Advertisement

ಕೆಂಡ ಹಾಯ್ದು ಹರಕೆ ತೀರಿಸಿದ ಭಕ್ತರು

05:05 PM Apr 08, 2019 | Team Udayavani |

ಸಂಡೂರು: ಯುಗಾದಿ ಹಬ್ಬದ ಅಂಗವಾಗಿ ತಾಲೂಕಿನ ಸುಶೀಲಾನಗರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಅಗ್ನಿ ಕೆಂಡ ಉತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. ವೀರಭದ್ರಶ್ವೇರ ಸ್ವಾಮಿಗೆ ಬೆಳಗ್ಗೆ 5 ರಿಂದ 8 ಗಂಟೆಯವರೆಗೆ ವಿವಿಧ ಅಭಿಷೇಕಗಳು ಜರುಗಿದವು.

Advertisement

ಭಕ್ತರು ಉಪವಾಸ ವೃತದಿಂದ ದೇವಸ್ಥಾನದ ಪೂಜೆಯಲ್ಲಿ ಭಾಗಿಗಳಾಗಿ ಹೂ-ಹಣ್ಣು-ನೈವೇದ್ಯ ಸಮರ್ಪಿಸಿದರು. ವೀರಗಾಸೆ ನೃತ್ಯದೊಂದಿಗೆ ಗಂಗೆ ತರಲಾಯಿತು. ಬಳಿಕ ಶ್ರೀ ವೀರಭದ್ರೇಶ್ವರ ಸ್ವಾಮಿ ವಿಶೇಷ ಪೂಜೆ, ಈಶ್ವರ, ಪಾರ್ವತಿ ಪೂಜೆ ನೆರವೇರಿಸಲಾಯಿತು.

ವೀರಗಾಸೆಯ ಕುಣಿತದ ಸಂದರ್ಭದಲ್ಲಿ ವೀರಭದ್ರೇಶ್ವರ ಸ್ವಾಮಿಯ ಒಡಪುಗಳನ್ನು ಹೇಳಲಾಯಿತು. ಮೆರವಣಿಗೆಯ ಅಂತ್ಯದ ಸಮಯಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಅಗ್ನಿಕೆಂಡ ಸಿದ್ಧಪಡಿಸಲಾಯತು.

ಉಪವಾಸವಿದ್ದು ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಅಗ್ನಿ ಕುಂಡ ಹಾಯ್ದರು. ಬಿಕೆ. ಬಸವರಾಜ, ಸಕ್ರಪ್ಪ, ಕತ್ತಿ ಭರ್ಮಪ್ಪ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next