯ ಮಹಾಪೂಜೆಯ ಅಂಗವಾಗಿ ನಾಲ್ಕನೇ ಶನಿವಾರ ವಾರದ ವಿಶೇಷ ಪೂಜೆಯು ಶ್ರೀ ಶನೀಶ್ವರ ಗ್ರಂಥ ಪಾರಾಯಣದ ಮೂಲಕ ನಡೆಯಿತು.

Advertisement

ಇದೇ ಸಂದರ್ಭದಲ್ಲಿ  ಹನುಮಾನ್‌ ಚಾಲೀಸ್‌ ಮತ್ತು ಶ್ರೀ ಶನೀಶ್ವರ ಜಪ ಪಾರಾಯಣ, ಶ್ರೀ ಶನೀಶ್ವರ ಭಜನ ಸಮಿತಿಯವರಿಂದ ಭಜನೆ, ರಾತ್ರಿ 7 ರಿಂದ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿರತಣೆ ನಡೆಯಿತು. ಈ ವಿಶೇಷ ಪೂಜೆಯಲ್ಲಿ ಪ್ರಸಿದ್ಧ ಭಜನ ಗಾಯಕರು ಮತ್ತು ಶ್ರೀ ಶನೀಶ್ವರ ಗ್ರಂಥ ಪಾರಾಯಣದ ವಾಚಕರಾದ ಅಚ್ಯುತ ಕೋಟ್ಯಾನ್‌ ಅವರ ಪುತ್ರಿ ರಿಯಾ ಅಚ್ಯುತ ಕೋಟ್ಯಾನ್‌ ಅವರ ಸೇವಾರ್ಥಕವಾಗಿ ಭಜನೆ ಸಂದರ್ಭ ನುಡಿಸುವ ಡೋಲಾಕ್‌ ಅನ್ನು ಈ ಸಂದರ್ಭ  ಮಂದಿರಕ್ಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಚ್ಯುತ ಕೋಟ್ಯಾನ್‌ ಹಾಗೂ ಉದ್ಯಮಿ, ಮಹಾ ದಾನಿಗಳಾದ ವಿಘ¡ಹರ್ತ ಡೆವಲಪರ್‌ ಇದರ ವಿವೇಕಾನಂದ ಜಾØ ಅವರನ್ನು ಮಂದಿರದ ಗೌರವಾಧ್ಯಕ್ಷ ವಿನೋದ್‌ ವಾಘಷಿಯ ಅವರು ಶಾಲು ಹೊದೆಸಿ, ಮಹಾ ಪ್ರಸಾದವನ್ನು ನೀಡಿ ಗೌರವಿಸಿದರು. ಮಂದಿರದ ಅಧ್ಯಕ್ಷೆ ವಿದ್ಯಾ ಅಶೋಕ್‌ ಕರ್ಕೇರ, ಉಪಾಧ್ಯಕ್ಷರಾದ ಗುಣಕಾಂತ್‌ ಶೆಟ್ಟಿ ಕರ್ಜೆ, ಮಹಿಳಾ ಸಮಿತಿಯ ಉಪಾಧ್ಯಕ್ಷೆ ರಾಧಾ ಸುರೇಶ್‌ ಕೋಟ್ಯಾನ್‌, ಕೋಶಾಧಿಕಾರಿ ಅಚ್ಯುತ ಕೋಟ್ಯಾನ್‌, ಜತೆ ಕೋಶಾಧಿಕಾರಿ ಜಯಕರ್‌ ಶೆಟ್ಟಿ ಮುದ್ರಾಡಿ, ಜತೆ ಕಾರ್ಯದರ್ಶಿ ಉಷಾ ದಿನೇಶ್‌ ಶೆಟ್ಟಿಗಾರ್‌, ಜತೆ ಕೋಶಾಧಿಕಾರಿ ಭಾರತಿ ಅಂಚನ್‌, ಪೂಜಾ ಸಮಿತಿಯ ಉಪಾಧ್ಯಕ್ಷೆ ಜಯಲಕ್ಷ್ಮೀ ಸುವರ್ಣ, ಪೂಜಾ ಸಮಿತಿಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ., ಮಹಿಳಾ ಸಮಿತಿಯ ಯಶೋದಾ ಪೂಜಾರಿ, ಭಾರತಿ ಮಧುಕರ್‌ ಅಮೀನ್‌, ಲಲಿತಮ್ಮ ಶೆಟ್ಟಿಗಾರ್‌, ಸುಜಾತಾ ಶೆಟ್ಟಿ , ಆರತಿ ರಾಬ್‌, ಪ್ರಿಯಾ ವಿ. ಗುಪ್ತ ಪಾಲ್ಗೊಂಡಿದ್ದರು.

ಯುವ ಸಮಿತಿಯ ಜಯೇಶ್‌ ಸುವರ್ಣ, ರಿಚೀನ್‌ ಅಮೀನ್‌, ಕಾವ್ಯಾ ಶೆಟ್ಟಿಗಾರ್‌, ಹಿಮಾಂಶ್‌ ಅಮೀನ್‌ ಪ್ರಜ್ಞಾ ಶೆಟ್ಟಿಗಾರ್‌, ವಿಜೇತ ಪೂಜಾರಿ, ಅರ್ಚಕರಾದ ನಿರಾವ್‌ ಭಟ್‌ ಮತ್ತು ಶುಶಿಲ್‌ ಮಿಶ್ರ, ವಿಘ್ನಹರ್ತ ಡೆವಲಪರ್‌ನ ವಿವೇಕಾನಂದ ಜಾØ ಮೊದಲಾದವರು ಪಾಲ್ಗೊಂಡು ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸಿದರು. ಜಗತ್ತಿಗೆ ಬಂದಿರುವಂತಹ ಕೊರೊನಾ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕೊರೊನಾ ಮಾರ್ಗಸೂಚಿಯ ಪ್ರಕಾರ ಕಾರ್ಯಕ್ರಮ ನಡೆಯಿತು. ಗುಣಕಾಂತ್‌ ಶೆಟ್ಟಿ ಕರ್ಜೆ ವಂದಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next