Advertisement

ಕೃಷ್ಣಾ ನಗರಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಭೇಟಿ

06:55 PM May 10, 2020 | Team Udayavani |

ಸಂಡೂರು: ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಇಡೀ ಜಿಲ್ಲಾಡಳಿತ, ತಾಲೂಕು ಆಡಳಿತದ ನೇತೃತ್ವದಲ್ಲಿ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸಾ ಕ್ರಮ ಕೈಗೊಳ್ಳುತ್ತಿದೆ. ಆದ್ದರಿಂದ ಜನ ಮನೆಯಲ್ಲಿಯೇ ಇರಬೇಕು. ನಿಮಗೆ ಬೇಕಾದ ಎಲ್ಲಾ ರೀತಿಯ ಆಹಾರ ಧಾನ್ಯಗಳು, ತರಕಾರಿ, ಔಷಧ, ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್‌ ಭರವಸೆ ನೀಡಿದರು.

Advertisement

ಅವರು ತಾಲೂಕಿನ ಕೃಷ್ಣಾನಗರಕ್ಕೆ ಇತರೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಕೆಲವು ಗ್ರಾಮಸ್ಥರು ಮೂಲಭೂತ ಅಂಶಗಳ ಬೇಕಾಗುವ ಬಗ್ಗೆ ತಿಳಿಸಿದರು. ಅದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಯಾರೂ ಆತಂಕ ಪಡಬಾರದು. ಮುನ್ನೇಚ್ಚರಿಕೆಯಾಗಿ ಬಿಸಿನೀರಿನ ಬಳಕೆ, ಸ್ವಚ್ಛತೆ ಕಾಪಾಡಿಕೊಳ್ಳುವುದು, ಮನೆಯಲ್ಲಿ ಯಾವುದೇ ಕಾರಣಕ್ಕೂ ಹೊರಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯಾರಾದರೂ ತೀವ್ರವಾದ ರೋಗಗಳಿಗೆ ತುತ್ತಾದವರು ಇದ್ದರೆ ಮಾಹಿತಿ ನೀಡಿ, ಗರ್ಭಿಣಿಯರು, ಮಕ್ಕಳ ಸೂಕ್ತ ಚಿಕಿತ್ಸೆಗೆ ಸಹ ವ್ಯವಸ್ಥೆ ಮಾಡಲಾಗುವುದು. ಸಹಕಾರ ಅತಿ ಅಗತ್ಯ, ರೋಗ ಬಂದಿದೆ ಎಂದಾಕ್ಷಣ ಸಾಯುತ್ತೇವೆ ಎನ್ನುವ ಅಂಶವನ್ನು ದೂರವಿಡಿ, ಆದರೆ ಎಚ್ಚರಿಕೆ ಅತಿ ಅಗತ್ಯವಾಗಿದೆ. ಈಗಾಗಲೇ ಇಡೀ ಗ್ರಾಮಕ್ಕೆ ಬೇಕಾಗುವ ತರಕಾರಿಗಳನ್ನು ತೋಟಗಾರಿಕೆ ಇಲಾಖೆಯವರು ಪೂರೈಸಿದ್ದಾರೆ, ಅದೇ ರೀತಿ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ತಹಶೀಲ್ದಾರ್‌ ರಶ್ಮಿ ಗ್ರಾಮದ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ ಎಲ್ಲಾ ಮಾಹಿತಿಯನ್ನು ಜಿಲ್ಲಾದಿಕಾರಿಗಳಿಗೆ ತಿಳಿಸಿದರು. ಪ್ರಮುಖವಾಗಿ ಲಾಕ್‌ ಡೌನ್‌ ಮಾಡಿದ ಪ್ರದೇಶಗಳು ಮತ್ತು ವಾಹನಗಳ ಬಗ್ಗೆ, ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳು, ಕ್ವಾರಂಟೈನ್‌
ಮಾಡಿರುವ ಬಗ್ಗೆ, ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕಳುಹಿಸದ ಬಗ್ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next