ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಸಂದೀಪ್ ಭಾರದ್ವಾಜ್ ಅವರು ಪಶ್ಚಿಮ ದಿಲ್ಲಿಯ ರಾಜೌರಿ ಗಾರ್ಡನ್‌ನಲ್ಲಿರುವ ತನ್ನ ನಿವಾಸದಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.
ಭಾರದ್ವಾಜ್ ಸಾವಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ. ಈ ನಡುವೆ ಸಂದೀಪ್ ಭಾರದ್ವಾಜ್ ಅನುಮಾನಾಸ್ಪದ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಪಟ್ಟುಹಿಡಿದಿದೆ.
ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಸ್ಪರ್ದಿಸಲು ಸಂದೀಪ್ ಭಾರದ್ವಾಜ್ ಪ್ರಯತ್ನಗಳನ್ನು ನಡೆಸಿದ್ದರು ಆದರೆ ಪಕ್ಷ ಟಿಕೆಟ್ ನೀಡದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಿಜೆಪಿ ಆಪ್ ವಿರುದ್ಧ ಆರೋಪ ಮಾಡಿತ್ತು, ಆದರೆ ಈ ವಿಚಾರವನ್ನು ತಳ್ಳಿ ಹಾಕಿದ ಆಮ್ ಆದ್ಮಿ ಪಕ್ಷ ಸಂದೀಪ್ ಭಾರದ್ವಾಜ್ ಬಹಳ ಹಿರಿಯ ರಾಜಕಾರಣಿ ಅವರಿಗೆ ಟಿಕೆಟ್ ನಿರಾಕರಿಸಿಲ್ಲ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಪ್ರತಿಕ್ರಿಯೆ ನೀಡಿದೆ.
ಗುರುವಾರ ಸಂಜೆ ರಾಜೌರಿ ಗಾರ್ಡನ್‌ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಂದೀಪ್ ಭಾರದ್ವಾಜ್ ಪತ್ತೆಯಾಗಿದ್ದರೆ ಇದನ್ನು ಕಂಡ ಅವರ ಸ್ನೇಹಿತರು ಕೂಡಲೇ ಆಸ್ಪತ್ರೆಗೆ ಕರೆತಂದರಾದರೂ ಅಷ್ಟೋತ್ತಿಗೆ ಭಾರದ್ವಾಜ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಸಂದೀಪ್ ಭಾರದ್ವಾಜ್ ಅವರು ಆಮ್ ಆದ್ಮಿ ಪಕ್ಷದ ಟ್ರೇಡ್ ವಿಂಗ್‌ನ ಕಾರ್ಯದರ್ಶಿಯಾಗುವುದರ ಜೊತೆಗೆ, ಮಾರ್ಬಲ್ ವ್ಯವಹಾರವನ್ನೂ ನಡೆಸುತ್ತಿದ್ದರು ಎನ್ನಲಾಗಿದೆ.
Related Articles
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ವಾರದೊಳಗೆ 100 ಕೋಟಿ ರೂ.ಕ್ಲಬ್ ಸೇರಿದ ‘ದೃಶ್ಯಂ 2’