Advertisement

ಸ್ವಾಮಿ ವಿವೇಕಾನಂದ ವಿಶ್ವ ಮೆಚ್ಚಿದ ಸಂತ

01:02 PM Jan 13, 2020 | Naveen |

ಸಂಡೂರು: ಸ್ವಾಮಿ ವಿವೇಕಾನಂದ ಎಂಬ ಹೆಸರಿನೊಂದಿಗೆ ವಿಶ್ವಮೆಚ್ಚಿದ ಶಕ್ತಿಯಾಗಿ ಬೆಳೆದು ಭಾರತ ಮತ್ತು ಹಿಂದೂ ಸಂಸ್ಕೃತಿಯ ಮಹತ್ವವನ್ನು ವಿಶ್ವಕ್ಕೆ ಮತ್ತೂಮ್ಮೆ ತಿಳಿಸಿದವರು ವಿವೇಕಾನಂದರು ಎಂದು ಯುವಾ ಬ್ರಿಗೇಡ್‌ ಬಳ್ಳಾರಿ ವಿಭಾಗ ಸಹಸಂಚಾಲಕ ಪ್ರಶಾಂತ್‌ ಬಸವನಗೌಡ ತಿಳಿಸಿದರು.

Advertisement

ಅವರು ಪಟ್ಟಣದ ಶ್ರೀ ವಿವೇಕಾನಂದ ವಿದ್ಯಾಕೇಂದ್ರದಲ್ಲಿ ವಿವೇಕಾನಂದರ 157ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಮಕೃಷ್ಣರ ಆಲೋಚನೆಯಲ್ಲಿ ಸಪ್ತರ್ಷಿ ಮಂಡಲದಿಂದ ಒಂದು ಅಂಶ ಭೂಮಿಗೆ ಬಿದ್ದು ಆ ಅಂಶವೇ ವಿವೇಕಾನಂದರಂತೆ ಕಂಡಿದ್ದು ಮುಂದೆ ಆ ವ್ಯಕ್ತಿ ಭಾರತ ಮತ್ತು ಹಿಂದೂ ಸಂಸ್ಕೃತಿಯನ್ನು 1893ರಲ್ಲಿ ವಿಶ್ವದ ಮುಂದೆ ಇಟ್ಟು ದಿಗ್ವಿಜಯ ಬಾರಿಸಿದ್ದಲ್ಲದೇ ಕ್ರೈಸ್ತರು ತಮ್ಮ ಧರ್ಮದ ಮಹತ್ವ ಸಾರಲು ಆಯೋಜನೆ ಮಾಡಿದ್ದ ವಿಶ್ವ ಸರ್ಮಧರ್ಮ ಸಮ್ಮೇಳನದ ಪೂರ್ಣ ಪ್ರಮಾಣದ ಉಪಯೋಗವನ್ನು ತನ್ನೆಡೆಗೆ ಹೊರಳಿಸಿಕೊಂಡ ಸಂತ ಎಂದು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪರಿಚಯಿಸಿದರು.

ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ಜಿ.ಕೆ. ಮಂಜುನಾಥ ತೋಂಟದ ಆರಾಧ್ಯ ಮಾತನಾಡಿ, ಸ್ವಾಮೀಜಿ ಶಿಕ್ಷಣ ತಜ್ಞರು, ಚಿಂತಕರು, ದೇಶಭಕ್ತರು, ಅಧ್ಯಾತ್ಮ ಚಿಂತಕರು, ಸಮಾಜ ಸುಧಾರಕರು ಆಗಿದ್ದು ಅವರ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಮಹಾಶಯರಲ್ಲಿ ಅಬ್ದುಲ್‌ ಕಲಾಂ, ಅಣ್ಣಅಜಾರೆ, ನರೇಂದ್ರಮೋದಿ ಹೀಗೆ ಅನೇಕ ಮಹನೀರು ಇಂದಿಗೂ ಸಾಧನೆ ಮಾಡುತ್ತಲೇ ಇದ್ದಾರೆ. ಹಾಗಾಗಿ ನಾವು ವಿವೇಕಾನಂದರ ಅಂಶಗಳನ್ನು ಅಳವಡಿಸಿಕೊಂಡು ಸಾಧನೆ ಶಿಖರವನ್ನು ಮುಟ್ಟಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಟಿ. ಕರಿಬಸವನಗೌಡ ಮಾತನಾಡಿ, ಧರ್ಮ, ಜಾತಿ, ಇತ್ಯಾದಿ ಹೆಸರುಗಳಲ್ಲಿ ಇಂದು ನಮ್ಮನ್ನು ಬೇರೆ ಮಾಡುವ ಶಕ್ತಿಗಳ ಮಧ್ಯ ನಾವು ಇಂದು ಒಂದಾಗಿ ದೇಶವನ್ನು ರಕ್ಷಿಸಬೇಕಿದೆ ಎಂದರು.

ನಾಗರಾಜ್‌ ಸ್ವಾಗತಿಸಿದರು. ನಾಗಭೂಷಣ ವಂದಿಸಿದರು. ಮಾರುತಿ ನಿರೂಪಿಸಿದರು. ಕವಿತಾ ಆರ್‌. ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶಾಲೆ ಶಿಕ್ಷಕರಾದ ಪುರುಷೋತ್ತಮ, ಫಾರೂಕ್‌ ಅಬ್ದುಲ್ಲಾ, ಚಂದ್ರಮೋಹನ್‌ ಪಿ.ಆರ್‌. ಮಲಿಯಮ್ಮ, ಜ್ಯೋತಿ, ನೇತ್ರಾವತಿ, ಉಮಾ ಹಾಗೂ ಯುವಾ ಬ್ರಿಗೇಡ್‌ನ‌ ನಾಗರಾಜ್‌ ನರಿ, ಬಸವರಾಜ್‌ ಸಾಲಿಗೆರಾ, ಮಣಿಕಂಠರಾಮಗಡ, ಚೇತನ್‌ ಬಳ್ಳಿಕಟ್ಟೆ ಗಿರೀಶ್‌ ಬಿ. ಮತ್ತು ಇತರರು ಹಾಜರಿದ್ದರು. ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವೇಕಾನಂದರ ಭಾವಚಿತ್ರದ ಅದ್ಧೂರಿ ಮೆರವಣಿಗೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next