Advertisement

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

01:26 PM Nov 23, 2024 | Team Udayavani |

ಬಳ್ಳಾರಿ: ಗಣಿನಾಡು ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅನ್ನಪೂರ್ಣ ಅವರು ಭರ್ಜರಿ ಜಯಗಳಿಸುವ ಮೂಲಕ ಸಂಡೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ.

Advertisement

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ (ನ.23) ಮತ ಎಣಿಕೆ ನಡೆಯಿತು. ಮೊದಲ ಅಂಚೆ ಮತಗಳ ಎಣಿಕೆಯಲ್ಲಿ ಮೂರು ಮತಗಳ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು, ನಂತರ ಮತಯಂತ್ರಗಳ ಮತಗಳ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲೇ 2000 ಮತಗಳ ಮುನ್ನಡೆ ಕಾಯ್ದುಕೊಂಡರು. ಬಳಿಕ 3, 4, 5 ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡರಾದರೂ, ಅಂತರ ಕುಸಿದು, 6ನೇ ಸುತ್ತಿನಲ್ಲಿ ಕೈ ಅಭ್ಯರ್ಥಿ ಅನ್ನಪೂರ್ಣ ಅವರನ್ನು ಹಿಂದಿಕ್ಕಿದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು 411 ಮತಗಳ ಮುನ್ನಡೆ ಸಾಧಿಸಿದರು.

ಇದನ್ನೂ ಓದಿ:By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

7ನೇ ಸುತ್ತಿನಲ್ಲೂ 867 ಮತಗಳ ಮುನ್ನಡರ ಕಾಯ್ದುಕೊಂಡ ಹನುಮಂತು, 8ನೇ ಸುತ್ತಿನಲ್ಲಿ ಹಿಂದೆ ಬಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪುನಃ 33 ಮತಗಳ ಮುನ್ನಡೆ ಕಾಯ್ದುಕೊಂಡರು. ನಂತರ ನಿಧಾನವಾಗಿ ತನ್ನ ಮತಗಳ ಗಳಿಕೆಯನ್ನು ಹೆಚ್ಚಿಸಿಕೊಂಡ ಕೈ ಅಭ್ಯರ್ಥಿ ಅನ್ನಪೂರ್ಣ ಅವರು ಅಂತಿಮವಾಗಿ ಕೊನೆಯ 19ನೇ‌ ಸುತ್ತುತ ಎಣಿಕೆ ಮುಕ್ತಾಯದ ವೇಳೆಗೆ ಕೈ ಅಭ್ಯರ್ಥಿ ಅನ್ನಪೂರ್ಣ ಅವರು, ಬಿಜೆಪಿ ಅಭ್ಯರ್ಥಿ ಬ.ಹನುಮಂತು ಅವರಿಗಿಂತ 9645 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

Advertisement

ಆದರೆ, ಚುನಾವಣೆಯಲ್ಲಿ ಬಿಜೆಪಿ ಸೋತರೂ ಕ್ಷೇತ್ರದಲ್ಲಿ ತಮ್ಮ ಮತಗಳ ಗಳಿಕೆಯನ್ನು ಹೆಚ್ವಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next