Advertisement

ರಕ್ತಚಂದನ ಸಾಗಾಣಿಕೆ: ಆರೋಪಿಗಳ ಬಂಧನ

01:25 PM Sep 18, 2022 | Team Udayavani |

ಶಿಡ್ಲಘಟ್ಟ: ರಕ್ತ ಚಂದನ ಮರದ ತುಂಡನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡುತ್ತಿದ್ದ ಹಾಗೂ ಖರೀದಿಸುತ್ತಿದ್ದ ತಂಡವನ್ನು ಶಿಡ್ಲಘಟ್ಟದ ಪೊಲೀಸರು ಬೇಟೆಯಾಡಿದು, ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 31 ಕೆ.ಜಿ. ತೂಕದ ರಕ್ತ ಚಂದನ ತುಂಡು ಹಾಗೂ ಬೈಕ್‌ ವಶಪಡಿಸಿಕೊಂಡಿದ್ದಾರೆ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಹಳಿಯೂರು ಗ್ರಾಮದ ವಿದ್ಯಾರ್ಥಿ ಲಿಖೀತೌ ಗೌಡ, ಅದೇ ಗ್ರಾಮದ ಕೃಷಿಕ ಭಾಸ್ಕರ್‌ ಗೌಡ, ಗಡ್ಡದನಾಯಕನಹಳ್ಳಿಯ ಗಣೇಶ್‌, ಚಿಕ್ಕಬಳ್ಳಾಪುರ ತಾಲೂಕು ಕೊಂಡೇನಹಳ್ಳಿಯ ಪ್ರವೀಣ್‌ ಹಾಗೂ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಮೂಲದ ವಿಜಯಪುರ ವಾಸಿ ಕೇಶವ ಬಂಧಿತ ಆರೋಪಿಗಳು.

ಬಂಧಿತ ಎಲ್ಲ ಆರೋಪಿಗಳು ಒಬ್ಬೊಬ್ಬರು ಒಂದೊಂದು ಉದ್ಯೋಗದಲ್ಲಿದ್ದು, ಬಹುತೇಕ ಎಲ್ಲರೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲೇ ಇದ್ದಾರೆ. ಸುಲಭವಾಗಿ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ರಕ್ತಚಂದನದ ಕಳ್ಳ ಸಾಗಣೆ, ಮಾರಾಟದ ದಂಧೆಗೆ ಇಳಿದಿದ್ದಾರೆ. ಶಿಡ್ಲಘಟ್ಟ ತಾಲೂಕು ಅಜ್ಜಕದಿರೇನಹಳ್ಳಿಯ ಅರಣ್ಯದಲ್ಲಿನ ರಕ್ತ ಚಂದನದ ತುಂಡನ್ನು ಕತ್ತರಿಸಿಕೊಂಡು ಲಿಖೀತ್‌ಗೌಡ ಹಾಗೂ ಬಾಸ್ಕರ್‌ ಇಬ್ಬರೂ ಬೈಕ್‌ನಲ್ಲಿ ಸಾಗಿಸುವಾಗ ಕರ್ತವ್ಯನಿರತ ಪೊಲೀಸರು ನಗರದ ನ್ಯಾಯಾಲಯದ ಬಳಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಬಳಿಕ ರಕ್ತಚಂದನ ತುಂಡಗಳ ಅಕ್ರಮ ಬಯಲಾಗಿದೆ.

ಪೊಲೀಸರ ಕಾರ್ಯಕ್ಕೆ ಶ್ಲಾಘನೆ: ಸಿಪಿಐ ಬಿ.ಎಸ್‌. ನಂದಕುಮಾರ್‌ ಅವರ ನೇತೃತ್ವದಲ್ಲಿ ಶಿಡ್ಲಘಟ್ಟ ನಗರಠಾಣೆಯ ಎಸೈ ಸುನಿಲ್‌ ಕುಮಾರ್‌, ಪ್ರೊಬೆಷನರಿ ಎಸೈ ಹರೀಶ್‌, ಸಿಬ್ಬಂದಿ ಕಿರಣ್‌, ಹರೀಶ್‌, ಮುರಳಿಕೃಷ್ಣೇಗೌಡ, ನಾರಾಯಣ, ಚಂದ್ರಪ್ಪ ಯಲಿಗಾರ್‌, ಪ್ರವೀಣ್‌ಕುಮಾರ್‌ ಇಂಚೂರ್‌, ತಿಮ್ಮಣ್ಣ ರಾಮಣ್ಣ ಬೂಸರೆಡ್ಡಿ, ಮಂಜುನಾಥ್‌ ಅವರ ತಂಡವನ್ನು ಎಸ್ಪಿ ಡಿ.ಎಲ್‌ .ನಾಗೇಶ್‌ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next