Advertisement

ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು

05:59 PM Mar 22, 2024 | Team Udayavani |

ಉದಯವಾಣಿ ಸಮಾಚಾರ
ಸಂಡೂರು: ಈ ದೇಶವನ್ನು ಸುರಕ್ಷಿತ ಮತ್ತು ಪ್ರಗತಿಪರ ರಾಷ್ಟ್ರವನ್ನಾಗಿಸಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ, ಸದೃಢ
ದೇಶ ನಿರ್ಮಾಣಕ್ಕೆ ಮತ್ತೆ ಅವರನ್ನೇ ಪ್ರಧಾನಿಯನ್ನಾಗಿಸಲು ನಾವೆಲ್ಲ ಶಪಥ  ಮಾಡೋಣ ಎಂದು ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದರು.

Advertisement

ಅವರು ಪಟ್ಟಣದ ಕಾರ್ತಿಕ್‌ ಘೋರ್ಪಡೆಯವರ ಮನೆಯ ಅವರಣದಲ್ಲಿ ತಾಲೂಕು ಮಟ್ಟದ ಬೂತ್‌ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರುವ ಯುವಕರ ಕೈಯಲ್ಲಿ ಪುಸ್ತಕ, ಉದ್ಯೋಗ ಕೊಟ್ಟರು, 370 ರದ್ದು ಪಡಿಸುವ ಮೂಲಕ ಕಾಶ್ಮೀರವನ್ನು ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಿದ್ದು ನಮ್ಮೆಲ್ಲರ
ಹಿರಿಮೆ ಎಂದರು.

ದೇಶ ಅಸ್ಮಿತೆ ಕಾಪಾಡಿದ, ರಾಮಮಂದಿರ ಕಟ್ಟಿದ, ದೇಶದ ಬೆನ್ನೆಲಬು ರೈತರಾದಿಯಾಗಿ ಎಲ್ಲರ ಯೋಗಕ್ಷೇಮಕ್ಕೆ ಪೂರಕ
ಯೋಜನೆಗಳನ್ನು ಜಾರಿಗೆ ತಂದದ್ದೂ ಅಲ್ಲದೇ, ಜಾಗತಿಕವಾಗಿಯೂ ಭಾರತವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಆಡಳಿತ
ನಡೆಸುತ್ತಿರುವುದು ಅವರೊಬ್ಬ ಸಮರ್ಥ ನಾಯಕ ಎಂಬುದಕ್ಕೆ ಸಾಕ್ಷಿ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ರವಿಕುಮಾರ್‌ ಮಾತನಾಡಿ, ಸಿದ್ದರಾಮಯ್ಯನವರು ನಮ್ಮ ತೆರಿಗೆ ಹಣ ನಮಗೆ ಕೊಡುತ್ತಿಲ್ಲ ಎನ್ನುತ್ತಿದ್ದಾರೆ, ಮನಮೋಹನ್‌ ಸಿಂಗ್‌ ಅವರು 10 ವರ್ಷ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ 82 ಸಾವಿರಕೋಟಿ, ಅದರೆ ಮೋದಿ 10 ವರ್ಷದಲ್ಲಿ ಕರ್ನಾಟಕಕ್ಕೆ ಕೊಟ್ಟ ತೆರಿಗೆ ಹಣ 2,82,000. ಕೋಟಿ, ಕರ್ನಾಟಕದ ಅಭಿವೃದ್ಧಿಗೆ ಮನಮೋಹನ್‌ ಸಿಂಗ್‌ ಸರ್ಕಾರ ಕೊಟ್ಟಿದ್ದು 62 ಸಾವಿರ ಕೋಟಿ, ಮೋದಿಯವರು ಕೊಟ್ಟಿದ್ದು 2,63,000 ಕೋಟಿ ಎಂದು ಅಂಕಿ
ಸಂಖ್ಯೆ ಸಹಿತ ವಿವರಿಸದರಲ್ಲದೇ, ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮೋದಿ ಅವರನ್ನು ಬೆಂಬಲಿಸಿ ಎಂದು ಕೋರಿದರು.

ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ತಾಲೂಕು ಅಧ್ಯಕ್ಷ ನಾನಾ ನಿಕ್ಕಂ, ಮಾಜಿ ನಿಗಮ ಮಂಡಳಿ ಅಧ್ಯಕ್ಷ ಹೆಚ್‌.ಹನುಮಂತಪ್ಪ, ಜಿಲ್ಲಾಧ್ಯಕ್ಷ ಅನಿಲ್‌ ನಾಯ್ಡು ಮಾತನಾಡಿದರು. ತಾಲೂಕು ಘಟಕದ ಮಹಿಳಾ ಅಧ್ಯಕ್ಷರು, ಸದಸ್ಯರು, ಪದಾ ಧಿಕಾರಿಗಳು, ಬೂತ್‌ ಮಟ್ಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.

Advertisement

ಕೆರೆ ತುಂಬಿಸುವ ಕಾರ್ಯ ಸ್ಥಗಿತ: ಶ್ರೀರಾಮುಲು ಹೊಸಪೇಟೆ: ಯಡಿಯೂರಪ್ಪನವರನ್ನು ನಾವು ಸ್ಮರಿಸಬೇಕು, ಏಕೆಂದರೆ ಕೇವಲ 2 ತಿಂಗಳು ನಮ್ಮ ಸರ್ಕಾರ ಇರುವ ಸಂದರ್ಭದಲ್ಲಿ ಸಂಡೂರು ಕ್ಷೇತ್ರದ 72 ಕೆರೆಗಳನ್ನು ತುಂಬಿಸಲು 1350 ಕೋಟಿ ರೂ. ವೆಚ್ಚದ ಡಿಪಿಆರ್‌ ಸಿದ್ಧಪಡಿಸಿ ಕ್ಯಾಬಿನೆಟ್‌ನಲ್ಲಿ ಮಂಜೂರು ಮಾಡಿಸಿದ್ದೆವು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆ ಬಂದ ಕಾಂಗ್ರೆಸ್‌ ಸರ್ಕಾರ ಅದನ್ನು ನಿಲ್ಲಿಸಿದೆ, ಜಲಜೀವನ್‌ ಯೋಜನೆ ಅಡಿಯಲ್ಲಿ ಸಂಡೂರು ಕ್ಷೇತ್ರದ 85 ರಷ್ಟು ಗ್ರಾಮಗಳಲ್ಲಿ ಪ್ರತಿ ಮನೆಗೆ ನಲ್ಲಿಯನ್ನು ಹಾಕುತ್ತಿದ್ದಾರೆ ಎಂದ ಅವರು, ಮೋದಿಯವರು ಪ್ರತಿ ಮನೆಗೂ ನೀರನ್ನು ತಲುಪಿಸಬೇಕು ಎನ್ನುವ ಬಹುದೊಡ್ಡ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು. ಬಿಜೆಪಿಯ ಮುಖಂಡರಾದ ಜಿ.ಟಿ. ಪಂಪಾಪತಿ, ನಾನಾನಿಕ್ಕಂ, ಸುರೇಶ್‌ಹುಡೇದ್‌, ದರೋಜಿ ರಮೇಶ್‌, ಎಂಎಲ್‌ಸಿ ರವಿಕುಮಾರ್‌, ಜಿಲ್ಲಾಧ್ಯಕ್ಷ ರವಿನಾಯ್ಡು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next