Advertisement

Toxic: ಯಶ್‌ ಜೊತೆ ನಟಿಸಬೇಕೇ? ಇಲ್ಲಿದೆ ಅವಕಾಶ; ʼಟಾಕ್ಸಿಕ್‌ʼಗಾಗಿ ಅಡಿಷನ್‌ ಕರೆದ ಚಿತ್ರತಂಡ

11:09 AM Mar 23, 2024 | Team Udayavani |

ಬೆಂಗಳೂರು: ಗೀತು ಮೋಹನ್‌ ದಾಸ್‌ – ಯಶ್‌ ಅವರ ʼಟಾಕ್ಸಿಕ್‌ʼ ಸಿನಿಮಾ ಪ್ಯಾನ್‌ ಇಂಡಿಯಾದಲ್ಲಿ ಸಟ್ಟೇರುವ ಮುನ್ನವೇ ಸದ್ದು ಮಾಡಿದೆ. ಒಂದಲ್ಲ ಒಂದು ಕಾರಣಕ್ಕೆ ಸಿನಿಮಾ ಸಿನಿವಲಯದಲ್ಲಿ ಸೌಂಡ್‌ ಮಾಡುತ್ತಲೇ ಇದೆ.

Advertisement

ಈಗಾಗಲೇ ಯಶ್‌ ಅವರ ʼಟಾಕ್ಸಿಕ್‌ʼ ಸಿನಿಮಾದಲ್ಲಿನ ಪಾತ್ರವರ್ಗದ ಬಗ್ಗೆ ಸಾಕಷ್ಟು ವಿಚಾರ ಚರ್ಚೆಯಲ್ಲಿದೆ. ಬಿಟೌನ್‌ ನ ಸ್ಟಾರ್‌ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಪಟ್ಟಿಯಲ್ಲಿ ನಟಿ ಕರೀನಾ ಕಪೂರ್‌, ಶ್ರುತಿ ಹಾಸನ್‌ ಹಾಗೂ ಶಾರುಖ್‌ ಖಾನ್‌ ಅವರ ಹೆಸರು ಕೇಳಿ ಬಂದಿದೆ. ಆದರೆ ಯಾವುದು ಕೂಡ ಅಧಿಕೃತವಾಗಿಲ್ಲ. ಈ ನಡುವೆ ʼಟಾಕ್ಸಿಕ್‌ʼ ನಲ್ಲಿ ನಟಿಸಲು ಅಡಿಷನ್‌ ಕರೆಯಲಾಗಿದೆ.

ಒಂದು ವೇಳೆ ನಿಮ್ಮಲ್ಲಿ ಸಿನಿಮಾದಲ್ಲಿ ನಟಿಸುವ ಕನಸುಗಳಿದ್ದರೆ, ಅದಕ್ಕೆ ಕೆವಿಎನ್‌ ಪ್ರೊಡಕ್ಷನ್ಸ್‌ ವೇದಿಕೆ ಕಲ್ಪಿಸಲಿದೆ.

ಯಾರಿಗಿದೆ ಅವಕಾಶ?:

Advertisement

25 ರಿಂದ 75 ವರ್ಷದೊಳಗಿನ ಪುರುಷರು, 12ರಿಂದ 16 ವರ್ಷದೊಳಗಿನ ಮಕ್ಕಳು, 23ರಿಂದ 65 ವರ್ಷದೊಳಗಿನ ವಯಸ್ಸಿನ ಮಹಿಳೆಯರು ಮಾ.25 ರ ಒಳಗೆ ನಿಮ್ಮ ಪರಿಚಯದ  ವಿಡಿಯೋ ಹಾಗೂ ನಿಮ್ಮ ಕಲೆಯ(ಅಭಿನಯ) ಒಂದು ನಿಮಿಷದ ವಿಡಿಯೋವನ್ನು 8618706590 ವಾಟ್ಸಪ್ ಸಂಖ್ಯೆಗೆ ಕಳುಹಿಸಬೇಕು.

ಈ ಹಿಂದೆ ʼಸಲಾರ್‌ʼ ಹಾಗೂ ʼಕೆಜಿಎಫ್‌ -2ʼ ಸಿನಿಮಾಗಳಿಗೆ ಇದೇ ರೀತಿಯ ಅಡಿಷನ್‌ ಕರೆಯಲಾಗಿತ್ತು. ಅದಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next